ಸಲ್ಮಾನ್ ಖಾನ್ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ರವಿಬಸ್ರೂರು ಸಂಗೀತದ 'ಬತುಕಮ್ಮ' ಸಾಂಗ್ ಯಾಕೆ?

ಬಾಲಿವುಡ್‌ ಸೂಪರ್‌ ಸ್ಟಾರ್‌ಗಳು ಯಾಕೋ ಸೈಲೆಂಟ್ ಆಗಿಬಿಟ್ಟಿದ್ದಾರೆ. ಇತ್ತೀಚೆಗೆ 'ಪಠಾಣ್' ಆಗಿ ಶಾರುಕ್ ಖಾನ್ ಗೆದ್ದಿದ್ದಾರೆ. ಇನ್ನುಳಿದಂತೆ ಸ್ಟಾರ್ ನಟರ ಸಿನಿಮಾಗಳೇ ಸದ್ದು ಮಾಡ್ತಿಲ್ಲ. ಬಾಲಿವುಡ್ ಬಾಕ್ಸಾಫೀಸ್‌ ಸುಲ್ತಾನ್‌ಗೂ ಈಗ ಗೆಲುವು ಮರೀಚಿಕೆಯಾಗಿದೆ. ಅದೇ ಕಾರಣಕ್ಕೆ ಏನೇನೋ ಪ್ರಯೋಗ ಮಾಡುತ್ತಿದ್ದಾರೆ. ಸಲ್ಲುಮಿಯಾ ಮುಂದಿನ ಚಿತ್ರಕ್ಕೆ ತೆಲುಗು ಸಾಂಗ್ ಇದೆ.

ಸಲ್ಮಾನ್ ಖಾನ್ ತಮಿಳಿನ 'ವೀರಂ' ಸಿನಿಮಾ ಚಿತ್ರದಲ್ಲಿ ನಟಿಸ್ತಿರೋದು ಗೊತ್ತೇಯಿದೆ. ಚಿತ್ರಕ್ಕೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಎನ್ನುವ ಟೈಟಲ್ ಇಟ್ಟಿದ್ದು ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ಚಿತ್ರದಲ್ಲಿ ಸಲ್ಲು 4 ಜನ ಸಹೋದರರ ಅಣ್ಣನಾಗಿ ಬಣ್ಣ ಹಚ್ಚಿದ್ದಾರೆ. ಸದ್ಯ ಚಿತ್ರದ ಒಂದೊಂದೇ ಸಾಂಗ್‌ ರಿಲೀಸ್ ಆಗ್ತಿದೆ. ಈಗ 'ಬತುಕಮ್ಮ' ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಅರೇ ಸಲ್ಲು ಚಿತ್ರಕ್ಕೂ 'ಬತುಕಮ್ಮ' ಸಾಂಗ್‌ಗೂ ಎಲ್ಲಿಂದ ಎಲ್ಲಿಯ ಸಂಬಂಧ ಎನ್ನುವ ಪ್ರಶ್ನೆ ಏಳುವುದು ಸಹಜ.

Salman Khans Kisi Ka Bhai Kisi Ki Jaan 4th Song Bathukamma Released

ತೆಲಂಗಾಣ ಸಾಂಪ್ರದಾಯ ಜನಪದ ಹಾಡು 'ಬತುಕಮ್ಮ' ಈಗ ಬಾಲಿವುಡ್ ಸೇರಿದೆ. ತೆಲಂಗಾಣದಲ್ಲಿ 'ಬತುಕಮ್ಮ' ಹಬ್ಬ ಜೋರಾಗಿರುತ್ತದೆ. 9 ದಿನಗಳ ಕಾಲ ಈ ಹಬ್ಬ ನಡೆಯುತ್ತೆ. ಇದೀಗ 'ಬತುಕಮ್ಮ' ಕ್ರೇಜ್ ಚಿತ್ರರಂಗಕ್ಕೂ ಬಂದಿದೆ. ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಹಿಂದಿ ಚಿತ್ರದಲ್ಲಿ ಈ ಹಾಡನ್ನು, ಈ ಹಬ್ಬದ ಸಂಭ್ರಮವನ್ನು ತೋರಿಸಲಾಗಿದೆ. ಚಿತ್ರದಲ್ಲಿ ತೆಲುಗಿನಲ್ಲೇ ಈ ಹಾಡನ್ನು ಬಳಸಿಕೊಂಡಿರುವಂತೆ ಕಾಣುತ್ತಿದೆ.

