ಮತ್ತೊಂದು ಗ್ರ್ಯಾಮಿ ಕಡೆಗೆ ಕನ್ನಡಿಗ ರಿಕ್ಕಿ ಕೇಜ್

ಪಂಜಾಬ್‌ ಮೂಲದವರಾದರೂ ಕರ್ನಾಟಕದಲ್ಲಿಯೇ ಬಾಲ್ಯ, ಯೌವ್ವನ ಕಳೆದಿರುವ ಈಗಲೂ ಬೆಂಗಳೂರಿನ ನಿವಾಸಿಯಾಗಿರುವ ರಿಕ್ಕಿ ಕೇಜ್‌ ಮತ್ತೊಂದು ಗ್ರ್ಯಾಮಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಕನ್ನಡದ ಕೆಲವು ಸಿನಿಮಾಗಳಿಗೆ ಸಂಗೀತ ನೀಡಿರುವ ರಿಕ್ಕಿ ಕೇಜ್, ಅದಕ್ಕಿಂತಲೂ ಹೆಚ್ಚು ತಮ್ಮ ಸಿಂಗಲ್ ಆಲ್ಬಂ, ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿಗೆ ನೀಡಿರುವ ಸಂಗೀತದಿಂದ ಹೆಚ್ಚು ಪರಿಚಿತರು. ಈಗಾಗಲೇ ಒಂದು ಗ್ರ್ಯಾಮಿ ಪಡೆದಿರುವ ರಿಕ್ಕಿ, ಇದೀಗ ಮತ್ತೊಂದು ಗ್ರ್ಯಾಮಿಗೆ ನಾಮಿನೇಟ್ ಆಗಿದ್ದಾರೆ.

ರಿಕಿ ಕೇಜ್ ಹಾಗೂ ಜೆಪ್ ಆಸ್ಟರ್ ಒಟ್ಟಿಗೆ ಮಾಡಿರುವ 'ಡಿವೈನ್ ಟೆಡ್ಸ್' ಆಲ್ಬಂಗಾಗಿ ರಿಕ್ಕಿ ಕೇಜ್ ಹಾಗೂ ಸ್ಟಿವರ್ಟ್ ಕೋಪ್ಲ್ಯಾಂಡ್ ಗ್ರ್ಯಾಮಿಗೆ ನಾಮಿನೇಟ್ ಆಗಿದ್ದಾರೆ. 'ಡಿವೈನ್ ಟೆಡ್ಸ್' ವಿಡಿಯೋ ಆಲ್ಬಂ ಈಗಾಗಲೇ ಬಹಳ ಜನಪ್ರಿಯತೆ ಗಳಿಸಿದೆ. ಒಂಬತ್ತು ಹಾಡುಗಳನ್ನು ಈ ವಿಡಿಯೋ ಆಲ್ಬಂ ಹೊಂದಿದ್ದು, ಹಿಮಾಲಯದಿಂದ ಹಿಡಿದು ಫ್ರಾನ್ಸ್‌ನ ಹಿಮಚ್ಛಾಧಿತ ಕಾಡುಗಳ ವರೆಗೆ ಪ್ರಪಂಚದ ಹಲವು ದೇಶದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

Ricky Kej Nominated For Grammy Award For His Divine Tides Album

ರಿಕಿ ಕೇಜ್‌ಗೆ ಗ್ರ್ಯಾಮಿ ಹೊಸತೇನೂ ಅಲ್ಲ 2015 ರಲ್ಲಿ 'ವಿಂಡ್ಸ್ ಆಫ್ ಸಂಸಾರ' ಆಲ್ಬಂಗೆ ರಿಕಿ ಕೇಜ್ ಗ್ರ್ಯಾಮಿ ಪಡೆದಿದ್ದಾರೆ. ಈ ಸಾಧನೆ ಮಾಡಿದ ಕೇವಲ ನಾಲ್ಕನೇ ಭಾರತೀಯ ಹಾಗೂ ಅತ್ಯಂತ ಕಿರಿಯ ಭಾರತೀಯ ಎನಿಸಿಕೊಂಡಿದ್ದಾರೆ ರಿಕಿ. 'ವಿಂಡ್ಸ್ ಆಫ್ ಸಂಸಾರ' ಆಲ್ಬಂ ನೆಲ್ಸನ್ ಮಂಡೇಲ ಹಾಗೂ ಮಹಾತ್ಮಾ ಗಾಂಧಿಯವರ ಆದರ್ಶಗಳಿಂದ ಪ್ರೇರಣೆ ಪಡೆದ ಆಲ್ಬಂ ಆಗಿದೆ.

ಡೇವಿಡ್ ಅಟೆನ್‌ಬರೋ ಹಿನ್ನೆಲೆ ಧ್ವನಿ ನೀಡಿದ್ದ 'ವೈಲ್ಡ್ ಕರ್ನಾಟಕ' ಡಾಕ್ಯುಮೆಂಟರಿಗೆ ಸಂಗೀತ ನೀಡಿದ್ದ ರಿಕ್ಕಿ ಕೇಜ್, 'ಹೂ ಈಸ್ ಬವುಲ್', 'ದಿ ಸೌಂಡ್ ಆಫ್ ನೇಚರ್' ಹಾಗೂ ತಮಿಳುನಾಡಿನ ಪ್ರಕೃತಿ ಸೌಂದರ್ಯ, ಸಂಸ್ಕೃತಿ, ಜನಜೀವನ ಬಿಂಬಿಸುವ ಡಾಕ್ಯುಮೆಂಟರಿ ಸರಣಿ, 'ಡಿಸ್ಕವರಿಂಗ್ ತಮಿಳ್‌ನಾಡು'ಗೆ ಸಂಗೀತ ನೀಡಿದ್ದಾರೆ. ಇದರ ಜೊತೆಗೆ ಕನ್ನಡದಲ್ಲಿ ಮೂರು ಸಿನಿಮಾಗಳಿಗೆ ಸಹ ಸಂಗೀತ ನೀಡಿದ್ದಾರೆ. ರಮೇಶ್ ಅರವಿಂದ್ ನಟನೆಯ, 'ಆಕ್ಸಿಡೆಂಟ್', 'ವೆಂಕಟ ಇನ್ ಸಂಕಟ', 'ಕ್ರೇಜಿ ಕುಟುಂಬ' ರಿಕ್ಕಿ ಸಂಗೀತ ನೀಡಿರುವ ಕನ್ನಡದ ಸಿನಿಮಾಗಳು.

More from Filmibeat

English summary
Musician Ricky Kej nominated for Grammy award for his Divine Tides album along with Stewart Copland.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X