For Quick Alerts
  ALLOW NOTIFICATIONS  
  For Daily Alerts

  'ಪುಷ್ಪ' ಸಿನಿಮಾದಿಂದ ಅಚ್ಚರಿ ಸುದ್ದಿ: ನಟಿ ಸಮಂತಾ ಎಂಟ್ರಿ

  |

  'ಪುಷ್ಪ' ಸಿನಿಮಾವು ಕುತೂಹಲಭರಿತ ಅಪ್‌ಡೇಟ್‌ಗಳ ಮೇಲೆ ಅಪ್‌ಡೇಟ್‌ಗಳನ್ನು ನೀಡುತ್ತಲೇ ಬರುತ್ತಿದೆ. ಇದೀಗ ಹೊರಬಿದ್ದಿರುವ ಹೊಸ ಸುದ್ದಿಯೆಂದರೆ 'ಪುಷ್ಪ' ಸಿನಿಮಾದಲ್ಲಿ ಸಮಂತಾ ಸಹ ಇರಲಿದ್ದಾರೆ!

  'ಪುಷ್ಪ' ಚಿತ್ರತಂಡವು ಸುದ್ದಿಯನ್ನು ಅಧಿಕೃತಗೊಳಿಸಿದ್ದು, ಸಿನಿಮಾದಲ್ಲಿ ಸಮಂತಾ ಸಹ ಭಾಗವಾಗಲಿದ್ದಾರೆ. ಆದರೆ ಸಿನಿಮಾದಲ್ಲಿ ಸಮಂತಾ ನಟಿಸುತ್ತಿಲ್ಲ ಬದಲಿಗೆ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಸಮಂತಾ ಈವರೆಗೆ ಯಾವುದೇ ವಿಶೇಷ ಹಾಡು ಅಥವಾ ಐಟಂ ಹಾಡುಗಳಲ್ಲಿ ಈವರೆಗೆ ಕಾಣಿಸಿಕೊಂಡಿಲ್ಲ 'ಪುಷ್ಪ' ಸಿನಿಮಾದ ಹಾಡು ಸಮಂತಾರ ಮೊದಲ ವಿಶೇಷ ಹಾಡಾಗಿರಲಿದೆ. ಹಾಗಾಗಿ ಚಿತ್ರತಂಡವು ವಿಶೇಷ ಮುತುವರ್ಜಿ ವಹಿಸಿ ಹಾಡನ್ನು ಡಿಸೈನ್ ಮಾಡಿದೆ.

  ವೃತ್ತಿ ಜೀವನದ ಮೊದಲ ವಿಶೇಷ ಹಾಡು

  ವೃತ್ತಿ ಜೀವನದ ಮೊದಲ ವಿಶೇಷ ಹಾಡು

  ''ಪುಷ್ಪ' ಸಿನಿಮಾದ ಐದನೇ ಹಾಡು ಬಹಳ ವಿಶೇಷವಾಗಿರಬೇಕು ಎಂಬುದು ನಮ್ಮ ಬಯಕೆಯಾಗಿತ್ತು, ಹಾಗಾಗಿ ವಿಶೇಷವಾಗಿರುವ ಸಮಂತಾ ಅವರನ್ನು ನಾವು ಕೇಳಿದೆವು. ಅವರು ಸಹ ಹಾಡಿನಲ್ಲಿ ನರ್ತಿಸಲು ಒಪ್ಪಿಕೊಂಡಿದ್ದಾರೆ. ಸಮಂತಾ ನಮ್ಮ ಚಿತ್ರತಂಡದ ಜೊತೆ ಕೈಜೋಡಿಸಿರುವುದಕ್ಕೆ ನಮಗೆ ಖುಷಿಯಾಗಿದೆ. ಅಲ್ಲು ಅರ್ಜುನ್ ಜೊತೆ ಅವರು ವಿಶೇಷ ಹಾಡೊಂದರಲ್ಲಿ ನರ್ತಿಸಲಿದ್ದಾರೆ. ಇದು ಸಮಂತಾರ ವೃತ್ತಿ ಜೀವನದ ಮೊದಲ ವಿಶೇಷ ಹಾಡಾಗಿರಲಿದೆ. ನಾವು ಸಹ ಈ ಹಾಡಿನ ಬಗ್ಗೆ ವಿಶೇಷ ತಯಾರಿ ಮಾಡಿದ್ದೇವೆ'' ಎಂದು 'ಪುಷ್ಪ' ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಹೇಳಿದೆ.

