ಅಲ್ಲು ಅರ್ಜುನ್ ಸೂಪರ್ ಹಿಟ್ 'ಬುಟ್ಟ ಬೊಮ್ಮ' ಹಾಡಿನ ದಾಖಲೆ ಮುರಿದ ಸಾಯಿ ಪಲ್ಲವಿ ಹೊಸ ಸಾಂಗ್

ತೆಲುಗು ಸಿನಿಮಾರಂಗದಲ್ಲಿ ಕಳೆದ ವರ್ಷ ಸಂಚಲನ ಮೂಡಿಸಿದ್ದ ಹಾಡು ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಠಪುರಂಲೋ ಸಿನಿಮಾದ ಬುಟ್ಟ ಬೊಮ್ಮ ಹಾಡು. ಟಾಲಿವುಡ್ ಮಾತ್ರವಲ್ಲದೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಬೊಟ್ಟ ಬೊಮ್ಮ ಹಾಡು ಕೋಟಿ ಕೋಟಿ ವೀಕ್ಷಣೆ ಕಂಡು ದಾಖಲೆ ನಿರ್ಮಿಸಿತ್ತು.

ಆದರೀಗ ಬೊಟ್ಟ ಬೊಮ್ಮ ಹಾಡಿನ ದಾಖಲೆ ಮುರಿದು ಸಾಯಿ ಪಲ್ಲವಿ ನಟನೆಯ ಸರಂಗ ದರಿಯಾ ಹಾಡು ಮುನ್ನುಗುತ್ತಿದೆ. ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ನಟನೆಯ ಲವ್ ಸ್ಟೋರಿ ಸಿನಿಮಾದ ಸರಂಗ ದರಿಯಾ ಹಾಡು ರಿಲೀಸ್ ಆಗಿ ಅತೀ ಕಡಿಮೆ ಅವಧಿಯಲ್ಲಿ 100 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಸೃಷ್ಟಿಸಿದೆ.

ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ಹಾಡು ಎನ್ನುವ ಹೆಗ್ಗಳಿಗೆ ಪಡೆದಿದೆ. ನಿರ್ದೇಶಕ ಶೇಖರ್ ಕಮ್ಮುಲಾ ಸಾರಥ್ಯದಲ್ಲಿ ಮೂಡಿಬಂದಿರುವ ಸಿನಿಮಾ ಲವ್ ಸ್ಟೋರಿ. ಚಿತ್ರದ ಹಾಡು ಮತ್ತು ಟೀಸರ್ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

Sai Pallavi starrer Saranga Dariya beats Allu Arjuns Botta Bomma song

ಅಲ್ಲು ನಟನೆಯ ಬೊಟ್ಟ ಬೊಮ್ಮ ಹಾಡು ಇದುವರೆಗೂ 90 ಮಿಲಿಯನ್ ವೀಕ್ಷಣೆ ಕಂಡಿದೆ. ಆದರೆ ಸಾರಂಗ ದರಿಯಾ ಹಾಡು ಒಂದು ತಿಂಗಳಲ್ಲಿ 100 ಮಿಲಿಯನ್ ವೀಕ್ಷಣೆ ಕಂಡು ಇನ್ನು ಮುನ್ನುಗುತ್ತಿದೆ.

ಅಂದಹಾಗೆ ಈ ಸೂಪರ್ ಹಿಟ್ ಮಂಗ್ಲಿ ಧ್ವನಿಯಲ್ಲಿ ಮೂಡಿಬಂದಿದೆ. ಮಂಗ್ಲಿ ಧ್ವನಿ, ಸಾಯಿ ಪಲ್ಲವಿ ಡಾನ್ಸ್ ಈ ಹಾಡನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಸದ್ಯ ಈ ಹಾಡಿನ ಲಿರಿಕಲ್ ಹಾಡು ಮಾತ್ರ ರಿಲೀಸ್ ಆಗಿದೆ. ಇನ್ನೂ ವಿಡಿಯೋ ಸಾಂಗ್ ಬಿಡುಗಡೆಯಾದರೆ ಮತ್ತಷ್ಟು ವೀಕ್ಷಣೆ ಕಾಣಲಿದೆ ಎನ್ನುವುದು ಚಿತ್ರತಂಡದ ಲೆಕ್ಕಾಚಾರ.

Sai Pallavi starrer Saranga Dariya beats Allu Arjuns Botta Bomma song

ಅಂದಹಾಗೆ ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿರುವ ಸಾಯಿ ಪಲ್ಲವಿ ಮೊದಲ ಹಾಡು ಇದಲ್ಲ. ಈ ಮೊದಲು ಸಿಂಪಲ್ ಸುಂದರಿ ಸಖತ್ ಹೆಜ್ಜೆ ಹಾಕಿರುವ ರೌಡಿ ಬೇಬಿ ಹಾಡು ಕೋಟಿ ಕೋಟಿ ವೀಕ್ಷಣೆ ಕಂಡು ದಾಖಲೆ ನಿರ್ಮಿಸಿದೆ. ಆ ಹಾಡಿನ ದಾಖಲೆಯನ್ನು ಸರಂಗ ದರಿಯಾ ಹಾಡು ಮುರಿಯುತ್ತಾ ಎಂದು ಕಾದುನೋಡಬೇಕು.

More from Filmibeat

English summary
Sai Pallavi starrer Saranga Dariya beats Allu Arjun's Botta Bomma song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X