'ಪುಷ್ಪ' ಐಟಂ ಹಾಡಿಗೆ ನಾಯಕಿ ರಶ್ಮಿಕಾಗಿಂತಲೂ ದುಪ್ಪಟ್ಟು ಸಂಭಾವನೆ ಪಡೆದ ಸಮಂತಾ!

'ಪುಷ್ಪ' ಸಿನಿಮಾದಲ್ಲಿ ಸಮಂತಾ ಸೊಂಟ ಬಳುಕಿಸಿರುವ ಐಟಂ ಹಾಡು ಸೂಪರ್ ಡೂಪರ್ ಹಿಟ್ ಆಗಿದೆ. ಮಿಲಿಯನ್ ಗಟ್ಟಲೆ ವೀವ್ಸ್‌ಗಳನ್ನು ಯೂಟ್ಯೂಬ್‌ನಲ್ಲಿ ಪಡೆದುಕೊಂಡಿದೆ.

ಸಮಂತಾ ಮೊದಲ ಬಾರಿಗೆ ಐಟಂ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ ಎಂದಾಗಲೇ ಈ ಹಾಡಿನ ಬಗ್ಗೆ ದೊಡ್ಡ ಮಟ್ಟದ ಕುತೂಹಲ ಏರ್ಪಟ್ಟಿತ್ತು. ಅಂತೆಯೇ ಹಾಡು ಸಹ ಸೂಪರ್ ಹಿಟ್ ಆಗಿದೆ. ಆಸಕ್ತಿಕರ ಸುದ್ದಿಯೆಂದರೆ ಈ ಹಾಡಿಗೆ ಸಮಂತಾ ಪಡೆದ ಸಂಭಾವನೆ.

ಐಟಂ ಹಾಡಿಗೆ ನರ್ತಿಸಲು ಸಮಂತಾ 1.50 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಮೂರು ನಿಮಿಷದ ಹಾಡಿಗೆ 1.50 ಕೋಟಿ ಸಂಭಾವನೆಯಾ ಎಂದು ಹಲವರು ಮೂಗಿನ ಮೇಲೆ ಬೆರಳಿಟ್ಟಿದ್ದರು. ಆದರೆ ಇದೀಗ ಬಂದಿರುವ ಸುದ್ದಿಯಂತೆ ಸಮಂತಾ ಪಡೆದಿರುವುದು 1.50 ಕೋಟಿಯಲ್ಲ ಬದಲಿಗೆ 5 ಕೋಟಿ!

ಸುಭಾಷ್‌ ಝಾರ ಐಡಬ್ಲುಎಂ ಬಜ್ ಮ್ಯಾಗಜೀನ್‌ಗೆ 'ಪುಷ್ಪ' ಸಿನಿಮಾದ ತಂಡದ ಸದಸ್ಯರೊಬ್ಬರು ನೀಡಿರುವ ಮಾಹಿತಿಯಂತೆ, ''ಪುಷ್ಪ'' ಸಿನಿಮಾದ ಐಟಂ ಹಾಡಿಗೆ ಡ್ಯಾನ್ಸ್ ಮಾಡುವುದು ಸಮಂತಾಗೆ ಇಷ್ಟವಿರಲಿಲ್ಲವಂತೆ. ಮೊದಲಿಗೆ ಆಫರ್ ನೀಡಿದಾಗ ಅವರು ಸಾರ ಸಗಟಾಗಿ ತಿರಸ್ಕರಿಸಿದ್ದರು. ಬಳಿಕ ಅಲ್ಲು ಅರ್ಜುನ್ ಅವರೇ ಖುದ್ದಾಗಿ ಸಮಂತಾರನ್ನು ಹಾಡಿ ನರ್ತಿಸಲು ಒಪ್ಪಿಸಿದರು ಎನ್ನಲಾಗಿದೆ.

ಹಾಡಿನ ಸಾಹಿತ್ಯ, ಸ್ಟೆಪ್ಸ್ ಬದಲಿಸಲಿಲ್ಲ ಸಮಂತಾ

ಹಾಡಿನ ಸಾಹಿತ್ಯ, ಸ್ಟೆಪ್ಸ್ ಬದಲಿಸಲಿಲ್ಲ ಸಮಂತಾ

ಮೂರು ನಿಮಿಷದ ಹಾಡಿಗೆ ಸೊಂಟ ಬಳುಕಿಸಲು ಸಮಂತಾಗೆ ಬರೋಬ್ಬರಿ ಐದು ಕೋಟಿ ನೀಡಲಾಗಿದೆ. ಆದರೆ ಹಣ ಪಡೆದ ಸಮಂತಾ ಆ ಹಾಡಿನ ಸಾಹಿತ್ಯವನ್ನಾಗಲಿ, ಯಾವುದೇ ಸ್ಟೆಪ್ಸ್ ಅನ್ನಾಗಲಿ ಬದಲಿಸಲಿಲ್ಲ. ಬದಲಿಗೆ ಮೊದಲೇ ತಯಾರಿ ನಡೆಸಿ ಸೆಟ್‌ಗೆ ಬಂದು ಕೆಲವೇ ಗಂಟೆಗಳಲ್ಲಿ ಹಾಡಿನ ಚಿತ್ರೀಕರಣ ಮುಗಿಸಿಕೊಟ್ಟರು. 'ಪುಷ್ಪ 2'ನಲ್ಲಿಯೂ ಸಮಂತಾ ಅವರೇ ಐಟಂ ಹಾಡಿಗೆ ನರ್ತಿಸಲಿದ್ದಾರೆ ಎಂಬ ಗುಟ್ಟನ್ನೂ ಬಿಟ್ಟುಕೊಟ್ಟಿದ್ದಾರೆ ಸಿನಿಮಾ ತಂಡದ ವ್ಯಕ್ತಿ.

