For Quick Alerts
  ALLOW NOTIFICATIONS  
  For Daily Alerts

  ಮಾಯಗಂಗೆ ಬಳಿಕ ಎಲ್ಲಾ ಟ್ರೋಲು: ಏನಿದು ಬನಾರಸ್‌ ಮೋಡಿ..?

  |

  ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್‌ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿರುವ ಬನಾರಸ್‌ ಚಿತ್ರ ತೆರೆ ಕಾಣಲು ಸಜ್ಜಾಗಿದೆ. ಮಾಯಗಂಗೆ ಎಂಬ ಹಾಡಿನ ಮೂಲಕ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ಬನರಾಸ್ ಚಿತ್ರ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರ ಬಿಡುಗಡೆಗಾಗಿ ಸಿನಿ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ.

  ಜಯತೀರ್ಥ ನಿರ್ದೇಶನದ ಬನರಾಸ್ ಚಿತ್ರದ ಮಾಯಾಗಂಗೆ ಹಾಡು ಕೇಳುಗರ ಮನಸೋರೆಗೊಂಡಿದೆ. ಇದೀಗ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಹ್ಯಾಂಡ್ಸಮ್ ಹಂಕ್ ಆಗಿರುವ ಝೈದ್ ಖಾನ್‌ ಬನರಾಸ್ ಚಿತ್ರದ ಹೊಸ ಹಾಡಿನಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಎಲ್ಲ ಟ್ರೋಲು..ಎಲ್ಲಾ ಟ್ರೋಲು..ಸಿಕ್ಕಾಪಟ್ಟೆ ಕೊಲೇಸ್ಟ್ರಾಲು ಎನ್ನುವ ಹಾಡು ಬಿಡುಗಡೆಯಾಗಿದೆ. ಸದ್ಯ ಈ ಹಾಡು ಎಲ್ಲೆಡೆ ವೈರಲ್ ಆಗುತ್ತಿದ್ದು, ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

  ಬನಾರಸ್‌ ಪೋಸ್ಟರ್‌ ರಿಲೀಸ್‌ ಮಾಡಬೇಕಿದ್ದ ಅಪ್ಪು- ಮುಂದೂಡಿಕೆಬನಾರಸ್‌ ಪೋಸ್ಟರ್‌ ರಿಲೀಸ್‌ ಮಾಡಬೇಕಿದ್ದ ಅಪ್ಪು- ಮುಂದೂಡಿಕೆ

  ಝೈದ್ ಖಾನ್‌ ಟ್ರೋಲು ಎಲ್ಲಾ ಟ್ರೋಲು ಹಾಡಿಗೆ ಡಾ.ವಿ ನಾಗೇಂದ್ರ ಪ್ರಸಾದ್‌ ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್‌ ಸಂಗೀತ ಸಂಯೋಜನೆ ಮಾಡಿ ತಾವೇ ಸ್ವತಃ ಈ ಹಾಡನ್ನು ಹಾಡಿದ್ದಾರೆ. ಈ ಮೊದಲು ಮೆಲೋಡಿ ಹಾಡಿನ ಮೂಲಕ ಟ್ರೆಂಡ್ ಸೆಟ್‌ ಮಾಡಿದ್ದ ಬನಾರಸ್ ಚಿತ್ರ ಇದೀಗ ರಿಲೀಸ್ ಆಗಿರುವ ಟ್ರೋಲ್ ಹಾಡಿನ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದೆ.

