ಲವ್ವಲ್ಲಿ ಬಿದ್ದುಬಿಟ್ನಲ್ಲ ರಗಡ್ 'ಯುವ'; ಪ್ರೇಮ 'ಕವಿತೆ' ಕೇಳುವ ಸಮಯ ಬಂತು
'ಯುವ' ಗಾನಬಜಾನ ಕಳೆದೊಂದು ವಾರದಿಂದ ಜೋರಾಗಿದೆ. ಈ ವಾರಾಂತ್ಯದಲ್ಲಿ ಅದು ಮತ್ತೊಂದು ಹಂತಕ್ಕೆ ಹೋಗಲಿದೆ. 'ಒಬ್ಬನೇ ಶಿವ ಒಬ್ಬನೇ ಯುವ' ಸಾಂಗ್ ಸೂಪರ್ ಹಿಟ್ ಆಗಿದೆ. ಈಗಾಗಲೇ 50 ಲಕ್ಷಕ್ಕೂ ಅಧಿಕ ವೀವ್ಸ್, 18 ಲಕ್ಷಕ್ಕೂ ಅಧಿಕ ಲೈಕ್ಸ್ ಗಿಟ್ಟಿಸಿ ಸಾಂಗ್ ಸದ್ದು ಮಾಡ್ತಿದೆ.
ಮಾರ್ಚ್ 28ಕ್ಕೆ 'ಯುವ' ಸಿನಿಮಾ ತೆರೆಗೆ ಬರ್ತಿದೆ. ಅದಕ್ಕೂ ಮುನ್ನ ಒಂದೊಂದೇ ಸಾಂಗ್ಸ್ ರಿಲೀಸ್ ಆಗುತ್ತಿವೆ. ಇದೀಗ ಎರಡನೇ ಸಾಂಗ್ ಕೇಳಿಸುವ ಸಮಯ ಬಂದಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಅಭಿಮಾನಿಗಳು ಪದೇ ಪದೆ 'ಒಬ್ಬನೇ ಶಿವ ಒಬ್ಬನೇ ಯುವ' ಸಾಂಗ್ ಕೇಳಿ ಎಂಜಾಯ್ ಮಾಡುತ್ತಿದ್ದಾರೆ. ಯುವ ರಾಜ್‌ಕುಮಾರ್ ಸಣ್ಣ ಸನ್ಣ ಡ್ಯಾನ್ಸ್ ಝಲಕ್ ನೋಡಿ ತೆರೆಮೇಲೆ ಕಂಪ್ಲೀಟ್ ಸಾಂಗ್ ಯಾವಾಗ ನೋಡುತ್ತೀವೋ ಎಂದು ಕಾಯುತ್ತಿದ್ದಾರೆ. ಮಾಸ್ ಇಂಟ್ರೋಡಕ್ಷನ್ ಸಾಂಗ್ ಬಳಿಕ ಒಂದು ಮೆಲೋಡಿ ಸಾಂಗ್ ಕೇಳಿಸಲು 'ಯುವ' ಚಿತ್ರತಂಡ ಸಜ್ಜಾಗಿದೆ.
ಅಜನೀಶ್ ಲೋಕನಾತ್ 'ಯುವ' ಚಿತ್ರಕ್ಕೆ ಟ್ಯೂನ್ ಹಾಕಿದ್ದಾರೆ. ಚಿತ್ರದಲ್ಲಿ 4ರಿಂದ 5 ಹಾಡು ಇದೆ ಎನ್ನಲಾಗ್ತಿದೆ. ಯುವ ರಾಜ್‌ಕುಮಾರ್ ಜೋಡಿಯಾಗಿ ಚಿತ್ರದಲ್ಲಿ 'ಕಾಂತಾರ' ಬೆಡಗಿ ಸಪ್ತಮಿ ಗೌಡ ನಟಿಸಿದ್ದಾರೆ. ಸಲ್ವಾರ್ ತೊಟ್ಟು ಚಷ್ಮಾ ಹಾಕಿಕೊಂಡು ಪುಸ್ತಕ ಹಿಡಿದು ಕುಳಿತ ನಾಯಕಿ. ಮೊಬೈಲ್ ಹಿಡಿದು ಆಕೆಗೆ ಒರಗಿದ 'ಯುವ' ಪೋಸ್ಟರ್ ಸಮೇತ ಸೆಕೆಂಡ್ ಸಾಂಗ್ ರಿಲೀಸ್ ಅಪ್‌ಡೇಟ್ ಸಿಕ್ಕಿದೆ.
