ಅಲ್ಲು ಅರ್ಜುನ್ ಸಿನಿಮಾದ ಹಾಡು ಕದ್ದ ಸಲ್ಮಾನ್ ಖಾನ್: ಯಾವುದು ಆ ಹಾಡು?

ನಟ ಸಲ್ಮಾನ್ ಖಾನ್ ಅಭಿನಯದ 'ರಾಧೆ' ಸಿನಿಮಾದ ಟ್ರೇಲರ್ ಇಂದಷ್ಟೆ ಯುಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ಸದ್ದು ಮಾಡುತ್ತಿದೆ.

ಉದ್ದವಾದ ಟ್ರೇಲರ್‌ನಲ್ಲಿ ಹಲವು ಆಕ್ಷನ್ ದೃಶ್ಯಗಳು ಸಲ್ಮಾನ್ ಅವರ ಖಡಕ್ ಡೈಲಾಗ್‌ಗಳು, ಹಾಸ್ಯದ ತುಣುಕುಗಳು ಜೊತೆಗೆ ಹಾಡುಗಳ ಝಲಕ್ ಅನ್ನು ತೋರಿಸಲಾಗಿದೆ.

ಟ್ರೇಲರ್‌ನಲ್ಲಿರುವ 'ಸೀಟಿಮಾರ್' ಹಾಡನ್ನು ಕೇಳಿದವರಿಗೆ 'ಈ ಹಾಡನ್ನು ಎಲ್ಲೋ ಕೇಳಿದಂತಿದೆಯಲ್ಲ?' ಎಂಬ ಅನುಮಾನ ಮೂಡುತ್ತಿದೆ. ಹೌದು, ತೆಲುಗಿನಲ್ಲಿ ಇದೇ ಧಾಟಿಯ ಹಾಡಿಗೆ ಅಲ್ಲು ಅರ್ಜುನ್ ಕುಣಿದಿದ್ದರು.

 Salman Khan Stole Allu Arjun Movie Song In Radhe

ಅಲ್ಲು ಅರ್ಜುನ್ ನಟಿಸಿರುವ 'ದುವ್ವಾಡ ಜಗನ್ನಾಥ' ಸಿನಿಮಾದಲ್ಲಿ 'ಸೀಟಿಮಾರ್' ಎಂಬ ಮಾಸ್ ಹಾಡೊಂದಿದೆ. ಅದೇ ಮಾದರಿಯ ಹಾಡು 'ರಾಧೆ' ಸಿನಿಮಾದಲ್ಲಿಯೂ ಇದೆ. ಅಲ್ಲು ಅರ್ಜುನ್ ಸಿನಿಮಾದ ಹಾಡನ್ನು 'ರಾಧೆ' ಸಿನಿಮಾಕ್ಕಾಗಿ ಯಥಾವತ್ತು ಭಟ್ಟಿ ಇಳಿಸಲಾಗಿದೆ.

ಅಲ್ಲು ಅರ್ಜುನ್ ಸಿನಿಮಾದಲ್ಲಿದ್ದ ಹಾಡಿನ ಧಾಟಿಯಲ್ಲಿಯೇ ಅದೇ ಸಂಗೀತದಲ್ಲಿಯೇ 'ರಾಧೆ' ಸಿನಿಮಾದ ಹಾಡನ್ನು ಮಾಡಲಾಗಿರುವುದು ಟ್ರೇಲರ್‌ನಲ್ಲಿ ಗೊತ್ತಾಗುತ್ತಿದೆ.

ಅಲ್ಲು ಅರ್ಜುನ್ ನಟಿಸಿದ್ದ 'ದುವ್ವಾಡ ಜಗನ್ನಾಥ' ಸಿನಿಮಾಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದರು. ಆ ಸಿನಿಮಾದ 'ಸೀಟಿಮಾರ್' ಸಿನಿಮಾ ಸಖತ್ ಹಿಟ್ ಆಗಿತ್ತು. ಈಗ ಅದೇ ಹಾಡನ್ನು 'ರಾಧೆ' ಸಿನಿಮಾಕ್ಕೆ ಬಳಸಿಕೊಳ್ಳಲಾಗಿದ್ದು, ಸಿನಿಮಾದ ಹಾಡುಗಳಿಗೆ ಸಂಗೀತ ನೀಡಿದವರ ಪಟ್ಟಿಯಲ್ಲಿ ದೇವಿ ಶ್ರೀ ಪ್ರಸಾದ್ ಹೆಸರೂ ಸಹ ಇದೆ.

ಸಲ್ಮಾನ್ ಖಾನ್ ಹಲವಾರು ದಕ್ಷಿಣ ಭಾರತದ ಸೂಪರ್ ಹಿಟ್ ಸಿನಿಮಾಗಳನ್ನು ಹಿಂದಿಗೆ ರೀಮೇಕ್ ಮಾಡಿ ಹಿಟ್ ಪಡೆದಿದ್ದಾರೆ. ತಮಿಳಿನ ಸೇತು, ತೆಲುಗಿನ ಪೋಕಿರಿ, ಸ್ಟಾಲಿನ್, ರೆಡಿ, ಕಿಕ್ ಇನ್ನೂ ಹಲವು ಸಿನಿಮಾಗಳ ಹಿಂದಿ ರೀಮೇಕ್‌ನಲ್ಲಿ ಸಲ್ಮಾನ್ ನಟಿಸಿದ್ದಾರೆ. ಇದೀಗ 'ರಾಧೆ' ಸಿನಿಮಾ ಸಹ ತೆಲುಗು ಸಿನಿಮಾದ ರೀಮೇಕ್ ಎನ್ನಲಾಗುತ್ತಿದೆ ಆದರೆ ಆ ಬಗ್ಗೆ ಚಿತ್ರತಂಡ ಅಧಿಕೃತ ಹೇಳಿಕೆ ನೀಡಿಲ್ಲ. ಸಿನಿಮಾ ಬಿಡುಗಡೆ ಆದ ಬಳಿಕವಷ್ಟೆ ಈ ಬಗ್ಗೆ ಗೊತ್ತಾಗಲಿದೆ. 'ರಾಧೆ' ಸಿನಿಮಾವನ್ನು ನಟ, ನೃತ್ಯ ನಿರ್ದೇಶಕ ಪ್ರಭುದೇವಾ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Salman Khan stole Allu Arjun movie song for his movie Radhe. Duvvada Jagannatha movie song Seeti mar copied in Radhe movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X