'ಕೋಪ ಸರ್ವನಾಶ ಅಲ್ಲವಾ..?' ಎನ್ನುತ್ತಾ ಮತ್ತೊಂದು ಹಾಡು ಬಿಡುಗಡೆ ಮಾಡಿದ 'ಸಲಾರ್' ತಂಡ

ನಾಳೆ ಡಿಸೆಂಬರ್ 22 ರಂದು ಬಹುನಿರೀಕ್ಷಿತ 'ಸಲಾರ್: ಭಾಗ 1' ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ. ಸಿನಿಮಾ ರಿಲೀಸ್‌ಗೂ ಮುನ್ನ ಸಲಾರ್ ತಂಡ ಚಿತ್ರದ 'ಪ್ರತಿಕಥೆಯ ರಾಕ್ಷಸನು ಹಿಂಸೆಯ ಸಾರುವನು...' ಎಂಬ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. ಉಗ್ರಂ, ಕೆಜಿಎಫ್ ಸಿನಿಮಾಗಳಿಗೆ ಸಂಗೀತ ನೀಡಿದ್ದ ರವಿ ಬಸ್ರೂರ್ ಈ ಸಿನಿಮಾಕ್ಕೂ ಸಂಗೀತ ಸಂಯೋಜಿಸಿದ್ದಾರೆ.

ನಟ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ಸಿನಿಮಾಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದಾರೆ. 'ಸಲಾರ್: ಭಾಗ 1' ತೆಲುಗು, ಹಿಂದಿ, ಮಲಯಾಳಂ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಈ ಎಲ್ಲಾ ಭಾಷೆಗಳಲ್ಲಿ ಎರಡನೇ ಹಾಡು ಬಿಡುಗಡೆಯಾಗಿದೆ. ಇದು ಹೊಡೆದಾಟ ಮತ್ತು ಕ್ಷಮೆಯ ಕುರಿತು ನಮ್ಮನ್ನು ಚಿಂತನೆಗೆ ಹಚ್ಚಲಿದೆ.

Salaar: Part 1 - Ceasefire second single Prathikatheya released

'ಪ್ರತಿಕಥೆಯ ರಾಕ್ಷಸನು ಹಿಂಸೆಯ ಸಾರುವನು...'

ಹೊಸ ಹಾಡು ತೆಲುಗಿನಲ್ಲಿ ಪ್ರತೀಕದಲೋ, ಹಿಂದಿಯಲ್ಲಿ ಕಿಸ್ಸನ್ ಮೇ, ಕನ್ನಡದಲ್ಲಿ ಪ್ರತಿ ಕಥೆಯ, ಮಲಯಾಳಂನಲ್ಲಿ ಪ್ರತೀಕಾರಮೋ ಮತ್ತು ತಮಿಳಿನಲ್ಲಿ ಪಾಲಾ ಕಧೈಯಿಲ್ಲ್ ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಗಿದೆ. ಹಾಡಿನ ಸಾಹಿತ್ಯವನ್ನು ಕೃಷ್ಣಕಾಂತ್ (ಕೆ.ಕೆ), ರಿಯಾ ಮುಖರ್ಜಿ, ರವಿ ಬಸ್ರೂರ್, ರಾಜೀವ್ ಗೋವಿಂದನ್ ಮತ್ತು ಮಧುರಕವಿ ಬರೆದಿದ್ದಾರೆ. ಹಾಡಿನ ಪ್ರತಿ ಆವೃತ್ತಿಯಲ್ಲಿ ಶಾಲೆಯಲ್ಲಿ ಮಕ್ಕಳ ಗುಂಪು ಈ ಹಾಡನ್ನು ಹಾಡುತ್ತಿದೆ.

ಪ್ರತಿಕಥೆಯ.. ಲಿರಿಕಲ್ ವಿಡಿಯೋ

ಈಶ್ವರಿ ರಾವ್ ಅವರ ಪಾತ್ರವು ಅವರ ವಿದ್ಯಾರ್ಥಿಯೊಬ್ಬರಿಗೆ ಅವರು ಕಲಿಸಿದ ಹಾಡು ನೆನಪಿದೆಯೇ ಎಂದು ಕೇಳುವುದರೊಂದಿಗೆ ಹಾಡು ಪ್ರಾರಂಭವಾಗುತ್ತದೆ. ಆತ ಹಾಡಲು ಶುರು ಮಾಡಿದ ಹಾಗೆ ಇತರ ವಿದ್ಯಾರ್ಥಿಗಳು ಸೇರಿಕೊಳ್ಳುತ್ತಾರೆ. ಹಾಡಿನಲ್ಲಿ ಶೃತಿ ಹಾಸನ್ ಶಾಲೆಯಲ್ಲಿ ಇರುವುದು, ಪ್ರಭಾಸ್ ಒಬ್ಬ ಮೆಕ್ಯಾನಿಕ್ ಎಂದು ತೋರಿಸುವ ದೃಶ್ಯಗಳಿವೆ. ಇದರಲ್ಲಿ ಪ್ರಭಾಸ್ ತುಂಬಾ ಚಿಂತೆಯಲ್ಲಿ ಮತ್ತು ನೋವಿನಲ್ಲಿ ಕಳೆದುಹೋಗಿದ್ದಾರೆ.