Salman Khans Kisi Ka Bhai Kisi Ki Jaan 4th Song Bathukamma Released

ತೆಲಂಗಾಣ ಹಿನ್ನಲೆಯನ್ನು ಬರುವ ಸನ್ನಿವೇಶದಲ್ಲಿ ಈ ಸಾಂಗ್ ಮೂಡಿ ಬರಲಿದೆ. ತೆಲುಗು ನಟ ವಿಕ್ಟರಿ ವೆಂಕಟೇಶ್ ಕೂಡ ಈ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು ಹಾಡಿನಲ್ಲಿ ವೆಂಕಿನ ನೋಡಬಹುದು. ಹಾಡಿನಲ್ಲಿ ನಾಯಕಿ ಪೂಜಾ ಲಂಗಾ ದಾವಣಿಯಲ್ಲಿ ಮಿಂಚಿದ್ರೆ, ಸಲ್ಮಾನ್ ಖಾನ್ ಶರ್ಟು ಪಂಚೆ, ಶಲ್ಯದಲ್ಲಿ ದರ್ಶನ ಕೊಟ್ಟಿದ್ದಾರೆ. ಅರ್ಧ ಹಾಡು ತೆಲುಗು, ಇನ್ನರ್ಧ ಹಿಂದಿಯಲ್ಲಿ ಇರುವಂತೆ ಕಾಣ್ತಿದೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದು, ಶಬ್ಬೀರ್ ಅಹಮದ್ ಜೊತೆ ಸೇರಿ ಹಿಂದಿ ಲಿರಿಕ್ಸ್ ಸಹ ಬರೆದಿದ್ದಾರೆ.

ಕಿನ್ನಲ್ ರಾಜ್ ಹಾಗೂ ಹರಿಣಿ ಇವತ್ತುರಿ ತೆಲುಗು ಸಾಹಿತ್ಯ ಗೀಚಿದ್ದಾರೆ. ಐರಾ ಉಡುಪಿ, ಸಂತೋಷ್ ವೆಂಕಿ, ಮನೀಶ್ ದಿನಕರ್ ಹಾಡು ಹಾಡಿದ್ದಾರೆ. ಬಹಳ ಅದ್ಧೂರಿಯಾಗಿ ಸಾಂಗ್ ಶೂಟಿಂಗ್ ಮಾಡಿದ್ದಾರೆ. ಕಾಮಿಡಿ, ಆಕ್ಷನ್, ಎಮೋಷನ್ ಎಲ್ಲವನ್ನು ಸೇರಿಸಿ ಮಾಡಿದ್ದ 'ವೀರಂ' ಸಿನಿಮಾ ತಮಿಳಿನಲ್ಲಿ ಸೂಪರ್ ಹಿಟ್ ಆಗಿತ್ತು. ಕನ್ನಡ ಹಾಗೂ ತೆಲುಗಿನಲ್ಲಿ ರೀಮೆಕ್ ಆಗಿದ್ದ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಇದೀಗ ಬಾಲಿವುಡ್ ನೇಟಿವಿಟಿಗೆ ಬೇಕಾದಂತೆ ಬದಲಿಸಿಕೊಂಡು ಸಿನಿಮಾ ಮಾಡಲಾಗಿದೆ.

ಜಗಪತಿ ಬಾಬು, ಜೆಸ್ಸಿ ಗಿಲ್, ರಾಘವ್ ಜುಯಲ್, ಸಿದ್ದಾರ್ಥ ನಿಗಂ, ಭೂಮಿಕಾ ಚಾವ್ಲಾ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ತಾರಾಗಣದಲ್ಲಿದ್ದಾರೆ. ಸಾಂಗ್ ಒಂದರಲ್ಲಿ ರಾಮ್‌ ಚರಣ್ ಕೂಡ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಸಲ್ಮಾನ್ ಖಾನ್ ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಿದ್ದು ಫರ್ಹಾದ್ ಸಮ್ಜಿ ಆಕ್ಷನ್ ಕಟ್ ಹೇಳಿದ್ದಾರೆ. 7 ಜನ ಸಂಗೀತ ನಿರ್ದೇಶಕರು ಸಾಂಗ್ಸ್‌ಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಒಂದೊಂದೇ ಸಾಂಗ್ ರಿಲೀಸ್ ಮಾಡಿ ಸಿನಿಮಾ ಬಗ್ಗೆ ಕುತೂಹಲ ಕೆರಳಿಸ್ತಿದೆ ಚಿತ್ರತಂಡ.

ಏಪ್ರಿಲ್ 21ಕ್ಕೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಸೋಲಿನಿಂದ ಕಂಗೆಟ್ಟ ಬಾಲಿವುಡ್‌ಹೆ ಗೆಲುವಿನ ಅವಶ್ಯಕತೆ ಇದೆ. ರೀಮೆಕ್ ಸಿನಿಮಾ ಆದರೂ ಸಲ್ಲು ತಮ್ಮ ವಿಭಿನ್ ಅಭಿನಯದಿಂದ ಗೆಲ್ಲುವ ಸಾಧ್ಯತೆಯಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್ ಪ್ಲ್ಯಾನ್ ಮಾಡಲಾಗುತ್ತಿದೆ. ವಿಶ್ವದಾದ್ಯಂತ ಏಕಕಾಲಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.

More from Filmibeat

English summary
Salman Khan's Kisi Ka Bhai Kisi Ki Jaan 4th Song Bathukamma Released. movie is scheduled for release on 21 April 2023. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X