ಊ ಅಂಟಾವಾ ಮಾವ: ಟ್ರಿಮ್ ಮಾಡಿದ್ದ ಸಮಂತಾ ಪೂರ್ತಿ ಹಾಟ್ ಡಾನ್ಸ್ OTTಯಲ್ಲಿ ರಿಲೀಸ್!
ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಪುಷ್ಪ ಸಾಕಷ್ಟು ವಿಚಾರಗಳಿಂದ ದಾಖಲೆ ಮಾಡಿದೆ. ಸಾಕಷ್ಟು ವಿಶೇಷತೆಗಳಿಂದ ಸದ್ದು ಮಾಡಿದೆ. ಚಿತ್ರ ಕಥೆ, ಅಭಿನಯದ, ಸಾಂಗ್, ಫೈಟ್ ಎಲ್ಲವೂ ಅಭಿಮಾನಿಗಳ ಮನಗೆದ್ದಿದೆ. ಚಿತ್ರದ ಎಲ್ಲಾ ಹಾಡುಗಳು ಕೂಡ ಅಭಿಮಾನಿಗಳ ಫೇವರಿಟ್ ಆಗಿ ಬಿಟ್ಟಿವೆ.
ಸಾಮಿ, ಶ್ರೀವಲ್ಲಿ, ದಾಕೋ ಮೇಕ, ಏ ಬಿಡ್ಡ, ಮತ್ತು ಊ ಅಂಟಾವಾ ಮಾವ ಹಾಡುಗಳು ಚಿತ್ರಕ್ಕೆ ದೊಡ್ಡ ಶಕ್ತಿ ಆಗಿ ನಿಂತಿವೆ. ದೇವಿಶ್ರೀ ಪ್ರಸಾದ್ ಸಂಗೀತಕ್ಕೆ ಎಲ್ಲೆಡೆ ಭಾರಿ ಮೆಚ್ಚುಗೆ ಕೂಡ ಬಂದಿದೆ. ಈ ಹಾಡುಗಳ ಪೈಕಿ ದಾಖಲೆ ಬರೆದು ನಂಬರ್ 1 ಸ್ಥಾನ ಗಿಟ್ಟಿಸಿಕೊಂಡ ಹಾಡು ಅಂದರೆ ಅದು ಸಮಂತ ಸೊಂಟ ಬಳುಕಿಸಿದ 'ಊ ಅಂಟಾವಾ ಮಾವ' ಹಾಡು.
ಮೊದಲು ಲಿರಿಕಲ್ ವಿಡಿಯೋ ಜೊತೆಗೆ ಈ ಹಾಡನ್ನು ರಿಲೀಸ್ ಮಾಡಲಾಯಿತು. ಕೇವಲ ಲಿರಿಕಲ್ ವಿಡಿಯೋ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿದೆ. ಸಮಂತಾ ಡ್ಯಾನ್ಸ್ ಮಾಡಿರುವ ಸಣ್ಣ ತುಣುಕುಗಳು, ಪ್ರೇಕ್ಷಕರನ್ನು ಚಿತ್ರ ಮಂದಿರಕ್ಕೆ ಕರೆ ತರಲು ಒಂದಷ್ಟು ಕೊಡುಗೆ ನೀಡಿದೆ ಎಂದರೆ ತಪ್ಪಾಗಲಾರದು.

ಚಿತ್ರದಲ್ಲಿ ಇಲ್ಲ ಸಮಂತಾ ಪೂರ್ತಿ ಡಾನ್ಸ್!
ಊ ಅಂಟಾವ ಮಾವ ಹಾಡು ಚಿತ್ರ ರಿಲೀಸ್‌ಗೂ ಮುನ್ನ ಯುಟ್ಯೂಬ್ನಲ್ಲಿ ರಿಲೀಸ್ ಆಗಿತ್ತು. ಆದರೆ ಅದು ಕೇವಲ ಲಿರಿಕಲ್ ವಿಡಿಯೋ. ಹಾಗಾಗಿ ಅದೆಷ್ಟೊ ಮಂದಿ ಈ ಹಾಡನ್ನು ಚಿತ್ರದಲ್ಲಿ ನೋಡಬೇಕೆಂದು ಚಿತ್ರ ಮಂದಿರಕ್ಕೆ ಹೋಗಿ ಸಿನಿಮಾ ನೋಡಿದ್ದಾರೆ. ಆದರ ಚಿತ್ರದಲ್ಲಿ ಕೂಡ ಈ ಹಾಡನ್ನು ಸಂಪೂರ್ಣವಾಗಿ ಬಿಡುಗಡೆ ಅಂದರೆ. ಅದು ಗೊತ್ತಾಗಿದ್ದು ಒಟಿಟಿಯಲ್ಲಿ ಚಿತ್ರ ರಿಲೀಸ್ ಆದ ಬಳಿಕ. ಚಿತ್ರದಲ್ಲಿ ಟ್ರಿಮ್ ಮಾಡಲಾಗಿದ್ದ ಸಮಂತಾ ಹಾಟ್ ಡಾನ್ಸ್ ಒಟಿಟಿಯಲ್ಲಿ ರಿಲೀಸ್ ಆದ ಚಿತ್ರದಲ್ಲಿ ಇದೆ.

