For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಅನ್ನು ಟೀಕಿಸಿದ ನಟಿಗೆ ಸಾಮೂಹಿಕ ಅತ್ಯಾಚಾರ ಬೆದರಿಕೆ!

  |

  ನಟ ಸಲ್ಮಾನ್ ಖಾನ್ ಬಾಲಿವುಡ್‌ ಬ್ಯಾಡ್ ಎಂದೇ ಖ್ಯಾತರು. ತಮ್ಮ ವಿರುದ್ಧ ಹೇಳಿಕೆ ನೀಡಿದವರನ್ನು ಟಾರ್ಗೆಟ್ ಮಾಡುವುದು, ತಮ್ಮ ವಿರುದ್ಧ ಮಾತನಾಡಿದವರಿಗೆ ಸಿನಿಮಾ ಅವಕಾಶ ಸಿಗದಂತೆ ನೋಡಿಕೊಳ್ಳುವುದು ಒಟ್ಟಿನಲ್ಲಿ ಒಂದು ರೀತಿಯ ಗ್ಯಾಂಗ್‌ಸ್ಟರ್ ರೀತಿಯ ವರ್ತನೆ ಅವರದ್ದು.

  ಸಲ್ಮಾನ್ ಖಾನ್ ಮಾತ್ರವಲ್ಲ ಅವರ ಅಭಿಮಾನಿಗಳು ಕೆಲವರದ್ದೂ ಸಹ ಅದೇ ಮಾದರಿಯ ವರ್ತನೆ ಈಗ ತುಸು ಕಡಿಮೆಯಾಗಿದೆಯಾದರೂ ಒಂದು ಸಮಯದಲ್ಲಿ ಸಲ್ಮಾನ್ ಖಾನ್ ರೀತಿಯೇ ಅವರ ಅಭಿಮಾನಿಗಳಿಗೂ ಬ್ಯಾಡ್ ಬಾಯ್‌ಗಳಾಗಿದ್ದರು.

  ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ ಬಂದ ಆಮಿರ್ ಖಾನ್: 25 ಲಕ್ಷ ರೂ. ದೇಣಿಗೆ! ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ ಬಂದ ಆಮಿರ್ ಖಾನ್: 25 ಲಕ್ಷ ರೂ. ದೇಣಿಗೆ!

  ಜನಪ್ರಿಯ ನಟಿಯೂ ಆಗಿರುವ ಗಾಯಕಿಯೊಬ್ಬರು ಸಲ್ಮಾನ್ ಖಾನ್ ಅನ್ನು ಟೀಕಿಸಿದ್ದಕ್ಕೆ ಅವರಿಗೆ ಸಾಮೂಹಿಕ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ ಘಟನೆ ಸಹ ನಡೆದಿತ್ತು. ಈ ವಿಷಯವನ್ನು ಸ್ವತಃ ಆ ಗಾಯಕಿಯೇ ಹಾಗೂ ಮಾಧ್ಯಮಗಳ ಬಳಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ.

  ಸಾಮೂಹಿಕ ಅತ್ಯಾಚಾರ ಬೆದರಿಕೆ

  ಸಾಮೂಹಿಕ ಅತ್ಯಾಚಾರ ಬೆದರಿಕೆ

  ಗಾಯಕಿ ಸೋನಾ ಮಹಾಪಾತ್ರ ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಅನ್ನು ಟೀಕಿಸಿದ್ದರು. ಇದರ ಬೆನ್ನಲ್ಲೆ ಸಲ್ಮಾನ್ ಖಾನ್ ಅಭಿಮಾನಿಗಳು ಸೋನಾ ಮಹಾಪಾತ್ರಗೆ ಸಾಮೂಹಿಕ ಅತ್ಯಾಚಾರದ ಬೆದರಿಕೆ ಹಾಕಿದ್ದರು. ಈ ಬಗ್ಗೆ ಇತ್ತೀಚೆಗೆ ಮಾತನಾಡಿರುವ ಸೋನಾ ಮಹಾಪಾತ್ರ, ''ನನ್ನ ಹೇಳಿಕೆ ಬಳಿಕ ತೀರ ಕೆಟ್ಟದಾಗಿ ನನ್ನನ್ನು ಟ್ರೋಲ್ ಮಾಡಲಾಯ್ತು, ಕೊಲೆ ಬೆದರಿಕೆ ಸಾಮೂಹಿಕ ಅತ್ಯಾಚಾರ ಬೆದರಿಕೆ ಹಾಕಲಾಯಿತು'' ಎಂದಿದ್ದಾರೆ.

