ಹಾಲಿವುಡ್‌ ಹಾಡುಗಾರ್ತಿಯರಿಗೆ ಎ.ಆರ್.ರೆಹಮಾನ್ ಜೊತೆ ಕೆಲಸ ಮಾಡುವ ಆಸೆ

ಪಾಪ್ ಹಾಡುಗಾರರಿಗೆ ವಿದೇಶದಲ್ಲಿ ಅದರಲ್ಲೂ ಹಾಲಿವುಡ್ ಹಾಗೂ ಯೂರೋಪ್‌ನಲ್ಲಿ ಭಾರಿ ಬೇಡಿಕೆ. ಸಿನಿಮಾ ನಟ-ನಟಿಯರಿಗಿಂತಲೂ ಹೆಚ್ಚು ಖ್ಯಾತಿ ಹಾಗೂ ಹಣ ಹಾಡುಗಾರರಿಗಿದೆ. ಮೈಕಲ್ ಜಾಕ್ಸನ್, ಜಸ್ಸಟಿನ್ ಬೀಬರ್, ಟೈಲರ್ ಸ್ವಿಫ್ಟ್, ಈಗ ಬಿಟಿಎಸ್ ಇವರೆಲ್ಲರ ಖ್ಯಾತಿ ಹಾಲಿವುಡ್‌ ಸೂಪರ್ ಸ್ಟಾರ್‌ಗೂ ಇಲ್ಲ.

ಹಾಲಿವುಡ್‌ನಲ್ಲಿ ಹಲವಾರು ವಿಶ್ವಪ್ರಸಿದ್ಧ ಹಾಡುಗಾರರಿದ್ದಾರೆ. ಸೆಲೀನಾ ಗೋಮೇಜ್, ಮಡೋನಾ ಹಾಗೂ ಟೈಲರ್ ಸ್ವಿಫ್ಟ್ ಸಹ ಬಹು ದೊಡ್ಡ ಮಟ್ಟದ ಖ್ಯಾತಿ ಪಡೆದವರು. ಅವರ ಒಂದೊಂದು ಆಲ್ಬಂ ಕೋಟಿಗಳ ಲೆಕ್ಕದಲ್ಲಿ ಮಾರಾಟವಾಗುತ್ತದೆ.

ಇಂತಿಪ್ಪ ಈ ಹಾಡುಗಾರ್ತಿಯರಿಗೆ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಜೊತೆಗೆ ಕೆಲಸ ಮಾಡಬೇಕೆಂಬ ಆಸೆಯಂತೆ. ಹೀಗೆಂದು ಇವರುಗಳು ವಿವಿಧ ಸಂದರ್ಭಗಳಲ್ಲಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇವರ ಈ ಹೇಳಿಕೆ ಬಗ್ಗೆ ಎ.ಆರ್.ರೆಹಮಾನ್ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಲೀನಾ ಗೊಮೇಜ್, ಮಡೋನಾಗೆ ರೆಹಮಾನ್ ಇಷ್ಟ

ಸಲೀನಾ ಗೊಮೇಜ್, ಮಡೋನಾಗೆ ರೆಹಮಾನ್ ಇಷ್ಟ

ಭಾರತೀಯ ಮೂಲದ ಅಮೆರಿಕದ ಯೂಟ್ಯೂಬರ್ ಲಿಲ್ಲಿ ಸಿಂಗ್ ಇತ್ತೀಚೆಗೆ ಎ.ಆರ್.ರೆಹಮಾನ್ ಅವರನ್ನು ಆನ್‌ಲೈನ್ ವಿಡಿಯೋ ಸಂದರ್ಶನ ಮಾಡಿದ್ದು, 'ಸೆಲಿನಾ ಗೋಮೇಜ್, ಮಡೋನಾ ಅವರುಗಳು ನಿಮ್ಮೊಂದಿಗೆ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ ನಿಮಗೆ ಇದು ಗೊತ್ತೆ?' ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರತಿ ಬಾರಿ ನನ್ನ ಮ್ಯಾನೇಜರ್ ಅನ್ನು ಕೇಳುತ್ತೇನೆ: ರೆಹಮಾನ್