ನಿಮ್ಮ ಪ್ಲೇಲಿಸ್ಟ್‌ನಲ್ಲಿ ದರ್ಬಾರ್ ನಡುಸುವ ಸೋಲ್‌ಫುಲ್ ಮೆಲೋಡಿ ಸಾಂಗ್ 'ಕವಿತೆ ಕವಿತೆ' ಚಿತ್ರತಂಡ ಪೋಸ್ಟ್ ಮಾಡಿದೆ. ಯುವ- ಸಪ್ತಮಿ ಕಾಂಬಿನೇಷನ್ ನಿರೀಕ್ಷೆ ಹುಟ್ಟಾಕ್ಕಿದೆ. 'ಕಾಂತಾರ' ಚಿತ್ರದಲ್ಲಿ ಲೀಲಾ ಆಗಿ ಸಪ್ತಮಿ ಮೋಡಿ ಮಾಡಿದ್ದರು. ಬಳಿಕ ಬಾಲಿವುಡ್ ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. ಈಗಾಗಲೇ ತೆಲುಗು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಯುವ' ಸಿನಿಮಾ ಮೂಲಕ ಮತ್ತೊಮ್ಮೆ ಕನ್ನಡ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ.
'ಯುವ' ಚಿತ್ರದಲ್ಲಿ ಇಂಜಿನಿಯರಿಂಗ್ ಕಾಲೇಜ್ ಸ್ಟೂಡೆಂಟ್ಸ್ ಕಥೆ ಹೇಳಲಾಗುತ್ತಿದೆ. ಯುವ ರಾಜ್‌ಕುಮಾರ್ ಖಡಕ್ ರೋಲ್‌ನಲ್ಲಿ ನಟಿಸಿದ್ದಾರೆ. ತಮ್ಮವರಿಗೆ ಹೋರಾಡುವ ನಾಯಕನಾಗಿ ಅಬ್ಬರಿಸಿದ್ದಾರೆ. ಜೊತೆಗೊಂದು ಲವ್ ಸ್ಟೋರಿ ಕೂಡ ಇದೆ. ಆ ಲವ್ ಸ್ಟೋರಿಯ ನಾಯಕಿ ಸಪ್ತಮಿ ಗೌಡ.
ಫಸ್ಟ್ ಸಾಂಗ್‌ನಲ್ಲಿ ಅಜನೀಶ್ ಲೋಕನಾಥ್ ಟ್ಯೂನ್ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಆದರೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಗಾಗಿ ಸೆಕೆಂಡ್ ಸಾಂಗ್‌ನಲ್ಲಿ ಅಜನೀಶ್ ಟ್ಯೂನ್ ಬಗ್ಗೆ ನಿರೀಕ್ಷೆ ಇದೆ.
ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ 'ಯುವ' ಚಿತ್ರದಲ್ಲಿದೆ. ಇನ್ನು ಹೊಸಪೇಟೆಯಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ಪ್ಲ್ಯಾನ್ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. 'ಯುವ' ಎರಡನೇ ಹಾಡನ್ನು ನೇರವಾಗಿ ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡುವ ಸಾಧ್ಯತೆಯಿದೆ.
ಈ ತಿಂಗಳು ದೊಡ್ಮನೆ ಹೀರೊಗಳ ಮೂರು ಸಿನಿಮಾಗಳು ತೆರೆಗೆ ಬರ್ತಿದೆ. ಈಗಾಗಲೇ ಶಿವಣ್ಣ ನಟನೆಯ 'ಕರಟಕ ದಮನಕ' ಸಿನಿಮಾ ತೆರೆಕಂಡಿದೆ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಮಾರ್ಚ್ 15ಕ್ಕೆ 'ಜಾಕಿ' ಸಿನಿಮಾ ರೀ ರಿಲೀಸ್ ಆಗಲಿದೆ. ಇನ್ನು ತಿಂಗಳಾಂತ್ಯಕ್ಕೆ 'ಯುವ' ದರ್ಬಾರ್ ಶುರುವಾಗಲಿದೆ.


Click it and Unblock the Notifications











