'ರತ್ನನ್ ಪ್ರಪಂಚ'ದಲ್ಲಿ ಪುನೀತ್ ರಾಜ್‌ಕುಮಾರ್ 'ಗಿಚ್ಚಿ ಗಿಲಿಗಿಲಿ'

ಡಾಲಿ ಧನಂಜಯ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ರತ್ನನ್ ಪ್ರಪಂಚ' ಸಿನಿಮಾ ಅಕ್ಟೋಬರ್ 22 ಕ್ಕೆ ಅಮೆಜಾನ್ ಪ್ರೈಂನಲ್ಲಿ ನೇರವಾಗಿ ಬಿಡುಗಡೆ ಆಗಲಿದೆ.

'ರತ್ನನ್ ಪ್ರಪಂಚ' ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು ಮೆಚ್ಚುಗೆ ಗಳಿಸಿದೆ. ಇದೀಗ ಸಿನಿಮಾದ ಹಾಡೊಂದು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು, ಪುನೀತ್ ರಾಜ್‌ಕುಮಾರ್ ಹಾಡಿರುವ ಈ ಹಾಡು ವೈರಲ್ ಆಗುತ್ತಿದೆ.

ಅಕ್ಟೋಬರ್ 11 ರಂದು ಪುನೀತ್ ಹಾಡಿರುವ ಹಾಡು ಬಿಡುಗಡೆ ಆಗಿದ್ದು, ಉತ್ತರ ಕರ್ನಾಟಕ ಕನ್ನಡ ಶೈಲಿಯಲ್ಲಿರುವ ಹಾಡು ಜೋಶ್‌ಫುಲ್ಲಾಗಿದೆ. ಯುವಕ-ಯುವತಿಯ ನಡುವಿನ ಪ್ರೀತಿಯ ಆಟಗಳನ್ನು ಹೇಳುವ ಹಾಡು ಇದೀಗ ವೈರಲ್ ಆಗಿದೆ.

 Rathnan Prapancha Movie Song Released Sung By Puneeth Rajkumar

'ಗಿಚ್ಚಿ ಗಿಲಿಗಿಲಿ' ಕ್ಯಾಚ್‌ಲೈನ್‌ ಉಳ್ಳ ಹಾಡಿನ ವಿಡಿಯೋದಲ್ಲಿ ಪುನೀತ್ ಜೋಶ್‌ ಭರಿತರಾಗಿ ಹಾಡು ಹಾಡುತ್ತಿರುವ ದೃಶ್ಯಗಳಿವೆ. ಯುವತಿಯೊಬ್ಬಳನ್ನು ಸರಸಕ್ಕೆ ಕರೆಯುವ ಹುಡುಗನ ಹಾಡು ಇದಾಗಿದೆ. ಹಾಡಿನ ವಿಡಿಯೋದಲ್ಲಿ ಮಾತ್ರ ನಟ ಧನಂಜಯ್ ಹುಡುಗಿಯಿಂದ ದೂರ ಓಡುವ ದೃಶ್ಯಗಳಿವೆ.

'ರತ್ನನ್ ಪ್ರಪಂಚ' ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಎ.ಹರ್ಷ 'ಗಿಚ್ಚಿ ಗಿಲಿಗಿಲಿ' ಹಾಡಿನ ನೃತ್ಯ ಸಂಯೋಜನೆ ಮಾಡಿದ್ದಾರೆ. ಹಾಡಿಗೆ ಸಾಹಿತ್ಯ ರಚಿಸಿರುವುದು ಶಿವು ಬೇರ್ಗಿ.

'ರತ್ನನ್ ಪ್ರಪಂಚ' ಸಿನಿಮಾದಲ್ಲಿ ಡಾಲಿ ಧನಂಜಯ್ ಎದುರು ನಾಯಕಿಯಾಗಿ ರೆಬಾ ಮೋನಿಕಾ ಜಾನ್ ನಟಿಸಿದ್ದಾರೆ. ಜೊತೆಗೆ ಉಮಾಶ್ರೀ, ಅನು ಪ್ರಭಾಕರ್, ಅಚ್ಯುತ್ ಕುಮಾರ್, ಶ್ರುತಿ ಕೃಷ್ಣ ಇನ್ನೂ ಹಲವರಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ರೋಹಿತ್ ಪದಕಿ, ನಿರ್ಮಾಣ ಮಾಡಿರುವುದು ಕಾರ್ತಿಕ್ ಮತ್ತು ಯೋಜಿ ಜಿ ರಾಜ್.

ಯುವಕನೊಬ್ಬನ ಜೀವನದಲ್ಲಿ ಆಗುವ ಏರಿಳಿತಗಳು, ಪರಿಸ್ಥಿತಿ ಒತ್ತಡಕ್ಕೆ ಸಿಲುಕಿ ಆತ ಪಡಬೇಕಾದ ಪಾಡು, ಮಾಡಬೇಕಾದ ಪ್ರಯಾಣ, ಪ್ರಯಾಣದಿಂದ ಭೇಟಿಯಾಗುವ ಹೊಸ ಜನ, ಅರಿವ ಸತ್ಯಗಳು ಆ ಮೂಲಕ ಬದಲಾವಣೆ ಆಗುವ ವ್ಯಕ್ತಿತ್ವ ಇಂಥಹಾ ಅಂಶಗಳು ಸಿನಿಮಾ ಒಳಗೊಂಡಿದ್ದು, ಅಮೆಜಾನ್ 22 ಕ್ಕೆ ನೇರವಾಗಿ ಅಮೆಜಾನ್ ಪ್ರೈಂನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

More from Filmibeat

English summary
Dali Dhananjay starer Rathnan Prapancha movie song released which is sung by Puneeth Rajkumar. Movie releasing on October 22 directly to Amazon prime.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X