'ಸರಿಯಾಗಿ ನೆನಪಿದೆ' ಹಾಡಿನ ಧಾಟಿಯಲ್ಲಿ ಅಭಿಮಾನಿಯ ಪ್ರಯತ್ನ
ಶಶಾಂಕ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಮುಂಗಾರು ಮಳೆ 2 ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಜಯಂತ್ ಕಾಯ್ಕಿಣಿ ಮತ್ತೊಮ್ಮೆ ತಮ್ಮ ಗೀತ ಸಾಹಿತ್ಯದ ಮೂಲಕ ರಸಿಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. 'ಸರಿಯಾಗಿ ನೆನಪಿದೆ ನನಗೆ' ಹಾಡಿನ ಮೂಲಕ ಅರ್ಮಾನ್ ಮಲಿಕ್ ಕನ್ನಡಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ಸರಿಯಾಗಿ ನೆನಪಿದೆ ನನಗೆ ಚಿತ್ರದ ವಿಡಿಯೋ ಕಮ್ ಸಾಹಿತ್ಯ ಇರುವ ಸಾಂಗ್ ಕೂಡಾ ಝಾಂಕರ್ ಮ್ಯೂಸಿಕ್ ನಲ್ಲಿ ಲಭ್ಯವಿದೆ. ನಾಡಿನ ಯುವ ಪ್ರತಿಭಾವಂತ ಕವಿಗಳು ಗೀತ ಸಾಹಿತ್ಯ ರಚನೆಗೆ ತೊಡಗಲು ಇದು ಸಹಕಾರಿಯಾಗಿದೆ.
[ಮುಂಗಾರು ಮಳೆ 2 : 'ಸರಿಯಾಗಿ ನೆನಪಿದೆ' ಜಯಂತ್ ಸಾಹಿತ್ಯ] || [ಆಡಿಯೋ ವಿಮರ್ಶೆ: ಹಾಡುಗಳ ವರ್ಷಧಾರೆ 'ಮುಂಗಾರು ಮಳೆ']

ಅರ್ಜುನ್ ಜನ್ಯ ಅವರ ಟ್ಯೂನ್ ಹಾಗೂ ಕಾಯ್ಕಿಣಿ ಅವರ ಪ್ರೀತಿಯ ಸಾಲುಗಳಿಗೆ ಹೊಂದಬಲ್ಲ ಗೀತ ಸಾಹಿತ್ಯ ರಚಿಸಿ, ರಾಘವೇಂದ್ರ ಸಿವಿ ಅವರು ಬರೆದು ಕಳಿಸಿರುವ 'ಸರಿಯಾಗಿ ನೆನಪಿದೆ ನನಗೆ' ಆವೃತ್ತಿ ಇಲ್ಲಿದೆ ಓದಿ ಆನಂದಿಸಿ, ನೀವು ಕೂಡಾ ಇದೇ ಧಾಟಿಯಲ್ಲಿ ನಿಮ್ಮದೇ ಸಾಹಿತ್ಯ ರಚಿಸಿ ನಮಗೆ ಕಳಿಸಬಹುದು....ಇಮೇಲ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಸೆವಾಗ ಇರುಳಲಿ ಬೆರಳು
ಎದೆಯಲ್ಲಿ ಅರಳಿದೆ ಹೂಗಳು
ಒಲವ ಬೇಸಾಯ ಹೊಸದು
ಕೊಡು ನೀ ತರಬೇತಿ
ಕೆಣಕುವ ಕವಿತೆಯ ಇನಿದನಿ ಆಲಿಸು
ಬಿಡಿ ಬಣ್ಣಗಳ ಬೆಳಕು ಸುರಿಸು
ಗುಟ್ಟು ಮಾಡುತ ಬಚ್ಚಿಕೊಂಡಿದೆ
ನಿನ್ನ ಕಣ್ಣಲೇ ಪುಟ್ಟ ಅಂಬರ
ಅಚ್ಚುಮೆಚ್ಚಿನ ಇಚ್ಛೆಯೊಂದಿದೇ
ಹೇಳೋ ಮುನ್ನವೇ ಮರೆತೆ ಅಕ್ಷರ
ಕದಿಯೋ ಆಸೆ ಕುಡಿನೋಟ ನಂಗೀಗ
ಬಲು ಹಿತವಾಗಿ ಸಿಹಿ ಮುತ್ತ ಕೊಡುವಾಗ
ಮಿಡಿಯುತ ಮನಸಿದು ಆಗಿದೆ ವಿನಿಮಯ
ಪಿಸು ಮಾತುಗಳ ನಂಗೂ ಉಳಿಸು
ನೀನೇ ರೂಪಕ,ನೀನೇ ಮಾಪಕ
ಒಟ್ಟು ಮಾಡಿದ ನಮ್ಮ ಪ್ರೀತಿಗೆ
ಮುದ್ದು ಎನ್ನುತ,ಪೆದ್ದು ಮಾಡುತ
ಕೇಳು ನಿಂತಲೇ ನನ್ನ ಪೀಠಿಕೆ
ಕೊಡುವಾಗೆಲ್ಲಾ ಅಧರಕ್ಕೆ ಆಮಿಷ
ತನ್ನೇ ಮರೆವಷ್ಟು ಹೃದಯಕ್ಕೆ ಸಂತೋಷ
ಕಳೆಯುವ ಬದುಕನು ಕದಲದ ಕ್ಷಣದಲಿ
ನಿನ್ನ ಲೋಕದಲಿ ನನ್ನೂ ಅಲೆಸು...
- ರಾಘವೇಂದ್ರ ಸಿವಿ.
(ಫಿಲ್ಮಿಬೀಟ್ ಕನ್ನಡ)


Click it and Unblock the Notifications











