For Quick Alerts
  ALLOW NOTIFICATIONS  
  For Daily Alerts

  ಅಫ್ಘಾನ್ ಬಿಕ್ಕಟ್ಟು ಕುರಿತು ಚಿತ್ರ: ಬಾಲಿವುಡ್‌ನಲ್ಲಿ ರವಿ ಬಸ್ರೂರ್ ಹವಾ

  |

  ಕೆಜಿಎಫ್ ಚಾಪ್ಟರ್ 1 ಚಿತ್ರದೊಂದಿಗೆ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದರು. ಇವರ ಜೊತೆ ಚಾಪ್ಟರ್ 1ಗೆ ಸಂಗೀತ ನೀಡಿದ ನಿರ್ದೇಶಕ ರವಿ ಬಸ್ರೂರ್ ಸಹ ಖ್ಯಾತಿ ಗಳಿಸಿದರು.

  ಕೆಜಿಎಫ್ ಚಿತ್ರಕ್ಕೂ ಮೊದಲು ಒಳ್ಳೊಳ್ಳೆ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ನೀಡಿದ್ದ ರವಿ ಬಸ್ರೂರ್‌ಗೆ ಯಶ್ ಸಿನಿಮಾ ಪ್ಯಾನ್ ಇಂಡಿಯಾ ಪಟ್ಟ ತಂದು ಕೊಡ್ತು. ಪರಭಾಷೆಯಲ್ಲಿ ಬಸ್ರೂರ್ ಹೆಸರು ಸದ್ದು ಮಾಡಲು ಶುರುವಾಯ್ತು. ಆ ಬಳಿಕ ಕನ್ನಡದ ಜೊತೆ ಜೊತೆಗೆ ತಮಿಳು, ಮಲಯಾಳಂ ಹಾಗೂ ಹಿಂದಿ ಇಂಡಸ್ಟ್ರಿ ಕಡೆಯೂ ರವಿ ಬಸ್ರೂರ್ ಸಂಗೀತ ಜರ್ನಿ ಹೆಜ್ಜೆ ಹಾಕಿದೆ.

  ಬಾಲಿವುಡ್ ಗೆ ಕಾಲಿಟ್ಟ 'ಕೆಜಿಎಫ್' ಸಂಗೀತ ನಿರ್ದೇಶಕ: ಪೋಸ್ಟರ್ ನಲ್ಲಿಲ್ಲ ರವಿ ಬಸ್ರೂರ್ ಹೆಸರು, ಅಭಿಮಾನಿಗಳ ಬೇಸರಬಾಲಿವುಡ್ ಗೆ ಕಾಲಿಟ್ಟ 'ಕೆಜಿಎಫ್' ಸಂಗೀತ ನಿರ್ದೇಶಕ: ಪೋಸ್ಟರ್ ನಲ್ಲಿಲ್ಲ ರವಿ ಬಸ್ರೂರ್ ಹೆಸರು, ಅಭಿಮಾನಿಗಳ ಬೇಸರ

  ಈಗಾಗಲೇ ಹಿಂದಿಯಲ್ಲೊಂದು ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಆದರೆ, ಈ ಸಿನಿಮಾ ಪೋಸ್ಟರ್‌ನಲ್ಲಿ ಬಸ್ರೂರ್ ಹೆಸರು ಹಾಕಿಲ್ಲ ಎಂದು ಸ್ಯಾಂಡಲ್‌ವುಡ್ ಅಭಿಮಾನಿಗಳು ನಿರಾಸೆಯಾಗಿದ್ದರು. ಆ ಸಿನಿಮಾ ಬಿಡುಗಡೆಯಾಗುವುದಕ್ಕೂ ಮೊದಲೇ ಇನ್ನೊಂದು ಬಾಲಿವುಡ್ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಕೊಡ್ತಿದ್ದಾರೆ. ಮುಂದೆ ಓದಿ...

  'ಗರುಡ್' ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ

  'ಗರುಡ್' ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ

  ಜಾನ್ ಅಬ್ರಾಹಂ ನಟನೆಯ 'ಅಟ್ಯಾಕ್' ಚಿತ್ರ ನಿರ್ಮಿಸಿರುವ ಅಜಯ್ ಕಪೂರ್ ಈಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಸುಭಾಷ್ ಕಾಳೆ ಜೊತೆ ಕೈ ಜೋಡಿಸಿರುವ ಅಜಯ್ ಕಪೂರ್ ಅಫ್ಘಾನ್ ಬಿಕ್ಕಟ್ಟು ಕುರಿತು ಸಿನಿಮಾ ಮಾಡಲು ಮುಂದಾಗಿದ್ದು, ಇಂದು ಅಧಿಕೃತವಾಗಿ ಸಿನಿಮಾ ಅನೌನ್ಸ್ ಆಗಿದೆ. ನೈಜ ಘಟನೆಯನ್ನು ಆಧರಿಸಿ ತಯಾರಾಗಿರುವ ಈ ಚಿತ್ರಕ್ಕೆ 'ಗರುಡ್' ಎಂದು ಹೆಸರಿಡಲಾಗಿದೆ. ಕಥೆ-ಪರಿಕಲ್ಪನೆ ಸುಭಾಷ್ ಕಾಳೆ ಹಾಗೂ ನಿಧಿ ಸಿಂಗ್ ಧರ್ಮ ಚಿತ್ರಕಥೆ ರಚಿಸಲಿದ್ದಾರೆ. ಇನ್ನು ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತವಿದೆ ಎಂದು ಪೋಸ್ಟರ್‌ನಲ್ಲಿ ತಿಳಿಸಲಾಗಿದೆ.

  ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆ

  ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆ

  ಈ ಚಿತ್ರಕ್ಕೆ ನಿರ್ದೇಶಕ ಯಾರು ಹಾಗೂ ಕಲಾವಿದರು ಯಾರು ಎನ್ನುವ ವಿಷಯಕ್ಕೆ ಸದ್ಯಕ್ಕೆ ಕುತೂಹಲವಾಗಿ ಉಳಿದುಕೊಂಡಿದೆ. ಅಫ್ಘಾನಿಸ್ತಾನದಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯ ವಿಶೇಷ ಘಟಕವಾದ ಗರುಡ್ ಕಮಾಂಡೋ ಫೋರ್ಸ್‌ನ ಅಧಿಕಾರಿಯ ಕಥೆಯನ್ನು ತೆರೆಮೇಲೆ ತರಲು ಮುಂದಾಗಿದ್ದಾರೆ. ಈ ಬಗ್ಗೆ ಖ್ಯಾತ ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅಫ್ಘಾನ್ ಬಿಕ್ಕಟ್ಟು ಎಂದು ಹೇಳಲಾಗಿದೆ. ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಘಟನೆಗಳಾ ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ.

  ಮಾಲಿವುಡ್ ಗೆ ಕಾಲಿಟ್ಟ ಕನ್ನಡದ ಸಂಗೀತ ನಿರ್ದೇಶಕ.!ಮಾಲಿವುಡ್ ಗೆ ಕಾಲಿಟ್ಟ ಕನ್ನಡದ ಸಂಗೀತ ನಿರ್ದೇಶಕ.!

  ಯುಧ್ರಾ ಚಿತ್ರಕ್ಕೆ ಬಸ್ರೂರ್ ಸಂಗೀತ

  ಯುಧ್ರಾ ಚಿತ್ರಕ್ಕೆ ಬಸ್ರೂರ್ ಸಂಗೀತ

  ಇದಕ್ಕೂ ಮುಂಚೆ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿರುವ ಹಿಂದಿ ಸಿನಿಮಾದ ಹೆಸರು ಯುಧ್ರಾ. 'ಗಲ್ಲಿ ಬಾಯ್' ಸಿನಿಮಾ ಮೂಲಕ ದೇಶದ ಗಮನ ಸೆಳೆದಿದ್ದ ನಟ ಸಿದ್ಧಾರ್ಥ್ ಚತುರ್ವೇದಿ ಮತ್ತು 'ಮಾಸ್ಟರ್' ಸಿನಿಮಾದ ನಾಯಕಿ ಮಾಳವಿಕಾ ಮೋಹನ್ 'ಯುಧ್ರಾ' ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಬಾಲಿವುಡ್ ನಟ ಫರಾನ್ ಅಖ್ತಾರ್ ಮತ್ತು ರಿತೇಶ್ ಸಿಧ್ವಾನಿ ನಿರ್ಮಿಸಿದ್ದಾರೆ. ದಿವಂಗತ ನಟಿ ಶ್ರಿದೇವಿ ನಟನೆಯ 'ಮಾಮ್' ಚಿತ್ರ ನಿರ್ದೇಶಿಸಿದ್ದ ರವಿ ಉದಯವರ್ ಯುಧ್ರಾ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ತಮಿಳು-ಮಲಯಾಳಂನಲ್ಲೂ ಬಸ್ರೂರ್ ಹವಾ

  ತಮಿಳು-ಮಲಯಾಳಂನಲ್ಲೂ ಬಸ್ರೂರ್ ಹವಾ

  ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೂ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಉಪೇಂದ್ರ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'ಗೂ ಬಸ್ರೂರ್ ಸಂಗೀತವಿದೆ. ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಲಾರ್ ಚಿತ್ರಕ್ಕೂ ಬಸ್ರೂರ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಇವುಗಳ ಜೊತೆಗೆ ತುಳು, ತಮಿಳು ಮತ್ತು ಮಲಯಾಳಂ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

  English summary
  KGF Music director Ravi Basrur to direct music for Garud Bollywood Movie based on afghan rescue crisis.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X