ರಶ್ಮಿಕಾಗಿಂತಲೂ ಹೆಚ್ಚು ಸಂಭಾವನೆ

ರಶ್ಮಿಕಾಗಿಂತಲೂ ಹೆಚ್ಚು ಸಂಭಾವನೆ

'ಪುಷ್ಪ' ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣಗೆ ನೀಡಿದ ಸಂಭಾವನೆಗಿಂತಲೂ ದುಪ್ಪಟ್ಟು ಸಂಭಾವನೆಯನ್ನು ಸಮಂತಾಗೆ ನೀಡಲಾಗಿದೆ ಎನ್ನಲಾಗುತ್ತಿದೆ. 'ಪುಷ್ಪ' ಸಿನಿಮಾಕ್ಕಾಗಿ ರಶ್ಮಿಕಾ ಮಂದಣ್ಣಗೆ 2.50-3 ಕೋಟಿ ಸಂಭಾವನೆ ನೀಡಲಾಗಿದೆ. ಆದರೆ ಮೂರು ನಿಮಿಷದ ಹಾಡಿಗೆ ಸಮಂತಾಗೆ 5 ಕೋಟಿ ಧಕ್ಕಿದೆ. 'ಪುಷ್ಪ' ಸಿನಿಮಾ ನಿರ್ದೇಶಕ ಸುಕುಮಾರ್ ನಿರ್ದೇಶಿಸಿದ್ದ ಈ ಹಿಂದಿನ ಸಿನಿಮಾ 'ರಂಗಸ್ಥಳಂ'ನಲ್ಲಿ ನಟಿ ಪೂಜಾ ಹೆಗ್ಡೆ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು ಅವರಿಗೂ ಭಾರಿ ಮೊತ್ತದ ಸಂಭಾವನೆಯನ್ನು ನೀಡಲಾಗಿತ್ತು.

ದೊಡ್ಡ ಹಿಟ್ ಆದ 'ಊ ಅಂಟಾವ' ಹಾಡು

ದೊಡ್ಡ ಹಿಟ್ ಆದ 'ಊ ಅಂಟಾವ' ಹಾಡು

'ಊ ಅಂಟಾವ' ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು, ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಹಾಡನ್ನು 52 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅದಕ್ಕೂ ಮುನ್ನ ಬಿಡುಗಡೆ ಆಗಿದ್ದ ಲಿರಿಕಲ್ ವಿಡಿಯೋವನ್ನು 138 ಮಿಲಿಯನ್ನು ಬಾರಿ ವೀಕ್ಷಿಸಲಾಗಿದೆ. ಇದು ಇತ್ತೀಚಿನ ದಾಖಲೆಯೆಂದೇ ಹೇಳಲಾಗುತ್ತಿದೆ. ಈ ಹಾಡಿಗೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ''ಪುಷ್ಪ' ಸಿನಿಮಾವು 17 ಡಿಸೆಂಬರ್‌ಗೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಯಿತು. ಸಿನಿಮಾ ಇದೀಗ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದ್ದು ಅಲ್ಲಿಯೂ ಕೋಟ್ಯಂತರ ಮಂದಿಯಿಂದ ವೀಕ್ಷಿಸಲ್ಪಡುತ್ತಿದೆ.

ಹಲವು ಸಿನಿಮಾಗಳಲ್ಲಿ ಸಮಂತಾ ಬ್ಯುಸಿ

ಹಲವು ಸಿನಿಮಾಗಳಲ್ಲಿ ಸಮಂತಾ ಬ್ಯುಸಿ

ಸಮಂತಾ ಇದೀಗ ತಮ್ಮ ವೃತ್ತಿ ಜೀವನದಲ್ಲಿ ಹೊಸ ಆಯ್ಕೆಗಳನ್ನು ಮಾಡುತ್ತಿದ್ದಾರೆ. ಮೊದಲ ಬಾರಿಗೆ ಐಟಂ ಹಾಡಿನಲ್ಲಿ ಹೆಜ್ಜೆ ಹಾಕಿದ ಬಳಿಕ ಇದೀಗ ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿಯೂ ನಟಿಸಲು ಒಪ್ಪಿಕೊಂಡಿದ್ದಾರೆ. ಅದರ ಬಳಿಕ ಹಾಲಿವುಡ್ ಸಿನಿಮಾ 'ಅರೇಂಜ್‌ಮೆಂಟ್ಸ್ ಆಫ್ ಲವ್' ಸಿನಿಮಾದಲ್ಲಿ ದ್ವಿಲಿಂಗಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಸಮಂತಾ ನಟಿಸಿರುವ 'ಶಾಕುಂತಲಂ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ತಮಿಳಿನ 'ಕಾತುವಾಕ್ಕು ರೆಂಡು ಕಾದಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Samantha charges 5 crore rs for Pushpa movie item song. She took more remuneration than Rashmika Mandanna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X