'ಭೀಮ'ನ 'ಡೋಂಟ್ ವರಿ ಬೇಬಿ ಚಿನ್ನಮ್ಮ' ಸಾಂಗ್‌ಗೆ ಫ್ಯಾನ್ಸ್ ಫಿದಾ.. ಆದರೆ

ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕಳೆದ ವರ್ಷವೇ ಬರಬೇಕಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗಿತ್ತು. ಆಗಸ್ಟ್ 9ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಇದೀಗ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿ ಸದ್ದು ಮಾಡ್ತಿದೆ.

'ಸಲಗ' ಚಿತ್ರಕ್ಕೆ ಕೆಲಸ ಮಾಡಿದ್ದ ಬಹುತೇಕ ತಂಡ ಈ ಚಿತ್ರಕ್ಕೂ ಕೈ ಜೋಡಿಸಿದೆ. ಚರಣ್ ರಾಜ್ ಸಂಗೀತದಲ್ಲಿ ಒಂದೊಂದೇ ಹಾಡು ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಪಕ್ಕ ಲೋಕಲ್ ರೌಡಿಸಂ ಸಿನಿಮಾ ಇದು ಅನ್ನೋದು ಗೊತ್ತಾಗುತ್ತಿದೆ. ಡ್ರಗ್ ಮಾಫಿಯಾ ಕಥೆ ಚಿತ್ರದಲ್ಲಿದ್ದು ಒಂದೊಳ್ಳೆ ಸಂದೇಶವನ್ನು ಭೀಮ ಹೊತ್ತು ಬರುತ್ತಿದ್ದಾನೆ. ಈ ಹಿಂದೆ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ್ದ 'ಸಲಗ' ಸಿನಿಮಾ ಹಿಟ್ ಆಗಿತ್ತು. ಹಾಗಾಗಿ 'ಭೀಮ' ಕುತೂಹಲ ಮೂಡಿಸಿದೆ.

Second Lyrical Song Don t Worry Baby Chinnamma From duniya vijay starrer bheema Out

ಸಿಕ್ಕಾಪಟ್ಟೆ ರಾ ಸ್ಟೈಲ್‌ನಲ್ಲಿ 'ಭೀಮ' ಕಟ್ಟಿಕೊಡಲಾಗಿದೆ. ಅದಕ್ಕೆ ತಕ್ಕಂತೆ ಬಿಂದಾಸ್, ಟಪ್ಪಾಂಗುಚ್ಚಿ ಸಾಂಗ್ಸ್ ಚಿತ್ರದಲ್ಲಿದೆ. ಸದ್ಯ 'ಡೋಂಟ್ ವರಿ ಬೇಬಿ ಚಿನ್ನಮ್ಮ' ಎಂದು ಶುರುವಾಗುವ ಡ್ಯಾನ್ಸ್ ನಂಬರ್‌ವೊಂದು ರಿಲೀಸ್ ಆಗಿದೆ. ಚರಣ್ ರಾಜ್ ಸಂಗೀತದ ಸಾಂಗ್‌ಗೆ ನಾಗಾರ್ಜುನ ಶರ್ಮಾ ಸಾಲುಗಳನ್ನು ಪೋಣಿಸಿದ್ದಾರೆ. ಗಣ ಮುತ್ತು ವಾಯ್ಸ್‌ನಲ್ಲಿ ಸಾಂಗ್ ಕೇಳುಗರ ಗಮನ ಸೆಳೆದಿದೆ.

ಇನ್ನು ಪಕ್ಕಾ ಲೋಕಲ್ ಸ್ಟೈಲ್ ಎಣ್ಣೆ ಸಾಂಗ್ 'ಡೋಂಟ್ ವರಿ ಬೇಬಿ ಚಿನ್ನಮ್ಮ'. ನಾಗಾರ್ಜುನಾ ಶರ್ಮಾ ಕಲೋಕಿಯಲ್ ಶೈಲಿಯಲ್ಲಿ ಸಾಹಿತ್ಯ ಬರೆದಿದ್ದು ಗಣ ಮುತ್ತು ದನಿಯಲ್ಲಿ ಕಿಕ್ ಕೊಡುತ್ತಿದೆ. ನಗರದ ಲೋಕಲ್ ಏರಿಯಾಗಳಲ್ಲಿ ಸಾಂಗ್ ಶೂಟ್ ಮಾಡಲಾಗಿದೆ. ಸಾಂಗ್ ಇಷ್ಟವಾಗುತ್ತಿದೆ. ಆದರೆ ಕನ್ನಡದಲ್ಲಿ ಯಾರು ಗಾಯಕರು ಇರಲಿಲ್ವಾ? ತಮಿಳು ಗಾಯಕರನ್ನು ಕರೆತಂದಿದ್ದು ಯಾಕೆ? ಎಂದು ಕೆಲವರು ಬೇಸರ ವಸ್ಯಕ್ತಪಡಿಸುತ್ತಿದ್ದಾರೆ.

