ಕೆಜಿಎಫ್ ಮೊದಲ ಹಾಡು ಬಂತು: 'ರಾಕಿ' ಭಾಯ್ ಗೆ ಸಲಾಮ್
Recommended Video

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ನಿರೀಕ್ಷೆಯಂತೆ ಪವರ್ ಫುಲ್ ಆಗಿರುವ ಈ ಹಾಡು ಸಿನಿಮಾ ನೋಡಲೇಬೇಕು ಎಂಬ ಜೋಶ್ ಹೆಚ್ಚಿಸುವಂತಿದೆ.
'ಸಲಾಮ್ ರಾಕಿ ಭಾಯ್....' ಎಂಬ ಹೆಸರಿನ ಈ ಹಾಡು, ಕೆಜಿಎಫ್ ಚಿತ್ರದ ಮತ್ತೊಂದು ಹೈಲೈಟ್. ರವಿ ಬಸ್ರೂರು ಸಂಗೀತ ನೀಡಿರುವ ಈ ಹಾಡಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ.

ಜಾನ್ ಮುಂಬೈ ಕಾ,
ಜಾನ್ ಮುಂಬೈ ಕಾ,
ಜಾನ್ ಮುಬೈ ಕಾ ಜಾನು ರೇ... ಎಂದು ಶುರುವಾಗುವ ಈ ಹಾಡು ಮುಂಬೈ ನೆಟಿವಿಟಿಗೆ ತಕ್ಕಂತೆ ಮಾಡಲಾಗಿದೆ. ಸಾಹಿತ್ಯವೂ ಹಿಂದಿ ಮತ್ತು ಕನ್ನಡ ಮಿಶ್ರಿತವಾಗಿದೆ. ಇದು ಹೀರೋ ಬಿಲ್ಡಪ್ ಸಾಂಗ್ ಆಗಿದ್ದು, ಸಾಹಿತ್ಯಕ್ಕಿಂತ ಹಿನ್ನೆಲೆ ಸಂಗೀತವೇ ಅಬ್ಬರಿಸಿದೆ.
ವಿಜಯ್ ಪ್ರಕಾಶ್, ಸಂತೋಷ್ ವೆಂಕಿ, ಸಚಿನ್ ಬಸ್ರೂರು, ಪುನೀತ್ ರುದ್ರಂಗ, ಮೋಹನ್, ಎಚ್ ಶ್ರೀನಿವಾಸ್ ಮೂರ್ತಿ, ವಿಜಯ್ ಅರಸ್ ಈ ಹಾಡಿಗೆ ಧ್ವನಿಗೂಡಿಸಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ನಿರ್ಮಾಣವಾಗಿರುವ ಬಹುಕೋಟಿ ವೆಚ್ಚದ ಸಿನಿಮಾ ಇದೇ ಡಿಸೆಂಬರ್ 21 ರಂದು ಐದು ಭಾಷೆಗಳಲ್ಲಿ ತೆರೆಕಾಣುತ್ತಿದೆ.


Click it and Unblock the Notifications











