For Quick Alerts
    ALLOW NOTIFICATIONS  
    For Daily Alerts

    'ನೆನಪಿನ ಹುಡುಗಿಯೇ...' ಎನ್ನುತಾ ಬುಲೆಟ್ ಏರಿ ಹೊರಟ 'ಹೀರೋ' ರಿಷಬ್ ಶೆಟ್ಟಿ

    |

    ಸ್ಯಾಂಡಲ್ ವುಡ್ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಸದ್ಯ ಹೀರೋ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿರುವ ಹೀರೋ ಈಗ ಹಾಡಿನ ಮೂಲಕ ಅಭಿಮಾನಿಗಳ ಮನ ತಣಿಸುತ್ತಿದೆ.

    ಹೌದು, ಚಿತ್ರದಿಂದ ರಿಲೀಸ್ ಆಗಿರುವ ಮೊದಲ ಹಾಡು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನೆನಪಿನ ಹುಡುಗಿಯೇ.. ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಕೇಳೋಕೆ ಇಂಪಾಗಿದೆ. ಅಂದಹಾಗೆ ಯೋಗರಾಜ್ ಭಟ್ ಸಾಹಿತ್ಯ ರಚಿಸಿರುವ ಈ ಹಾಡನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ.

    ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹೀರೋ ಸಿನಿಮಾಗೆ ಭರತ್ ರಾಜ್ ಆಕ್ಷನ್ ಕಟ್ ಹೇಳಿದ್ದು, ರಿಷಬ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಸದ್ಯ ರಿಲೀಸ್ ಆಗಿರುವ ಈ ಹಾಡನ್ನು ಯೋಗರಾಜ್ ಭಟ್ ಕೇವಲ 3 ಗಂಟೆಯಲ್ಲಿ ಬರೆದು ಕೊಟ್ಟಿದ್ದಾರಂತೆ. ಈ ಬಗ್ಗೆ ನಟ ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

    ಹಾಡು ಮತ್ತು ಟ್ರೈಲರ್ ಗಳಿಂದ ಗಮನ ಸೆಳೆಯುತ್ತಿರುವ ಹೀರೋ ಸಿನಿಮಾ ಮಾರ್ಚ್ 5ರಂದು ತೆರೆಗೆ ಬರುತ್ತಿದೆ. ರಕ್ತಸಿಕ್ತ ಸಸ್ಪೆನ್ಸ್ ಕತೆ ಇದಾಗಿದ್ದು, ಹೀರೋ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಅಂದಹಾಗೆ ಇಲ್ಲಿ ರಿಷಬ್ ಗೆ ನಾಯಕಿಯಾಗಿ ಗಾನವಿ ಲಕ್ಷ್ಮಣ್ ಕಾಣಿಸಿಕೊಂಡಿದ್ದಾರೆ. ವಿಲನ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಮಿಂಚಿದ್ದಾರೆ.

    English summary
    Rishab Shetty starrer Hero movie song released. This movie is directed by Bharat Raj.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X