  ಇನ್ನು ಬಿಡುಗಡೆಗೂ ಮೊದಲೇ 'ಬಸರಾಸ್' ಚಿತ್ರದ ಬಗ್ಗೆ ಒಂದಿಷ್ಟು ಋಣಾತ್ಮಕ ವಿಚಾರಗಳು ಹರಿದಾಡುತ್ತಿದೆ. ಬಾಲಿವುಡ್‌ನಲ್ಲಿ ಟ್ರೆಂಡ್ ಆಗಿದ್ದ ಬಾಯ್ಕಾಟ್ ಅಭಿಯಾನ ಬನರಾಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದೆ. ಬನರಾಸ್ ಚಿತ್ರ ವಿರುದ್ಧ ಹಿಂದೂ ಸಂಘಟನೆಗಳು ಅಸಮಾಧಾನಗೊಂಡಿದ್ದು, ಈ ಚಿತ್ರ ಹಿಂದೂ ವಿರುದ್ಧ ಎಂದು ಆರೋಪಿಸಿದ್ದಾರೆ. ಅಲ್ಲದೇ ಬಾಯ್ಕಾಟ್ ಬನರಾಸ್ ಅಭಿಯಾನ ನಡೆಸಿದ್ದಾರೆ. ಈ ಎಲ್ಲಾ ಸವಾಲುಗಳ ಮಧ್ಯೆ ಬನರಾಸ್ ಚಿತ್ರ ತೆರೆ ಕಂಡು ಗೆಲ್ಲಬೇಕಿದೆ.

  ಇನ್ನು ಜಯತೀರ್ಥ ನಿರ್ದೇಶನದ ಬನಾರಸ್‌ ಕನ್ನಡ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಸಖತ್‌ ಹೈಪ್ ಕ್ರಿಯೆಟ್ ಮಾಡುತ್ತಿದೆ. ಹಲವಾರು ವಿಶೇಷತೆ ಒಳಗೊಂಡಿರುವ ಈ ಚಿತ್ರದಲ್ಲಿ ಝೈದ್ ಖಾನ್‌ ಖಾನ್ ಲವರ್‌ ಬಾಯ್‌ ಆಗಿ ಮಿಂಚಲಿದ್ದಾರೆ. ಇನ್ನು ಬಿಡುಗಡೆಗೂ ಮುನ್ನವೇ ಚಿತ್ರ ಉತ್ತಮ ಗಳಿಕೆ ಮಾಡಿದ್ದು, ಬನರಾಸ್ ಚಿತ್ರದ ಆಡಿಯೋ ರೈಟ್ಸ್ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಆಡಿಯೋ ಕಂಪನಿ ಲಹರಿ ಸಂಸ್ಥೆ ಹಾಗೂ ಟಿ-ಸಿರೀಸ್ ಜಂಟಿಯಾಗಿ ಚಿತ್ರದ ಆಡಿಯೋ ರೈಟ್ಟ್ ಅನ್ನು ಬರೋಬ್ಬರಿ 3.50 ಕೋಟಿ ರೂಪಾಯಿಗೆ ಖರೀದಿಸಿತ್ತು.

  ಬನರಾಸ್ ಚಿತ್ರ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆ ಕಾಣಲಿದ್ದು, ಪ್ಯಾನ್‌ ಇಂಡಿಯಾ ಚಿತ್ರವಾಗಿ ಹೊರಹೊಮ್ಮಲಿದೆ. ರಾಬರ್ಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಪ್ರೇಕ್ಷರ ಮನಸ್ಸು ಕದ್ದಿರುವ ಚಂದದ ಬೆಡಗಿ ಸೋನಲ್ ಮೊಂಥೆರೊ ಬನರಾಸ್ ಚಿತ್ರದಲ್ಲಿ ಝೈದ್ ಖಾನ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತಿಲಕ್‌ ರಾಜ್‌ ಬಲ್ಲಾಳ್‌ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಜಯತೀರ್ಥ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇನ್ನು ಹಿರಿಯ ನಟ ದೇವರಾಜ್, ಸುಜಯ್ ಶಾಸ್ತ್ರಿ, ಅಚ್ಯುತ್ ಕುಮಾರ್‌, ಸ್ವಪ್ನಾ ರಾಜ್‌, ಬರ್ಖಾತ್ ಅಲಿ ಬನರಾಸ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Sandalwood actor Zaid Khan Banaras movie another lyrical song released on YouTube.
  Monday, September 19, 2022, 21:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X