For Quick Alerts
  ALLOW NOTIFICATIONS  
  For Daily Alerts

  'ಬರ್ಕ್ಲಿ' ಚಿತ್ರದಿಂದ ಬಂತು ಅಧ್ಬುತ ಹಾಡು

  |

  ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ ಬರ್ಕ್ಲಿ. ಟೈಟಲ್ ಮೂಲಕ ಕುತೂಹಲ ಮೂಡಿಸಿರುವ ಬರ್ಕ್ಲಿ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗಿದ್ದು, ಜೆಂಕಾರ್ ಮ್ಯೂಸಿಕ್ ನಲ್ಲಿ ಹಾಡು ಅಭಿಮಾನಿಗಳ ಮುಂದೆ ಬಂದಿದೆ. ಅಂದಹಾಗೆ ಈ ಹಾಡಿಗೆ ಬಹದ್ದೂರ್ ಚೇತನ್ ಸಾಹಿತ್ಯ ರಚಿಸಿದ್ದಾರೆ. ಈ ಹಾಡನ್ನು ಸಂಚಿತ್ ಹೆಗ್ಡೆ ಸುಮಧುರವಾಗಿ ಹಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಅಂದಹಾಗೆ ಬರ್ಕ್ಲಿ ಚಿತ್ರಕ್ಕೆ ಸಂತೋಷ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆನೇಕಲ್ ಬಾಲರಾಜ್ ಅವರು ನಿರ್ಮಿಸಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಬರ್ಕ್ಲಿ ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ಧವಾಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

  ಕರಿಯ, ಗಣಪ, ಕರಿಯ-೨ ಚಿತ್ರಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಅವರ ನಿರ್ಮಾಣದ ಮತ್ತೊಂದು ಅದ್ದೂರಿ ಚಿತ್ರ ಬರ್ಕ್ಲಿ. ಉತ್ತಮ‌ ಮನೋರಂಜನೆಯ ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಗಣಪ, ಕರಿಯ ೨ ಚಿತ್ರಗಳಲ್ಲಿ ನಟಿಸಿ ಖ್ಯಾತಿಗಳಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ.

  ಇನ್ನು ವಿಶೇಷ ಎಂದರೆ ಚಿತ್ರದಲ್ಲಿ ಸಿಮ್ರನ್ ನಾಟೇಕರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್ ನಾಟೇಕರ್ ಈ ಚಿತ್ರದ ಮೂಲಕ ಕನ್ನಡದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಬಹುಭಾಷಾ ನಟ ಚರಣರಾಜ್, ಖ್ಯಾತ ನಟಿ ಶೃತಿ, ಬಲ ರಾಜವಾಡಿ, ಬುಲೆಟ್ ಪ್ರಕಾಶ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.

  Santhosh Balaraj starrer Barkli movie song release for Ganesha festival

  ಅಂದಹಾಗೆ ಗಣೇಶ ಹಬ್ಬದ ಪ್ರಯುಕ್ತ ಸ್ಯಾಂಡಲ್ ವುಡ್ ನಿಂದ ಸಾಕಷ್ಟು ಸರ್ಪ್ರೈಸ್ ಗಳು ಅಭಿಮಾನಿಗಳಿಗೆ ಸಿಕ್ಕಿದೆ. ಅನೇಕ ಸಿನಿಮಾಗಳ ಪೋಸ್ಟರ್ ಗಳು ಮತ್ತು ಸಾಂಗ್ ಗಳನ್ನು ಬಿಡುಗಡೆ ಮಾಡಲಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಹೊಸ ಸಿನಿಮಾದ ಟೈಟರ್ ಪೋಸ್ಟರ್ ಅನೌನ್ಸ ಆಗಿದೆ. ಚಿತ್ರಕ್ಕೆ ಕ್ರಾಂತಿ ಎಂದು ಟೈಟಲ್ ಇಡಲಾಗಿದೆ. ಇನ್ನು ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾದಿಂದ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಇನ್ನು ಅನೇಕ ಸರ್ಪ್ರೈಸ್ ಗಳು ಅಭಿಮನಿಗಳಿಗೆ ಮನರಂಜನೆ ನೀಡಿವೆ.

  English summary
  Santhosh Balaraj starrer Barkli movie song release for Ganesha festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X