For Quick Alerts
  ALLOW NOTIFICATIONS  
  For Daily Alerts

  ಒಂದು ಮಿಲಿಯನ್ ಹಿಟ್ಸ್ ಪಡೆದ 'ರತ್ನಮಂಜರಿ' ಹಾಡು

  |

  'ರತ್ನ ಮಂಜರಿ' ಸಿನಿಮಾದ ಹಾಡು ಈಗ ಯೂ ಟ್ಯೂಬ್ ನಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಸಿನಿಮಾದ ''ಬಾರೇ ಸುಂದರಿಯೇ..ಕೊಡಗಿನ ಸಿರಿಯೇ..'' ಹಾಡು ಒಂದು ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.

  ಈ ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಹರ್ಷವರ್ಧನ್ ರಾಜ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಪ್ರಸನ್ನ ಬೋಜಶೇಖರ ಸಾಹಿತ್ಯ ಬರೆದಿದ್ದಾರೆ. ಆನಂದ್ ಆಡಿಯೋದಲ್ಲಿ ಹಾಡು ಬಿಡುಗಡೆಯಾಗಿದೆ.

  ವಿಡಿಯೋ : 'ಅಮರ್' ಚಿತ್ರದ ಅರ್ಮಾನ್ - ಶ್ರೇಯಾ ಹಾಡು ರಿಲೀಸ್

  ಹೊಸ ಚಿತ್ರತಂಡದ ಹಾಡಾಗಿದ್ದರೂ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹಾಡಿಗೆ ಒಂದು ಮಿಲಿಯನ್ ಹಿಟ್ಸ್ ಸಿಕ್ಕಿದೆ. ಹಾಡಿನಲ್ಲಿ ರಾಜ್ ಚೇತನ್ ಮತ್ತು ಅಖಿಲ್ ಡುಯೆಟ್ ಹಾಡಿದ್ದಾರೆ. ತಲಕಾವೇರಿಯಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದ ಒಂದು ಪಾತ್ರದಲ್ಲಿ ನಟಿ ಪಲ್ಲವಿ ರಾಜು ಕಾಣಿಸಿಕೊಂಡಿದ್ದಾರೆ.

  ಪ್ರಸಿದ್ಧ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ನಟರಾಜ್ ಹಳೆಬೀಡು ಹಾಗೂ ಎಸ್ ಸಂದೀಪ್ ಕುಮಾರ್ 'ರತ್ನ ಮಂಜರಿ'ಗೆ ಬಂಡವಾಳ ಹಾಕಿದ್ದಾರೆ.

  'ರತ್ನ ಮಂಜರಿ' ಸಿನಿಮಾ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಈ ಸಿನಿಮಾ ಲವ್ ಸ್ಟೋರಿ ಜೊತೆಗೆ ಹಾರರ್ ಅಂಶಗಳನ್ನು ಹೊಂದಿದೆ.

  English summary
  rathnamanjari kannada movie, baare sundariye songs, rathnamanjari kannada movie release

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X