For Quick Alerts
  ALLOW NOTIFICATIONS  
  For Daily Alerts

  ಗಿಚ್ಚ ಗಿಲಿ ಗಿಲಿ ಹಿಂದೆ ಬಿದ್ದ ಸಾಂಡಲ್‌ವುಡ್!

  |

  ಸಿನಿಮಾ ಅನ್ನೋದೆ ಕ್ರಿಯಾಶೀಲ ಪ್ರಪಂಚ. ಇಲ್ಲಿ ಕ್ರಿಯೇಟಿವಿಟಿಗೆ ಹೆಚ್ಚು ಪ್ರಾಮುಖ್ಯತೆ ಸದಾ ಇದ್ದೇ ಇರುತ್ತದೆ. ಹಾಗಾಗಿ ಸಿನಿಮಾ ಮಂದಿ ಸದಾ ಒಂದಲ್ಲ ಒಂದು ಕ್ರಿಯಾಶೀಲ ವಿಚಾರಗಳನ್ನು ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಇಡುವ ಪ್ರಯತ್ನ ಮಾಡುತ್ತಾ ಇರುತ್ತಾರೆ. ಇದೀಗ ಸ್ಯಾಂಡಲ್ ವುಡ್‌ನಲ್ಲಿ ಗಿಚ್ಚ ಗಿಲಿ ಗಿಲಿ ಹೆಚ್ಚಾಗಿ ಸದ್ದು ಮಾಡುತ್ತಾ ಇದೆ. ಉತ್ತರ ಕರ್ನಾಟಕದ ಈ ಗಿಚ್ಚ ಗಿಲಿ ಗಿಲಿ ಪದ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಆಗಿದೆ. ಜಾನಪದ ಸಾಹಿತ್ಯದಲ್ಲಿ ಈ ಗಿಚ್ಚ ಗಿಲಿ ಗಿಲಿ ಪದ ಹೆಚ್ಚಾಗಿ ಬಳಕೆ ಆಗುತ್ತೆ. ಆಡು ಭಾಷೆಯಲ್ಲಿ ಗಿಚ್ಚ ಗಿಲಿ ಗಿಲಿ ಅಂದ್ರೆ ಖುಷಿ, ಸಂತಸವನ್ನು ಹಂಚಿಕೊಳ್ಳಲು ಇರುವ ಪದ.

  ಇದೇ ಜಾನಪದ ಪದಗುಚ್ಚ ಕನ್ನಡ ಚಿತ್ರಗಳ ಹಾಡುಗಳ ಸಾಲಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಗಿಚ್ಚ ಗಿಲಿ ಗಿಲಿ ಹಳ್ಳಿಗಾಡಿನಿಂದ ಹಿಡಿದು ಸಿಟಿ ಮಂದಿಗೂ ಮೋಡಿ ಮಾಡಿರುವ ಸಾಹಿತ್ಯ. ಹಾಗಾಗಿ ಗಿಚ್ಚ ಗಿಲಿಗಿಲಿ ಅಂತ ಹಾಡು ಶುರುವಾದ್ರೆ, ಅದು ತಪ್ಪದೇ ಜನರಿಗೆ ಇಷ್ಟ ಆಗಿ ಬಿಡುತ್ತೆ. ಇದಕ್ಕೆ ಈಗ ಎರಡು ಹಾಡುಗಳು ಉದಾಹರಣೆ ಆಗಿವೆ. ಇತ್ತೀಚೆಗೆ ರಿಲೀಸ್‌ ಆದ ರತ್ನನ್ ಪ್ರಪಂಚ ಮತ್ತು ಓಲ್ಡ್ ಮಾಂಕ್ ಚಿತ್ರದ ಹಾಡುಗಳಲ್ಲಿ ಗಿಚ್ಚ ಗಿಲಿಗಿಲಿ ಪದಗುಚ್ಛವನ್ನು ಬಳಸಲಾಗಿದೆ.