  ಲಂಚ್‌ಬಾಕ್ಸ್‌ನಲ್ಲಿ ಮಲ ತುಂಬಿ ಕಳಿಸಿದ್ದರು: ಸೋನಾ

  ಲಂಚ್‌ಬಾಕ್ಸ್‌ನಲ್ಲಿ ಮಲ ತುಂಬಿ ಕಳಿಸಿದ್ದರು: ಸೋನಾ

  ''ಅವರು (ಸಲ್ಮಾನ್ ಖಾನ್ ಅಭಿಮಾನಿಗಳು) ನನ್ನನ್ನು ಇನ್ನಿಲ್ಲದಂತೆ ಕಾಡಿದರು. ನನ್ನ ಸ್ಟುಡಿಯೋಗೆ ಮಲ ತುಂಬಿದ ಡಬ್ಬಾಗಳನ್ನು ಪಾರ್ಸೆಲ್ ಕಳಿಸಿದ್ದರು. ನನ್ನ ಇನ್‌ಬಾಕ್ಸ್ ಅಂತೂ ಬೆದರಿಕೆ ಸಂದೇಶಗಳಿಂದ ತುಂಬಿ ಹೋಗಿತ್ತು. ಇದು ಸತತ ಎರಡು ತಿಂಗಳ ವರಗೆ ನಡೆಯಿತು. ನನ್ನ ಮುಖದ ಚಿತ್ರವನ್ನು ಪೋರ್ಸ್ ನಟಿಯರ ಮುಖಕ್ಕೆ ಅಂಟಿಸಿ ಟ್ರೋಲ್ ಮಾಡಲಾಯ್ತು. ಸಲ್ಮಾನ್ ಖಾನ್ ನಿಜ ಬಣ್ಣ ಬಯಲು ಮಾಡಿದ್ದಕ್ಕೆ ನಾನು ಇಂಥಹುವನ್ನೆಲ್ಲ ಎದುರಿಸಬೇಕಾಯ್ತು'' ಎಂದಿದ್ದಾರೆ ಗಾಯಕಿ ಕಮ್ ನಟಿ ಸೋನಾ ಮೊಹಾಪಾತ್ರ.

  ಪ್ರಿಯಾಂಕಾ ಚೋಪ್ರಾ ಬಗ್ಗೆ ಮಾತನಾಡಿದ್ದ ಸಲ್ಮಾನ್

  ಪ್ರಿಯಾಂಕಾ ಚೋಪ್ರಾ ಬಗ್ಗೆ ಮಾತನಾಡಿದ್ದ ಸಲ್ಮಾನ್

  ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ತಮ್ಮ 'ಭಾರತ್' ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸದೇ ಇದ್ದುದರ ಬಗ್ಗೆ ಮಾತನಾಡಿ, ನಿಕ್ ಜೋನಸ್ ಅನ್ನು ಮದುವೆಯಾಗಲು, ನಮ್ಮ ಸಿನಿಮಾ ಬಿಟ್ಟು ಹೊರಟು ಹೋದಳು ಪ್ರಿಯಾಂಕಾ, ಇಂಥಹಾ ಸಿನಿಮಾದಲ್ಲಿ ನಟಿಸಲು ನಟಿಯರು ತಮ್ಮ ಗಂಡಂದಿರನ್ನೇ ಬಿಡುತ್ತಾರೆ ಆದರೆ ಪ್ರಿಯಾಂಕಾ ನಮ್ಮ ಸಿನಿಮಾವನ್ನೇ ಬಿಟ್ಟಳು'' ಎಂದು ತಮಾಷೆಯಾಗಿ ಹೇಳಿದ್ದರು ಸಲ್ಮಾನ್ ಖಾನ್. ಆದರೆ ಇದನ್ನು ಗಂಭೀರವಾಗಿ ತೆಗೆದುಕೊಂಡ ಸೋನಾ ಮೊಹಾಪಾತ್ರ, ಸಲ್ಮಾನ್ ಖಾನ್ ಒಬ್ಬ ಸ್ತ್ರೀ ದ್ವೇಷಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಪ್ರಿಯಾಂಕಾ, ಸಲ್ಮಾನ್‌ರ ಸಿನಿಮಾ ಬಿಟ್ಟಿದ್ದು ಒಳ್ಳೆಯದಾಯಿತು ಎಂದಿದ್ದರು.

  ಗಾಯಕ ಕೈಲಾಶ್ ಖೇರ್

  ಗಾಯಕ ಕೈಲಾಶ್ ಖೇರ್

  ಸೋನಾ ಮೊಹಾಪಾತ್ರ ಬಾಲಿವುಡ್‌ನ ಜನಪ್ರಿಯ ಗಾಯಕಿಯರಲ್ಲಿ ಒಬ್ಬರಾಗಿದ್ದಾರೆ. ಹಲವು ವಿಡಿಯೋ, ಆಲ್ಬಂ ಹಾಡುಗಳಲ್ಲಿ ಸಹ ಸೋನಾ ಕಾಣಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ರಾಮ್ ಸಂಪತ್ ಪತ್ನಿಯಾಗಿರುವ ಸೋನಾ, 2018 ರಲ್ಲಿ ಗಾಯಕ ಕೈಲಾಶ್ ಖೇರ್ ಹಾಗೂ ಸಂಗೀತ ನಿರ್ದೇಶಕ ಅನು ಮಲ್ಲಿಕ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು.

  English summary
  Singer and actor Sona Mohapatra said Salman Khan fans trolled her badely. She critized Salman Khan recently.
  Wednesday, June 29, 2022, 14:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X