ಶಿವ್ ಸೇನಾ ಛಾಯಾಗ್ರಹಣ ಹಾಗೂ ಮಾಸ್ತಿ ಸಂಭಾಷಣೆ, ದೀಪು ಎಸ್ ಕುಮಾರ್ ಸಂಕಲನವಿದೆ. 'ಭೀಮ' ಚಿತ್ರಕ್ಕಿದೆ. ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ 'ಭೀಮ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಡ್ರಗ್ಸ್ ವ್ಯಸನದಿಂದ ಯುವ ಜನತೆ ಹೇಗೆ ಹಾಳಾಗುತ್ತಿದೆ. ಅದರಿಂದ ಹೊರ ಬರುವುದು ಹೇಗೆ? ಎನ್ನುವ ಅಂಶಗಳ ಸುತ್ತಾ ಚಿತ್ರದ ಕಥೆ ಸುತ್ತಲಿದೆ.

Second Lyrical Song Don t Worry Baby Chinnamma From duniya vijay starrer bheema Out

'ಭೀಮ' ಚಿತ್ರದಲ್ಲಿ ಅಶ್ವಿನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರಂಗಭೂಮಿ ಹಿನ್ನೆಲೆಯ ಅಶ್ವಿನಿ ಲೀಡ್ ರೋಲ್‌ನಲ್ಲಿ ಮಿಂಚಿದ್ದಾರೆ. ಬಿ. ಧನಂಜಯ್-ರಾಜು ಚಿತ್ರದ ಹಾಡುಗಳಿಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ದುನಿಯಾ ವಿಜಯ್ ಸಿನಿಮಾಗಳಲ್ಲಿ ಆಕ್ಷನ್‌ ಸೀಕ್ವೆನ್ಸ್‌ಗೆ ಹೆಚ್ಚಿನ ಮಹತ್ವ ಇರುತ್ತದೆ. ಈ ಚಿತ್ರಕ್ಕಾಗಿ ವಿನೋದ್, ಚೇತನ್ ಡಿಸೋಜಾ, ಟೈಗರ್ ಶಿವ ಹಾಗೂ ಗೌತಮ್ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ.

ಎರಡು ವರ್ಷಗಳಿಂದ ವಿಜಿ ನಟನೆಯ ಯಾವುದೇ ಸಿನಿಮಾ ತೆರೆಗೆ ಬರಲಿಲ್ಲ. ಕಳೆದ ವರ್ಷ ತೆಲುಗಿನ 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದರು. ಇದೀಗ 'ಭೀಮ'ನಾಗಿ ಪ್ರೇಕ್ಷಕರನ್ನು ರಂಜಿಸಲು ತಯಾರಿ ನಡೆಸುತ್ತಿದ್ದಾರೆ. 'ಸಲಗ' ಬಳಿಕ ಈ ಸಿನಿಮಾವೇ ತೆರೆಗೆ ಬರುತ್ತಿದೆ. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಆಗಸ್ಟ್ 9ಕ್ಕೆ ಸ್ವಾತಂತ್ರ ದಿನಾಚರಣೆ ಹೊಸ್ತಿಲಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ.

ಎರಡು ವರ್ಷಗಳ ಹಿಂದೆ 'ಕೋಟಿಗೊಬ್ಬ-3' ಸಿನಿಮಾ ಎದುರು ಬಂದ 'ಸಲಗ' ಸಿನಿಮಾ ಗೆದ್ದಿತ್ತು. ಈ ವರ್ಷ ಯಾವುದೇ ದೊಡ್ಡ ಕನ್ನಡ ಸಿನಿಮಾ ಇನ್ನು ಬಿಡುಗಡೆಯಾಗಲಿಲ್ಲ. ಆ ಲೆಕ್ಕದಲ್ಲಿ 'ಭೀಮ'ನೇ ಮೊದಲಿಗೆ ತೆರೆಗೆ ಬರ್ತಿದ್ದಾನೆ ಎಂದು ಎನ್ನಬಹುದು.

More from Filmibeat

English summary
Don't Worry Baby Chinnamma track from Duniya Vijay's Bheema released;
Read more about: vijay song sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X