  'ಪುಷ್ಪ' ಸಿನಿಮಾದಲ್ಲಿ ಸ್ಟಾರ್ ನಟರು ದಂಡು

  'ಪುಷ್ಪ' ಸಿನಿಮಾದಲ್ಲಿ ಸ್ಟಾರ್ ನಟರು ದಂಡು

  'ಪುಷ್ಪ' ಸಿನಿಮಾದಲ್ಲಿ ಪ್ರತಿಭಾವಂತ ಸ್ಟಾರ್ ಕಲಾವಿದರ ದಂಡೇ ಇದೆ. ಅಲ್ಲು ಅರ್ಜುನ್ ನಾಯಕ ನಟನಾಗಿರುವ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಮುಖ್ಯ ವಿಲನ್ ಆಗಿ ಮಲಯಾಳಂನ ಜನಪ್ರಿಯ ನಟ ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ. ತೆಲುಗಿನ ಹಾಸ್ಯ ನಟ ಸುನಿಲ್, ಜಗಪತಿ ಬಾಬು, ಪ್ರಕಾಶ್ ರೈ, ಕನ್ನಡದ ಡಾಲಿ ಧನಂಜಯ್, ಕಿಶೋರ್, ಅನುಸೂಯಾ ಭಾರಧ್ವಜ್, ವೆನ್ನೆಲ ಕಿಶೋರ್ ಇನ್ನೂ ಹಲವು ನಟರು ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಡಿಸೆಂಬರ್ 17 ರಂದು ಸಿನಿಮಾದ ಮೊದಲ ಭಾಗ ಬಿಡುಗಡೆ ಆಗಲಿದೆ.

  ವಿಚ್ಛೇಧನದ ಆಘಾತದಿಂದ ಹೊರಗೆ ಬಂದಿರುವ ಸಮಂತಾ

  ವಿಚ್ಛೇಧನದ ಆಘಾತದಿಂದ ಹೊರಗೆ ಬಂದಿರುವ ಸಮಂತಾ

  ಖಾಸಗಿ ಜೀವನದಲ್ಲಿ ಎದುರಾದ ವಿಚ್ಛೇಧನದ ದೊಡ್ಡ ಆಘಾತದಿಂದ ಚೇತರಿಸಿಕೊಂಡಂತಿರುವ ನಟಿ ಸಮಂತಾ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗುಣಶೇಖರ್ ನಿರ್ದೇಶನದ 'ಶಾಕುಂತಮ್' ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ. ವಿಶೇಷವೆಂದರೆ ಇದೇ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮಗಳು ಅಲ್ಲು ಆರ್ಹಾ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಇದರ ಬಳಿಕ ತಮಿಳಿನ 'ಕಾತು ವಾಕುಲ ರೆಂಡು ಕಾದಲ್' ಸಿನಿಮಾದಲ್ಲಿಯೂ ಸಮಂತಾ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಜೊತೆಗೆ ನಯನತಾರಾ ಸಹ ನಟಿಸುತ್ತಿದ್ದು, ಸಿನಿಮಾವನ್ನು ನಯನತಾರಾ ಬಾಯ್‌ಫ್ರೆಂಡ್ ವಿಘ್ನೇಷ್ ಶಿವನ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ವಿಜಯ್ ಸೇತುಪತಿ ನಾಯಕ.

  ಹೆಸರಿಡದ ಎರಡು ಸಿನಿಮಾಗಳಲ್ಲಿ ನಟನೆ

  ಹೆಸರಿಡದ ಎರಡು ಸಿನಿಮಾಗಳಲ್ಲಿ ನಟನೆ

  ಡ್ರೀಮ್ ವಾರಿಯರ್ ಪಿಕ್ಚರ್ಸ್‌ ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಿಸುತ್ತಿರುವ ಹೊಸ ಸಿನಿಮಾ ಹಾಗೂ ಶ್ರೀದೇವಿ ಮೂವೀಸ್‌ನ ಹೊಸ ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ. ಇವುಗಳ ಜೊತೆಗೆ ಸಮಂತಾ ನಿರ್ಮಾಪಕಿ ಸಹ ಆಗುತ್ತಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿಕೊಂಡ ಸಮಂತಾ ಇದೀಗ ತಾವೇ ಹೊಸ ವೆಬ್ ಸರಣಿ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

  English summary
  Samantha appearing in Pushpa movie's special song. This will be her career's first ever special song. Movie will release on December 17.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X