ಪ್ರತಿ ಬಾರಿ ನನ್ನ ಮ್ಯಾನೇಜರ್ ಅನ್ನು ಕೇಳುತ್ತೇನೆ: ರೆಹಮಾನ್

'ಹೌದು, ನಾನು ಇದನ್ನು ಆಗಾಗ ಕೇಳುತ್ತಲೇ ಇರುತ್ತೇನೆ. ಈ ರೀತಿಯ ಸುದ್ದಿಗಳು ಕಿವಿಗೆ ಬಿದ್ದಾಗಲೆಲ್ಲ ನಾನು ನನ್ನ ಮ್ಯಾನೇಜರ್‌ಗೆ ಕರೆ ಮಾಡಿ ಸೆಲೀನಾ, ಟೈಲರ್ ಸ್ವಿಫ್ಟ್‌, ಮೆಡೋನಾ ಕರೆ ಮಾಡಿದ್ದರಾ ಎಂದು ಕೇಳುತ್ತೇನೆ ಆದರೆ ಆತ ಯಾರೂ ಕರೆ ಮಾಡಿಲ್ಲ ಎನ್ನುತ್ತಾನೆ' ಎಂದು ತಮಾಷೆ ಮಾಡಿದ್ದಾರೆ.

ಈ ಹಾಡುಗಾರ್ತಿಯರನ್ನು ಭೇಟಿಯಾಗಿಲ್ಲ: ರೆಹಮಾನ್

ಈ ಹಾಡುಗಾರ್ತಿಯರನ್ನು ಭೇಟಿಯಾಗಿಲ್ಲ: ರೆಹಮಾನ್

'ಈ ಪ್ರತಿಭಾವಂತ ಹಾಡುಗಾರ್ತಿಯರನ್ನು ನಾನು ಒಮ್ಮೆಯೂ ಭೇಟಿಯಾಗಿಲ್ಲ. ಅವಕಾಶ ನನಗೆ ಸಿಕ್ಕಿಲ್ಲ. ಇದೀಗ ವಿಶ್ವವೇ ಚಿಕ್ಕ ಹಳ್ಳಿಯಾಗಿದೆ. ದೇಶಗಳ ನಡುವೆ ಇರುವ ಗಡಿಗಳು ಸಂಗೀತಕ್ಕೆ ಇಲ್ಲ. ಹಾಗಾಗಿ ಒಬ್ಬರ ಸಂಗೀತವನ್ನು ಮತ್ತೊಬ್ಬರು ಆಸ್ವಾದಿಸುವುದು ಮೆಚ್ಚುವುದು ಸಾಮಾನ್ಯವಾಗಿದೆ. ಇದೊಂದು ಒಳ್ಳೆಯ ಬೆಳವಣಿಗೆ' ಎಂದಿದ್ದಾರೆ ರೆಹಮಾನ್.

