twitter
    For Quick Alerts
    ALLOW NOTIFICATIONS  
    For Daily Alerts

    ಖ್ಯಾತ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ನಿಧನ

    |

    84 ವರ್ಷ ವಯಸ್ಸಿನ ಶಿವಕುಮಾರ್ ಶರ್ಮಾ ಮುಂಬೈನ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ''ಅವರು ಆರೋಗ್ಯದಿಂದಲೇ ಇದ್ದರು. ಪ್ರತಿ ವಾರ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರಾದರೂ ಚಟುವಟಿಕೆಯಿಂದಲೇ ಇರುತ್ತಿದ್ದರು. ಮುಂದಿನ ವಾರ ಭೂಪಾಲ್‌ನಲ್ಲಿ ಸಂತೂರ್ ವಾದ್ಯ ಪ್ರದರ್ಶನ ನೀಡುವವರಿದ್ದರು. ಆದರೆ ಹಠಾತ್ತನೆ ಇಂದು ಬೆಳಿಗ್ಗೆ 9 ಗಂಟೆಗೆ ಆದ ಹೃದಯಾಘಾತದಿಂದ ನಿಧನ ಹೊಂದಿದರು'' ಎಂದು ಅವರು ಕುಟುಂಬದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಪದ್ಮಶ್ರೀ, ಪದ್ಮ ವಿಭೂಷಣ ಗೌರವಗಳಿಗೆ ಭಾಜನರಾಗಿದ್ದ ಶಿವಕುಮಾರ್ ಶರ್ಮಾ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಸಂಗೀತ, ಸಿನಿಮಾ ಇತರೆ ಕಲಾರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

    ಶಿವಕುಮಾರ್ ಶರ್ಮಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ''ಪಂಡಿತ್ ಶಿವಕುಮಾರ್ ಶರ್ಮಾ ಅವರ ನಿಧನದಿಂದ ನಮ್ಮ ಸಾಂಸ್ಕೃತಿಕ ಜಗತ್ತು ಬಡವಾಗಿದೆ. ಅವರು ಜಾಗತಿಕ ಮಟ್ಟದಲ್ಲಿ ಸಂತೂರ್ ವಾದ್ಯವನ್ನು ಜನಪ್ರಿಯಗೊಳಿಸಿದರು. ಅವರ ಸಂಗೀತ ಮುಂದಿನ ಪೀಳಿಗೆಯನ್ನು ಸ್ಪೂರ್ತಿಗೊಳಿಸುತ್ತಲೇ ಇರುತ್ತದೆ. ಅವರೊಂದಿಗೆ ನಾನು ಕಳೆದ ಕ್ಷಣಗಳನ್ನು, ಆಡಿದ ಮಾತುಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ'' ಎಂದಿದ್ದಾರೆ.

    Santoor Maestro Pandit Shivakumar Sharma Passed Away

    ಶಿವಕುಮಾರ್ ಶರ್ಮಾ, ಕಾಶ್ಮೀರದಲ್ಲಿ 1938 ರಲ್ಲಿ ಜನಿಸಿದರು. ಎಳವೆಯಲ್ಲಿ ತಬಲಾ ನುಡಿಸುತ್ತಿದ್ದ ಶಿವಕುಮಾರ ಶರ್ಮಾ ನಂತರ ಸಂತೂರ್ ವಾದ್ಯದತ್ತ ಆಕರ್ಷಿತರಾಗಿ ಅದನ್ನೇ ಅಭ್ಯಾಸ ಮಾಡಿದರು. ತಮ್ಮ ಹದಿಮೂರನೇಯ ವಯಸ್ಸಿನಲ್ಲಿಯೇ ಶಿವಕುಮಾರ ಶರ್ಮಾ ಮುಂಬೈನಲ್ಲಿ ಸಂತೂರ್ ವಾದ್ಯದ ಸಂಗೀತ ಪ್ರದರ್ಶನ ನೀಡಿದ್ದರು.

    ಭಾರತ ಸಂಗೀತ ಕ್ಷೇತ್ರದ ದಂತಕತೆ ಹರಿಪ್ರಸಾದ್ ಚೌರಾಸಿಯಾ ಅವರೊಟ್ಟಿಗೆ ಸೇರಿ ಹಲವಾರು ಹಿಂದಿ ಸಿನಿಮಾಗಳಿಗೆ ಸಂಗೀತವನ್ನು ಶಿವಕುಮಾರ್ ಶರ್ಮಾ ನೀಡಿದ್ದಾರೆ. 'ಸಿಲ್‌-ಸಿಲಾ', 'ಫಾಸ್ಲೆ', 'ಚಾಂದಿನಿ' ಶಾರುಖ್ ಖಾನ್ ನಟನೆಯ 'ಡರ್' ಇನ್ನೂ ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಸಿನಿಮಾ ಸಂಗೀತ ಅಲ್ಲದೆ, ಸಂತೂರ್ ವಾದನದ ಹಲವು ಆಲ್ಬಂಗಳನ್ನು ಶಿವಕುಮಾರ್ ಶರ್ಮಾ ತಂದಿದ್ದಾರೆ. ಜೊತೆಗೆ ವಿದೇಶಗಳಲ್ಲಿ ಅಸಂಖ್ಯ ಸಂಗೀತ ಪ್ರದರ್ಶನಗಳನ್ನು ನೀಡಿದ್ದಾರೆ.

    ಶಿವಕುಮಾರ್ ಶರ್ಮಾ ಅವರಿಗೆ ಪದ್ಮಶ್ರೀ, ಪದ್ಮವಿಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ದೇಶ, ವಿದೇಶಗಳಲ್ಲಿ ಹಲವಾರು ಪ್ರಶಸ್ತಿಗಳು, ಗೌರವಗಳು ಸಂದಿವೆ.

    English summary
    Famous Santoor maestro Pandit Shivakumar Sharma passed away on May 10 in Mumbai. He died due to heart attack.
    Tuesday, May 10, 2022, 16:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X