ಕನ್ನಡ ಗಾಯಕಿ ಅನನ್ಯ ಭಟ್ ಹಾಡು ಕೇಳಿ ಕಣ್ಣೀರು ಹಾಕಿದ ಸದ್ಗುರು
ಕಳೆದ ಶುಕ್ರವಾರ ಈಶ ಫೌಂಡೇಶನ್ ವತಿಯಿಂದ ಸದ್ಗುರು ಜಗ್ಗಿ ವಾಸುದೇವ್ ಶಿವರಾತ್ರಿ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಕನ್ನಡದ ಗಾಯಕಿ ಅನನ್ಯ ಭಟ್ ಸಹ ಭಾಗಿಯಾಗಿದ್ದರು. ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಕಾರ್ಯಕ್ರಮ ನಡೆದಿತ್ತು.
ಸಂಗೀತ ಕಾರ್ಯಕ್ರಮಗಳಿಂದ ಕೂಡಿದ್ದ ವೇದಿಕೆಯಲ್ಲಿ ಕನ್ನಡ ಗಾಯಕಿ ಅನನ್ಯ ಭಟ್ ಹಾಡು ಹಾಡಿದರು. 'ಸೋಜಿಗದ ಸೂಜಿ ಮಲ್ಲಿಗೆ..' ಹಾಡನ್ನು ಜನರ ಮುಂದೆ ಪ್ರಸ್ತುತ ಪಡಿಸಿದರು. ಅನನ್ಯ ಅದ್ಬುತವಾಗಿ ಹಾಡು ಹಾಡಿದ್ದು, ಎಲ್ಲರಿಗೂ ಬಹಳ ಇಷ್ಟವಾಯ್ತು.
ಹಾಡು ಕೇಳುತ್ತಾ ಸದ್ಗುರು ಕಳೆದು ಹೊದರು. ಹಾಡು ಮುಗಿಯುವ ಹೊತ್ತಿಗೆ ಅವರ ಮನ ತುಂಬಿ ಬಂದಿದ್ದು. ಖುಷಿಯಿಂದ ಸದ್ಗುರು ಕಣ್ಣೀರು ಹಾಕಿದರು. ಅನನ್ಯ ಧ್ವನಿಯನ್ನು ಮೆಚ್ಚಿಕೊಂಡರು. ಅಂದಹಾಗೆ, ಅನನ್ಯ ಭಟ್ ಹಾಡಿರುವ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅನನ್ಯ ಭಟ್ 'ಸೋಜಿಗದ ಸೂಜಿ ಮಲ್ಲಿಗೆ..' ಹಾಡಿನ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. 'ಕೆಜಿಎಫ್' ಸೇರಿದಂತೆ ಅನೇಕ ಸಿನಿಮಾ ಹಾಡುಗಳನ್ನೂ ಅನನ್ಯ ಹಾಡಿದ್ದಾರೆ. 'ರಾಮಾ ರಾಮಾ ರೇ' ಸಿನಿಮಾದ 'ನಮ್ಮ ಕಾಯೋ ದೇವರೇ..' ಹಾಡಿಗೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.


Click it and Unblock the Notifications