  ರತ್ನನ್‌ಪ್ರಪಂಚ ಸಿನಿಮಾದಲ್ಲಿ ಗಿಚ್ಚ ಗಿಲಿ ಗಿಲಿ ಸಾಹಿತ್ಯ ಬಳಸಿ ಪೆಪ್ಪಿ ಹಾಡೊಂದನ್ನ ಮಾಡಲಾಗಿದೆ. ಈ ಹಾಡಿನಲ್ಲಿ ನಟ ಪ್ರಮೋದ್ ಮತ್ತು ವೈನಿಧಿ ಜಗದೀಶ್ ಮಸ್ತ್‌ ಡ್ಯಾನ್ಸ್‌ ಮಾಡಿದ್ದಾರೆ. ಜೊತೆಗೆ ಧನಂಜಯ್ ಮತ್ತು ರೆಬಾ ಜಾನ್‌ ಕೂಡ ಹಾಡಿನಲ್ಲಿ ಕಾಣಿಸಿ ಕೊಂಡಿದ್ದಾರೆ. ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಒದಗಿಸಿದ್ದು, ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಧ್ವನಿಯಾಗಿದ್ದಾರೆ. ಚಿತ್ರದ ಪ್ರಮುಖ ಸಂದರ್ಭದಲ್ಲಿ ಈ ಹಾಡು ಬಂದು ಹೋಗತ್ತೆ. ಹಾಗೇ ಗಿಚ್ಚ ಗಿಲಿ ಗಿಲಿ ಅಂತ ಬಾಯಲ್ಲಿ ಗುನುಗುವ ಹಾಗೆ ಮಾಡುತ್ತೆ.

  Sandalwood Eye On Gicha Gili Gili Folk Song

  ನಟ ನಿರ್ದೇಶಕ ಶ್ರೀನಿ ಮತ್ತು ಅದಿತಿ ಪ್ರಭುದೇವ ಅಭಿಯದ ಓಲ್ಡ್‌ ಮಾಂಕ್ ಸಿನಿಮಾ ಹಾಡಿನಲ್ಲೂ ಗಿಚ್ಚ ಗಿಲಿ ಗಿಲಿಯ ಸದ್ದು ಜೋರಾಗಿದೆ. ಈ ಹಾಡನ್ನು ನಟ ಸುದೀಪ್ ರಿಲೀಸ್ ಮಾಡಿ ಮೆಚ್ಚಿಕೊಂಡಿದ್ದಾರೆ. ವಿಶೇಷ ಅಂದ್ರೆ ಈ ಹಾಡು ಮೂಲತಃ ಜಾನಪದ ಸಾಹಿತಿ ಮುದುಕಣ್ಣ ಮೊರಬ ಅವರ ರಚನೆಯಲ್ಲಿ ಮೂಡಿ ಬಂದಿರುವುದು. ಕಳೆದ ವರ್ಷವೇ ಈ ಹಾಡಿನ ಸಾಹಿತ್ಯ ಬರೆದು ಹಾಡಿ, ಹಾಡನ್ನು ಮುದುಕಣ್ಣ ರಿಲೀಸ್‌ ಮಾಡಿದ್ರು. ಈಗ ಇದೇ ಹಾಡನ್ನು ಓಲ್ಡ್‌ ಮಾಂಕ್ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಸಿನಿಮಾಗೆ ತಕ್ಕಂತೆ ಸೌರಭ್ ವೈಭವ್ ಸಂಗೀತ ನೀಡಿದ್ದಾರೆ. ಎ. ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ. ಕಲರ್‌ ಫುಲ್‌ ಸೆಟ್‌ನಲ್ಲಿ ನಟಿ ಅದಿತಿ ಪ್ರಭುದೇವ ಮತ್ತು ಶ್ರೀನಿ ಮಸ್ತ್‌ ಹೆಜ್ಜೆ ಹಾಕಿದ್ದಾರೆ.

  Sandalwood Eye On Gicha Gili Gili Folk Song

  ಗಿಚ್ಚ ಗಿಲಿ ಗಿಲಿ ಅನ್ನೋ ಈ ಎರಡೂ ಹಾಡುಗಳು ಕೂಡ ವೈರಲ್ ಆಗಿದೆ. ಜಾನಪದ ಸಾಹಿತ್ಯದ ಈ ಸಾಲು ಕಮರ್ಷಿಯಲ್ ಸಿನಿಮಾಗಳ ಒಂದು ಭಾಗವಾಗಿ ಬಿಟ್ಟಿದೆ.

  English summary
  Gicha Gili Gili folk lyrics using in more Kannada film songs,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X