ಹಾಡಿನಲ್ಲಿ ಸಮಂತಾ ಹಾಟ್ ಡಾನ್ಸ್ ಟ್ರಿಮ್!
ಊ ಅಂಟಾವ ಮಾವ ಹಾಡು, ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲೂ ಸೂಪರ್ ಹಿಟ್ ಆಗಿದೆ. ಸಮಂತಾ ಡಾನ್ಸಿಗೆ ಸಿಕ್ಕಾಪಟ್ಟೆ ಉತ್ತಮ ರೆಸ್ಪಾನ್ಸ್ ಬಂದಿದೆ. ಇದೆ ಮೊದಲ ಬಾರಿಗೆ ಸಮಂತಾ ಐಟಂ ಹಾಡಿನಲ್ಲಿ ಡಾನ್ಸ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಸಮಂತಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದ ಕೆಲವು ದೃಶ್ಯಗಳನ್ನು ತೆಗೆಯಲಾಗಿದೆ. ಒಂದಷ್ಟಕ್ಕೆ ಸೆನ್ಸಾರ್ ಬೋರ್ಡ್ ಕತ್ತರಿ ಹಾಕಿದೆಯಂತೆ. ಇನ್ನು ಚಿತ್ರದ ಲೆನ್ಸ್ ಹೆಚ್ಚಾದ ಕಾರಣ ಚಿತ್ರ ತಂಡವೇ ಸಮಂತಾ ಡಾನ್ಸ್ ಟ್ರಿಮ್ ಮಾಡಿದೆ ಎನ್ನಲಾಗುತ್ತಿದೆ.

ಐಟಂ ಹಾಡಿಗೆ ಹೆಜ್ಜೆ ಹಾಡು ನಿರಾಕರಿಸಿದ್ದ ಸಮಂತಾ!
ಇನ್ನು ಸ್ಟಾರ್ ನಟಿ ಆಗಿ ಐಟಂ ಹಾಡಿನಲ್ಲಿ ಹೆಜ್ಜೆ ಹಾಕಲು ನಟಿ ಸಮಂತಾ ಮೊದಲು ನಿರಾಕರಿಸಿದ್ದರಂತೆ. ನಂತರ ಚಿತ್ರ ತಂಡದ ಮೇಲಿನ ನಂಬಿಕೆಯ ಮೇಲೆ ಈ ಹಾಡನ್ನು ಮಾಡಲು ಒಪ್ಪಿದ್ದರಂತೆ. ಇದು ಸಮಂತಾ ಸಿನಿಮಾ ಜರ್ನಿಯಲ್ಲಿ ಹೊಸ ದಾಖಲೆ ಬರೆದ ಹಾಡಾಗಿದೆ. ಈ ಬಗ್ಗೆ ಸಮಂತಾ ಸಂತಸ ವ್ಯಕ್ತ ಪಡಿಸಿದ್ದಾರೆ.

ಹಾಡಿಗಾಗಿ ಕಷ್ಟಪಟ್ಟು ಡಾನ್ಸ್ ಕಲಿತಿದ್ದ ನಟಿ!
ಊ ಅಂಟಾವಾ, ಊಹೂಂ ಅಂಟಾವಾ ಹಾಡಿಗಾಗಿ ಸಮಂತಾ ಸಾಕಷ್ಟು ಕಷ್ಟ ಪಟ್ಟು ಡಾನ್ಸ್ ರಿಹರ್ಸ್ ಮಾಡಿದ್ದಾರೆ. ರಿಹರ್ಸಲ್ ವಿಡಿಯೋವನ್ನು ಸಮಂತಾ ಬಿಡುಗಡೆ ಮಾಡಿದರು. "ರಿಹರ್ಸಲ್ ತನ್ನ ಶಕ್ತಿ ಮತ್ತು ಸಹಿಷ್ಣುತೆಯನ್ನು ಪರೀಕ್ಷಿಸಿತ್ತು." ಎಂದು ಸಮಂತಾ ಹೇಳಿದ್ದಾರೆ. ಆ ವಿಡಿಯೋ ಸಮಂತಾ ಒಂದು ಹಾಡಿಗೆ ಎಷ್ಟು ಹಾರ್ಡ್‌ವರ್ಕ್ ಮಾಡುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿತು.


Click it and Unblock the Notifications