ಈ ಹಾಡಿನ ಸಾಹಿತ್ಯ, ಒಬ್ಬ ರಾಜ ಹೇಗೆ ಹಿಂಸೆಯನ್ನು ಮಣಿಸಲು ಹೋಗಿ ತಾನೇ ಹಿಂಸಾಪ್ರವೃತ್ತಿಗೆ ಒಳಗಾಗುತ್ತಾನೆ ಎಂಬುನ್ನು, ಕ್ಷಮೆಗಿರುವ ಶಕ್ತಿಯ ಬಗ್ಗೆ ಮಾತನಾಡುತ್ತದೆ. 'ಆ ನೀಚನಾ ಅಂತ್ಯ ಮಾಡೋಕೆ ತಾನೇ ರಕ್ಕಸನಾದ....', ನಿನ್ನೊಪ್ಪು ತಪ್ಪುಗಳ ಸುಳಿಯೋಳಗೆ ಮನ್ನಿಸುವ ಮನಸು ನಿನಗಿರಬೇಕು.... 'ಕೋಪ ಸರ್ವನಾಶ ಅಲ್ಲವಾ..? ಎಂಬ ವಾಕ್ಯಗಳು ನಮ್ಮನ್ನು ಪ್ರಶ್ನೆಗೆ ತಳ್ಳಲಿವೆ.

Salaar: Part 1 - Ceasefire second single Prathikatheya released

ಸಲಾರ್ ಮೊದಲ ಹಾಡು

ಇನ್ನು, ಡಿಸೆಂಬರ್ 13ರಂದು ಸಲಾರ್ ಸಿನಿಮಾದ ಮೊದಲ ಹಾಡು 'ಆಕಾಶ ಗಡಿಯಾ ದಾಟಿ' ಬಿಡುಗಡೆಯಾಗಿತ್ತು. ಇದರಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಪಾತ್ರಗಳಾದ ದೇವ ಮತ್ತು ವರದ ನಡುವಿನ ಸ್ನೇಹಾ, ಸಹೋದರತ್ವವನ್ನು ತೋರಿಸಿತ್ತು. ಹಾಡಿನಲ್ಲಿ ಇಬ್ಬರ ಬಾಲ್ಯದ ಪಯಣವನ್ನು, ಬೆದರಿರುವ ವರದನನ್ನು ತೋರಿಸಲಾಗಿತ್ತು.

ಈ ಹಾಡು ತೆಲುಗಿನಲ್ಲಿ ಸೂರೀಡೆ, ಹಿಂದಿಯಲ್ಲಿ ಸೂರಜ್ ಹಿ ಛಾವ್ ಬಂಕೆ, ಕನ್ನಡದಲ್ಲಿ ಆಕಾಶ ಗಡಿಯಾ ದಾಟಿ, ಮಲಯಾಳಂನಲ್ಲಿ ಸೂರ್ಯಂಗಂ ಮತ್ತು ತಮಿಳಿನಲ್ಲಿ ಸೂರ್ಯನ್ ಕುಡೈಯಾ ನೆಟ್ಟಿ ಎಂದು ಬಿಡುಗಡೆಯಾಗಿತ್ತು.

ಸಲಾರ್ ಸಿನಿಮಾ 2014 ರಲ್ಲಿ ಬಿಡುಗಡೆಯಾದ 'ಉಗ್ರಂ' ಸಿನಿಮಾದ ರಿಮೇಕ್ ಎಂದು ಪ್ರಶಾಂತ್ ನೀಲ್ ಸುಳಿವು ನೀಡಿದ್ದಾರೆ. ಇಬ್ಬರು ಬಾಲ್ಯದ ಗೆಳೆಯರು ಶತ್ರುಗಳಾಗುವ ಕಥೆಯನ್ನು ಚಿತ್ರ ಹೇಳುತ್ತದೆ. ಡಿಸೆಂಬರ್ 22 ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ಸಲಾರ್, ಈ ವಾರಾಂತ್ಯದಲ್ಲಿ ಶಾರುಖ್ ಖಾನ್ ನಟನೆಯ ಡಂಕಿಯೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ಮಾಡಲಿದೆ.

More from Filmibeat

English summary
Salaar: Part 1 - Ceasefire Second Single out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X