Just In
Don't Miss!
- News
ಶಿಲ್ಪಾ ಶೆಟ್ಟಿಗೆ ಬಹಳ ಖುಷಿ ನೀಡಿದ ಹೊಸ ಸಂಗತಿ ಯಾವುದು?
- Automobiles
ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Sports
ನಾಳೆಯಿಂದ ಕ್ರಿಕೆಟ್ ಲೋಕದಲ್ಲಿ ಮಹತ್ವದ ಬದಲಾವಣೆ
- Technology
ಗೂಗಲ್ ಫೋಟೋಸ್ ನಲ್ಲಿ ಇದೀಗ ಚಾಟ್ ಫೀಚರ್- ಇದರಲ್ಲಿ ನೀವೇನು ಮಾಡಬಹುದು?
- Lifestyle
ನಾಭಿಯ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರುವ ಅಚ್ಚರಿಯ ಸಂಗತಿಗಳು
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
''ಏನು ಸ್ವಾಮಿ ಮಾಡೋಣ..'' ಅಂತ ಕೇಳ್ತಿದ್ದಾರೆ ಪುನೀತ್, ರಿಷಿ
ನಟ ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾದಲ್ಲಿ ನಟ ರಿಷಿ ನಾಯಕನಾಗಿದ್ದರು. ಇದೀಗ ರಿಷಿ ಹೊಸ ಸಿನಿಮಾಗೆ ಪುನೀತ್ ರಾಜ್ ಕುಮಾರ್ ಹಾಡು ಹಾಡಿದ್ದಾರೆ.
'ಸಾರ್ವಜನಿಕರಿಗೆ ಸುವರ್ಣಾವಕಾಶ' ಸಿನಿಮಾದ ವಿಡಿಯೋ ಹಾಡು ಇಂದು ಬಿಡುಗಡೆಯಾಗಿದೆ. ಹಾಡು ಸಿಕ್ಕಾಪಟ್ಟೆ ಮಜಾವಾಗಿದೆ. ಪುನೀತ್ ರಾಜ್ ಕುಮಾರ್ ಧ್ವನಿ ಕಿಕ್ ನೀಡಿದೆ. ಲವ್ ಫೇಲ್ಯೂರ್ ಆದ ರಿಷಿ ಹಾಡುವ ಹಾಡು ಇದಾಗಿದೆ.
ಸಾರ್ವಜನಿಕರಿಗೆ ರಿಷಿ ಚಿತ್ರದಲ್ಲಿ ಅಪ್ಪು ಹಾಡು ಕೇಳುವ ಸುವರ್ಣಾವಕಾಶ
''ಏನು ಸ್ವಾಮಿ ಮಾಡೋಣ.. ಹಾಗೆ ಹೋಯ್ತು ಅದ್ವಾನ...'' ಎಂಬ ಹಾಡನ್ನು ಡಾ ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಅವರ ಪದಗಳು ಕೇಳುಗರಿಗೆ ಮಜಾ ಕೊಡುತ್ತಿವೆ. ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ರಿಷಿ ಡ್ಯಾನ್ಸ್ ತುಂಬ ಚೆನ್ನಾಗಿದೆ.
ಲವ್ ಫೇಲ್ಯೂರ್ ಹಾಡಾದರೂ, ಹಾಡಿನಲ್ಲಿ ಒಂದು ಹೊಸತನ ಇದೆ. ಪುನೀತ್ ರಾಜ್ ಕುಮಾರ್ ಧ್ವನಿಯೇ ಹಾಡಿನ ಹೈಲೈಟ್ ಆಗಿದೆ. 'ಸಾರ್ವಜನಿಕರಿಗೆ ಸುವರ್ಣಾವಕಾಶ' ಸಿನಿಮಾದ ಟ್ರೇಲರ್ ಈಗಾಗಲೇ ಹಿಟ್ ಆಗಿದ್ದು, ಹಾಡುಗಳು ಕೂಡ ಗಮನ ಸೆಳೆದಿವೆ.
'ಸಾರ್ವಜನಿಕರಿಗೆ ಸುವರ್ಣಾವಕಾಶ' ಅನೂಪ್ ರಾಮಸ್ವಾಮಿ ನಿರ್ದೇಶನದ ಸಿನಿಮಾ. ದೇವರಾಜ್ ಆರ್, ಪ್ರಶಾಂತ್ ರೆಡ್ಡಿ ಎಸ್ ಮತ್ತು ಜನಾರ್ಥನ್ ಚಿಕ್ಕಣ್ಣ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಧನ್ಯ ಬಾಲಕೃಷ್ಣ ಸಿನಿಮಾದ ನಾಯಕಿಯಾಗಿದ್ದಾರೆ.
''ಏನು ಸ್ವಾಮಿ ಮಾಡೋಣ.. ಹಾಗೆ ಹೋಯ್ತು ಅದ್ವಾನ...'' ಹಾಡು ಆನಂದ್ ಆಡಿಯೋ ಯೂ ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾ ಡಿಸೆಂಬರ್ ನಲ್ಲಿ ಬಿಡುಗಡೆ ಆಗುತ್ತಿದೆ.