ದಾಖಲೆ ಪುಟ ಸೇರಿದ 'ರೌಡಿ ಬೇಬಿ': ದಕ್ಷಿಣ ಭಾರತದಲ್ಲೇ ಮೊದಲ ಹಾಡು!
ತಮಿಳು ನಟ ಧನುಶ್ ಮತ್ತು ಎಕ್ಸ್‌ಪ್ರೆಶನ್ ಕ್ವೀನ್ ಸಾಯಿ ಪಲ್ಲವಿ ನಟನೆಯಲ್ಲಿ ಮೂಡಿ ಬಂದಿದ್ದ 'ರೌಡಿ ಬೇಬಿ' ಹಾಡು ಭಾಷೆಯ ಗಡಿ ಮೀರಿ ಹಿಟ್ ಆಗಿತ್ತು. ತಮಿಳುಗರು ಮಾತ್ರವಲ್ಲದೇ ಎಲ್ಲ ಭಾಷೆಯ ಚಿತ್ರಪ್ರೇಮಿಗಳು ಈ ಹಾಡು ಹಾಗೂ ಬೀಟ್ಸ್‌ಗೆ ಫಿದಾ ಆಗಿದ್ದರು.
'ರೌಡಿ ಬೇಬಿ' ಹಾಡು ಈಗಾಗಲೇ ಹಲವು ದಾಖಲೆಗಳನ್ನು ಬ್ರೇಕ್ ಮಾಡಿದೆ. ಇದೀಗ, ಸೌತ್ ಇಂಡಸ್ಟ್ರಿಯಲ್ಲಿ ಇತಿಹಾಸ ಸೃಷ್ಟಿಸಿರುವ ಮಾರಿ-2 ಚಿತ್ರದ ಈ ಹಾಡು ಒಂದು ಬಿಲಿಯನ್ ವೀಕ್ಷಣೆ ದಾಟಿದೆ. ಈ ರೆಕಾರ್ಡ್ ಮಾಡಿದ ಮೊದಲ ದಕ್ಷಿಣ ಭಾರತ ಹಾಡು ಇದಾಗಿದೆ ಎಂದು ಸ್ವತಃ ಧನುಶ್ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

100 ಕೋಟಿ ವೀಕ್ಷಣೆ ಕಂಡ ರೌಡಿ ಬೇಬಿ
ಜನವರಿ 02, 2019 ರಂದು ಯ್ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ರೌಡಿ ಬೇಬಿ ವಿಡಿಯೋ ಸಾಂಗ್ ಒಂದು ಬಿಲಿಯನ್ ವೀಕ್ಷಣೆ ಕಂಡಿದೆ. ಪ್ರಸ್ತುತ ಈ ಹಾಡಿನ ವೀಕ್ಷಣೆ ನೂರು ಕೋಟಿ (1,000,110,739) ದಾಟಿದೆ. ದಾಖಲೆಗಳ ಪ್ರಕಾರ ನೂರು ಕೋಟಿ ವೀಕ್ಷಣೆ ಕಂಡ ದಕ್ಷಿಣ ಭಾರತದ ಮೊದಲ ಹಾಡು ಇದಾಗಿದೆ.

ಸಂಸತ ವ್ಯಕ್ತಪಡಿಸಿದ ಧನುಶ್
'ಕೊಲವರಿ ಡಿ' ಹಾಡಿನ ಒಂಬತ್ತನೇ ವರ್ಷ ತುಂಬಿದ ದಿನವೇ ರೌಡಿ ಬೇಬಿ ಒಂದು ಬಿಲಿಯನ್ ವೀಕ್ಷಣೆ ಕಂಡಿದೆ. ನಮ್ಮ ಇಡೀ ಚಿತ್ರತಂಡ ಹೃದಯಪೂರ್ವಕವಾಗಿ ಧನ್ಯವಾದ ತಿಳಿಸುತ್ತದೆ. ದಕ್ಷಿಣ ಭಾರತದಲ್ಲಿ ಒಂದು ಬಿಲಿಯನ್ ವೀಕ್ಷಣೆ ಕಂಡ ಮೊದಲ ಹಾಡು ಇದು ಎನ್ನುವುದಕ್ಕೆ ಹೆಮ್ಮೆ ಎನಿಸುತ್ತದೆ'' ಎಂದು ಧನುಶ್ ಟ್ವೀಟ್ ಮಾಡಿದ್ದಾರೆ.

ಸಾಯಿ ಪಲ್ಲವಿ ಖುಷಿ
ರೌಡಿ ಬೇಬಿ ಹಾಡು ಒಂದು ಬಿಲಿಯನ್ ವೀಕ್ಷಣೆ ಕಂಡ ಸಂತಸವನ್ನು ವಂಡರ್‌ಬಾರ್ ಸ್ಟುಡಿಯೋಸ್ ವಿಶೇಷ ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹಂಚಿಕೊಂಡಿದೆ. ನಟಿ ಸಾಯಿ ಪಲ್ಲವಿ ಸಹ ಈ ಕುರಿತು ಟ್ವೀಟ್ ಮಾಡಿದ್ದು, ''ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ'' ತಿಳಿಸಿದ್ದಾರೆ.

ಯುವನ್ ಶಂಕರ್ ರಾಜ ಸಂಗೀತ
ಅಂದ್ಹಾಗೆ, ಈ ಹಾಡಿಗೆ ಸಾಹಿತ್ಯ ರಚಿಸಿರುವುದು ಸ್ವತಃ ಧನುಶ್. ಜೊತೆಗೆ ಹಾಡಿರುವುದು ಸಹ ಅವರೇ. ಧನುಶ್ ಜೊತೆ ದೀಕ್ಷಿತಾ (ಧೀ) ದನಿಗೂಡಿಸಿದ್ದಾರೆ. ಈ ಹಾಡನ್ನು ಪ್ರಭುದೇವ ಕೊರಿಯೋಗ್ರಫ್ ಮಾಡಿದ್ದಾರೆ. ಮಾರಿ 2 ಚಿತ್ರವನ್ನು ಬಾಲಾಜಿ ಮೋಹನ್ ನಿರ್ದೇಶಿಸಿದ್ದ, ಖುದ್ದು ಧನುಶ್ ನಿರ್ಮಿಸಿದ್ದರು.


Click it and Unblock the Notifications











