twitter
    For Quick Alerts
    ALLOW NOTIFICATIONS  
    For Daily Alerts

    ಮತದಾನ ಮಾಡಿ, ದೇಶದ ಮೇಲೆ ಅಭಿಮಾನ ಇಡಿ: ಯೋಗರಾಜ್ ಭಟ್ ಹೇಳ್ತಾವ್ರೆ ಕೇಳಿ..

    By Harshitha
    |

    ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನ ಹೆಚ್ಚಿಸಲು ಕರ್ನಾಟಕ ಚುನಾವಣಾ ಆಯೋಗಕ್ಕೆ ಹೊಳೆದ ಹೊಸ ಪರಿಕಲ್ಪನೆಯೇ 'ಚುನಾವಣಾ ಗೀತೆ'.

    ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು 'ಚುನಾವಣಾ ಗೀತೆ' ಸಿದ್ಧ ಪಡಿಸಲು ನಿರ್ದೇಶಕ ಯೋಗರಾಜ್ ಭಟ್ ಹಾಗೂ 'ಪಂಚತಂತ್ರ' ಸಿನಿಮಾ ತಂಡವನ್ನ ಕರ್ನಾಟಕ ಚುನಾವಣಾ ಆಯೋಗ ಆಯ್ಕೆ ಮಾಡಿತು.

    ಯೋಗರಾಜ್ ಭಟ್ ಸಾಹಿತ್ಯ, ವಿ.ಹರಿಕೃಷ್ಣ ಸಂಗೀತ ನೀಡಿರುವ 'ಚುನಾವಣಾ ಗೀತೆ' ಇಂದು ಸಂಜೆ 6.30ಕ್ಕೆ ಬಿಡುಗಡೆ ಆಗಲಿದೆ. ವಿಕಾಸ ಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಕೂಡ ಭಾಗವಹಿಸಲಿದ್ದಾರೆ.

    Read the lyrics of Karnataka Elections Anthem

    ವಿಕಾಸ ಸೌಧದಲ್ಲಿ ಬಿಡುಗಡೆ ಆಗಲಿದೆ ಯೋಗರಾಜ್ ಭಟ್ಟರ ಹಾಡುವಿಕಾಸ ಸೌಧದಲ್ಲಿ ಬಿಡುಗಡೆ ಆಗಲಿದೆ ಯೋಗರಾಜ್ ಭಟ್ಟರ ಹಾಡು

    ಅಷ್ಟಕ್ಕೂ, 'ಯಬಡ ತಬಡ' ಸಾಹಿತ್ಯಕ್ಕೆ ಫೇಮಸ್ ಆಗಿರುವ ಯೋಗರಾಜ್ ಭಟ್ರು, 'ಚುನಾವಣಾ ಗೀತೆ'ಯನ್ನ ಹೇಗೆ ಬರೆದಿರಬಹುದು ಎಂಬ ಕುತೂಹಲ ಇರುವವರಿಗೆ ಇದೋ.. ಇಲ್ಲಿದೆ ಭಟ್ರು ಬರೆದಿರುವ 'ಚುನಾವಣೆ ಗೀತೆ'ಯ ಸಾಹಿತ್ಯ....

    ಪಲ್ಲವಿ:

    ನಿನ್ನ ಬೆರಳಲಿ ನಾಡಿನ ಭವಿಷ್ಯ ಅಡಗಿಹುದೂ ಮಹನೀಯ....
    ಶಾಹಿ ಚುಕ್ಕಿಯ ಧರಿಸು ಈ ದಿನ ತಪ್ಪದಲೇ ಮಹರಾಯ....
    ಕರುನಾಡ ನಾಗರಿಕರೆಂದು, ಮತ ನೀಡುವಿಕೆಯಲ್ಲಿ ಮುಂದು
    ಹೆಮ್ಮೆಯಿಂದ ತೋರಿ ನಿಮ್ಮ ತೋರು ಬೆರಳನ್ನಾ....
    ಮಾಡಿ ಮಾಡಿ ಮಾಡಿ ಮತದಾನ
    ಇರಲಿ ದೇಶದ ಮೇಲೆ ಅಭಿಮಾನ!

    ಚರಣ 1 :

    ವೋಟು ನಿನ್ನ ಅಧಿಕಾರ, ನೀನೇ ಆರಿಸು ಸರಕಾರ
    ವೋಟು ನೀಡದೆ ನೀನು ಕುಂತರೆ
    ನಿನಗೆ ನೀನೇ ಮಾಡಿಕೊಳ್ಳುವೆ ಅಪಚಾರ....
    ಅರಸ ಯಾರೇ ಆಗಿರಲಿ, ಅವನು ನಮ್ಮ ಸೇವಕನು
    ಇದನು ಅರಿತರೆ ಜನ್ಮ ಸಾರ್ಥಕ
    ದಾಸನು ಅಲ್ಲ ಇಲ್ಲಿ ಯಾವುದೇ ಮತದಾರ...
    ಹದಿನೆಂಟು ಆದವರೆ ಬನ್ನಿ
    ಯುವಶಕ್ತಿ ತೋರ್ಬೆರಳ ತನ್ನಿ
    ಐದು ಕೋಟಿ ವೋಟು ನೀಡಿ
    ದಾಖಲೆ ಬರೆಯೋಣ....
    ಮಾಡಿ ಮಾಡಿ ಮಾಡಿ ಮತದಾನ
    ಇರಲಿ ದೇಶದ ಮೇಲೆ ಅಭಿಮಾನ
    ಬನ್ನಿ ಹೊರಗೆ ಬೇಡ ಬಿಗುಮಾನ
    ನಾಡು ದೊಡ್ಡದು ಸ್ವಾಮಿ ನಮಗಿನ್ನ

    ಚರಣ 2 :

    ಭ್ರಷ್ಟ ನಾಯಕರ ಹುಟ್ಟಿಗೆ ಕಾರಣ
    ಮತ ನೀಡದ ಪ್ರಜೆಯು...
    ಉತ್ತಮ ರಾಷ್ಟ್ರಕೆ ಕೆಚ್ಚಿನ ಪ್ರಜೆಯೇ
    ಎಂದೆಂದಿಗು ಪ್ರಭುವು.....
    ಬನ್ನಿ ಮನಸು ಮಾಡೋಣ
    ಹೊಸದೇ ಕನಸು ಕಾಣೋಣ
    ಇದು ಕರ್ತವ್ಯ ಇದು ಕರ್ತವ್ಯ
    ರಾಷ್ಟ್ರ ರಚಿಸೋಣ.....
    ಮಾಡಿ ಮಾಡಿ ಮಾಡಿ ಮತದಾನ
    ಇರಲಿ ದೇಶದ ಮೇಲೆ ಅಭಿಮಾನ
    ನಮ್ಮ ವೋಟು ನಮಗೇ ಬಹುಮಾನ
    ತಿರುಗಿ ನೋಡಲಿ ನಮ್ಮನು ಶತಮಾನ..

    - ಯೋಗರಾಜ್ ಭಟ್

    English summary
    Karnataka's first election anthem is set to be launched Today (April 13th). Kannada director Yogaraj Bhat has directed and has penned lyrics for the song while top music director V.Hari Krishna has scored the music. Read the lyrics of Karnataka Elections Anthem
    Friday, April 13, 2018, 16:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X