For Quick Alerts
  ALLOW NOTIFICATIONS  
  For Daily Alerts

  'ಸರಿಗಮಪ' ನಿಹಾರಿಕಾಳ ಹೊಸ ಮ್ಯೂಸಿಕ್ ಆಲ್ಬಂ ಬಿಡುಗಡೆ

  |

  ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಸರಿಗಮಪ ಕಾರ್ಯಕ್ರಮದ ಸ್ಪರ್ಧಿ ಆಗಿದ್ದ ನಿಹಾರಿಕಾ ಈಗ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ನಿಹಾರಿಕಾ ತಮ್ಮ ಹೊಸ ಮ್ಯೂಸಿಕ್ ಆಲ್ಬಂ ಬಿಡುಗಡೆ ಮಾಡಿದ್ದು, ಸಂತಸಲ್ಲಿದ್ದಾರೆ ಅವರ ತಂದೆ ರಾಜಶೇಖರ್.

  'ಬಿಗ್ ಬಾಸ್' ಎದುರು 'ಜೀ ಕನ್ನಡ' ಬಿಟ್ಟ ಬಾಣ : ಇದು TRP ಫೈಟ್

  'ಚಿಟ್ಟೆ' ಎಂಬ ಮ್ಯೂಸಿಕ್ ಆಲ್ಬಂ ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಲಹರಿ ಸಂಸ್ಥೆಯಿಂದ ಹಾಡುಗಳು ಹೊರಬಂದಿವೆ. ಮುರಳೀಧರ್ ರಾವ್ ಸಂಗೀತ ಹಾಗೂ ಶ್ರೀಚಂದ್ರ ಸಾಹಿತ್ಯ ಹಾಡಿನಲ್ಲಿದೆ. ಶ್ರೀಚಂದ್ರ 35 ಸಾವಿರಕ್ಕೂ ಅಧಿಕ ಹಾಡು ಬರೆದಿರುವ ಖ್ಯಾತಿ ಹೊಂದಿದ್ದಾರೆ.

  ಕನ್ನಡ ಕಿರುತೆರೆ ಕಾರ್ಯಕ್ರಮಕ್ಕೆ ಬರ್ತಾರೆ ಇಳಯರಾಜ

  ಶ್ರೇಯಾ ಘೋಷಲ್ ತಮ್ಮ ಸ್ಫೂರ್ತಿ ಎನ್ನುವ ನಿಹಾರಿಕಾ ಅವರಂತೆ ದೊಡ್ಡ ಗಾಯಕಿ ಆಗಬೇಕಂತೆ. ಅದೇ ಹಾದಿಯಲ್ಲಿ ಸಾಗುತ್ತಿರುವ ಅವರು ಈಗಾಗಲೇ ಮೂರು ಕನ್ನಡ ಸಿನಿಮಾಗಳ ಹಾಡನ್ನು ಹಾಡಿದ್ದಾರೆ. ಆರು ಭಾಷೆಗಳಲ್ಲಿ ಹಾಡುವ ಸಾಮರ್ಥ್ಯ ಹೊಂದಿದ್ದಾರೆ.

  ನಿಹಾರಿಕ ಅವರ ಗಾಯನಕ್ಕೆ ಈಗಾಗಲೇ ಅನೇಕ ಪ್ರಶಸ್ತಿ ಪುರಸ್ಕಾರಗಳು ಒಲಿದು ಬಂದಿವೆ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಅವರು ಹಾಡಿ ಜನಪ್ರಿಯತೆ ಪಡೆದಿದ್ದಾರೆ.

  English summary
  Zee Kannada channel's popular reality show 'Sarigamapa' fame Niharika's new album released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X