ಜೈ ಹೋ -ಜೈ ಹೋ ಎಂದು ಕಿರುಚುತ್ತಾರಾ?: ಲಿಲ್ಲಿ ಪ್ರಶ್ನೆ

ಜೈ ಹೋ -ಜೈ ಹೋ ಎಂದು ಕಿರುಚುತ್ತಾರಾ?: ಲಿಲ್ಲಿ ಪ್ರಶ್ನೆ

'ನೀವು ಅಮೆರಿಕ ಅಥವಾ ಹೊರ ದೇಶಗಳಿಗೆ ಹೋದಾಗ, ನಿಮ್ಮನ್ನು ನೋಡಿದ ಜನ 'ಜೈ ಹೋ, ಜೈ ಹೋ' ಎಂದು ಕಿರುಚಿದ್ದುಂಟಾ? ಆಗೆಲ್ಲ 'ಜೈ ಹೋ' ಬಿಟ್ಟು ಇನ್ನೂ ಹಲವಾರು ಸುಂದರ ಹಾಡುಗಳು ಮಾಡಿದ್ದೇನೆ ಎಂದು ನಿಮಗೆ ಅನಿಸಿದ್ದುಂಟಾ?' ಎಂದು ಲಲ್ಲಿ ಸಿಂಗ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ 'ಹೋ ಸಾಕಷ್ಟು ಜನ ಹಾಗೆ ಮಾಡಿದ್ದಾರೆ ಅದರಿಂದ ನನಗೇನೂ ಬೇಸರವೂ ಆಗಿಲ್ಲ. ಅದು ಅವರವರ ಪ್ರೀತಿ ಅಷ್ಟೆ' ಎಂದಿದ್ದಾರೆ ರೆಹಮಾನ್.

ಆಸ್ಟ್ರೇಲಿಯಾದಲ್ಲಿ ನಡೆದ ಘಟನೆ ನೆನಪು

ಆಸ್ಟ್ರೇಲಿಯಾದಲ್ಲಿ ನಡೆದ ಘಟನೆ ನೆನಪು

'ಒಮ್ಮೆ ಮಾತ್ರ ಬಹಳ ವಿಚಿತ್ರವಾಗಿತ್ತು' ಎಂದು ಸಂದರ್ಭವೊಂದನ್ನು ನೆನಪು ಮಾಡಿಕೊಂಡಿರುವ ರೆಹಮಾನ್, ನಾನು ಒಮ್ಮೆ ಮೆಲ್ಬೋರ್ನ್ ಅಥವಾ ಸಿಡ್ನಿಯ ಸ್ಟೇಷನ್‌ನಲ್ಲಿ ನಿಂತಿದ್ದೆ. ಅಲ್ಲಿ ವ್ಯಕ್ತಿಯೊಬ್ಬ ನನ್ನನ್ನೇ ದುರುಗುಟ್ಟಿಕೊಂಡು ನೋಡಿ 'ನಿಮ್ಮನ್ನು ಎಲ್ಲಿಯೋ ನೋಡಿದ್ದೇನೆ?' ಎಂದು ಹೇಳಿದ. 'ಜೈ ಹೋ ಅಥವಾ ಪುಸ್ಸಿಕ್ಯಾಟ್ ಡಾಲ್ಸ್ ಅಲ್ಲಿ ನೋಡಿರಬೇಕು ಎಂದೆ' ಆದರೆ ಆ ವ್ಯಕ್ತಿ ಇಲ್ಲ ನಿಮ್ಮನ್ನು ಏಕಾನ್ ವಿಡಿಯೋದಲ್ಲಿ ನೋಡಿದ್ದೇನೆ' ಎಂದ. ನಾನು ಏಕಾನ್ ಜೊತೆ ಯಾವುದೋ ಮೇಕಿಂಗ್ ವಿಡಿಯೋದಲ್ಲಿ ಸಣ್ಣ ತುಣುಕಲ್ಲೆ ಕಾಣಿಸಿಕೊಂಡಿದ್ದೇನೆ ಆದರೆ ಆತ ಅದನ್ನೇ ನೆನಪಿಟ್ಟುಕೊಂಡಿದ್ದೇನೆ. ಇಷ್ಟೆಲ್ಲಾ ಕೆಲಸ ಮಾಡಿದ ನಂತರವೂ ನಾನು ಫೇಮಸ್ ಆಗಿದ್ದು ಆ ವಿಡಿಯೋ ಮೂಲಕ ಎಂದು ನಕ್ಕಿದ್ದಾರೆ ರೆಹಮಾನ್.

More from Filmibeat

English summary
Hollywood famous singers Selena Gomez, Madonna, Taylor Swift and many wants to work with AR Rahman.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X