ತಮ್ಮ ಹಳ್ಳಿಯಲ್ಲೇ ಸುಸಜ್ಜಿತ ಸ್ಟುಡಿಯೋ ಕಟ್ಟಿದ ರವಿ ಬಸ್ರೂರು

ಕೆಜಿಎಫ್ ಸೇರಿದಂತೆ ಹಲವು ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು ತಮ್ಮ ಊರು ಬಸ್ರೂರರನ್ನು ಅತಿಯಾಗಿ ಪ್ರೀತಿಸುತ್ತಾರೆ.

ಉದ್ಯೋಗಕ್ಕಾಗಿ ಹಳ್ಳಿ ತೊರೆದು ಬಂದು, ನಗರದಲ್ಲಿ ದೊಡ್ಡ ಖ್ಯಾತಿ, ಹಣ ಗಳಿಸಿದ ರವಿ ಬಸ್ರೂರು, ತಮ್ಮ ಹಳ್ಳಿಯನ್ನು ನಗರಕ್ಕೆ ಪರಿಚಯಿಸುವ ಮಹತ್ ಕಾರ್ಯ ಮಾಡಿದ್ದಾರೆ.

ತಮ್ಮ ಮೆಚ್ಚಿನ ಊರು ಬಸ್ರೂರಿನಲ್ಲಿ ಸುಸಜ್ಜಿತವಾಗಿ ಮ್ಯೂಸಿಕ್‌ ಸ್ಟುಡಿಯೋ ಒಂದನ್ನು ಕಟ್ಟಿದ್ದಾರೆ ಬಸ್ರೂರು. ಅಲ್ಲಿನಿಂದಲೇ ಕನ್ನಡ, ತೆಲುಗು, ತಮಿಳು ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಊರು ಬಿಟ್ಟು ನಗರ ಸೇರಿ, ಇತ್ತ ಊರಿನ ಮೇಲೆ ಮೋಹ ಬಿಡದೆ, ನಗರದ ಅವಶ್ಯಕತೆ ಬಿಡದೆ ಸಂದಿಗ್ಧದಲ್ಲಿರುವ ಲಕ್ಷಾಂತರ ಮಂದಿಗೆ ಮಾದರಿಯಾಗಿದ್ದಾರೆ.

ಹಳ್ಳಿಯಲ್ಲಿ ಸ್ಟುಡಿಯೋ ಕಟ್ಟಿದ ರವಿ ಬಸ್ರೂರು

ಹಳ್ಳಿಯಲ್ಲಿ ಸ್ಟುಡಿಯೋ ಕಟ್ಟಿದ ರವಿ ಬಸ್ರೂರು

ರವಿ ಬಸ್ರೂರು ಮ್ಯೂಸಿಕ್ ಆಂಡ್ ಮೂವೀಸ್ ಎಂಬ ಸ್ಟುಡಿಯೋವನ್ನು ತಮ್ಮ ಹಳ್ಳಿಯಲ್ಲೇ ಕಟ್ಟಿದ್ದಾರೆ ರವಿ ಬಸ್ರೂರು. ಇನ್ನು ಮುಂದೆ ಅಲ್ಲಿನಿಂದಲೇ ಕೆಲಸ ಮುಂದುವರೆಸಲಿದ್ದಾರೆ ಬಸ್ರೂರು. ಸಂಗೀತದ ಕೆಲಸ ಮಾತ್ರವೇ ಅಲ್ಲದೆ, ಇತರೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಇದೇ ಸ್ಟುಡಿಯೋದಲ್ಲಿ ನಡೆಯಲಿವೆ.

ಸಿನಿಮಾ ನಿರ್ದೇಶಕರೂ ಹೌದು, ರವಿ

ಸಿನಿಮಾ ನಿರ್ದೇಶಕರೂ ಹೌದು, ರವಿ

ಸಂಗೀತ ನಿರ್ದೇಶಕ ಮಾತ್ರವೇ ಅಲ್ಲದೆ ರವಿ ಬಸ್ರೂರು ಅವರು ಸಿನಿಮಾ ನಿರ್ದೇಶಕರೂ ಹೌದು. ಈಗಾಗಲೇ ಗರ್‌ಗರ್‌ ಮಂಡ್ಲ, ಕಟಕ, ಗಿರ್ಮಿಟ್‌ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ರವಿ ಬಸ್ರೂರು. ಇನ್ನು ಮುಂದೆಯೂ ಒಳ್ಳೆಯ ಸಿನಿಮಾಗಳನ್ನು ನಿರ್ದೇಶಿಸುವ ಕನಸಿಟ್ಟುಕೊಂಡಿದ್ದಾರೆ.

ಸಣ್ಣ ವಿಡಿಯೋ ಪ್ರಕಟಿಸಿರುವ ರವಿ ಬಸ್ರೂರು

ಸಣ್ಣ ವಿಡಿಯೋ ಪ್ರಕಟಿಸಿರುವ ರವಿ ಬಸ್ರೂರು

ರವಿ ಬಸ್ರೂರು ಅವರು ತಮ್ಮ ಈ ವರೆಗಿನ ಜೀವನ ಪಯಣವನ್ನು ಸಣ್ಣ ವಿಡಿಯೋ ಮೂಲಕ ಕಟ್ಟಿಕೊಟ್ಟಿದ್ದಾರೆ ಹಳ್ಳಿ ಬಿಟ್ಟು ಹೋಗುವಾಗ, ಹಳ್ಳಿಗೆ ಮಾತು ಕೊಟ್ಟಿದ್ದೆ ವಾಪಸ್ ಬರುತ್ತೇನೆಂದು, ಅಂತೆಯೇ ವಾಪಸ್ ಬಂದಿದ್ದೇನೆ ಎಂದು ವಿಡಿಯೋ ಮೂಲಕ ಹೇಳಿದ್ದಾರೆ ರವಿ ಬಸ್ರೂರು.

ಕೆಜಿಎಫ್2, ಕಬ್ಜ ಸಿನಿಮಾಗಳಲ್ಲಿ ಬ್ಯುಸಿ

ಕೆಜಿಎಫ್2, ಕಬ್ಜ ಸಿನಿಮಾಗಳಲ್ಲಿ ಬ್ಯುಸಿ

ರವಿ ಅವರ ಸ್ಟುಡಿಯೋದಲ್ಲಿ, ಹಿನ್ನೆಲೆ ಸಂಗೀತ, ಡಬ್ಬಿಂಗ್, ಎಡಿಟಿಂಗ್‌ ಇನ್ನೂ ಹಲವು ಕಾರ್ಯಗಳನ್ನು ಮಾಡಲು ವ್ಯವಸ್ಥೆ ಮಾಡಲಾಗಿದೆ. ರವಿ ಬಸ್ರೂರು ಅವರು ಪ್ರಸ್ತುತ, ಕೆಜಿಎಫ್ 2, ಕಬ್ಜ ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದಾರೆ.

More from Filmibeat

English summary
Music director Ravi Basrur constructed a movie studio for post production works in his village Basrur.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X