ವಿಡಿಯೋ : ರಾಜ ರಾಣಿಯಾದ ನಿಖಿಲ್ ಕುಮಾರ್, ರಚಿತಾ
ನಟ ನಿಖಿಲ್ ಕುಮಾರ್ ಹಾಗೂ ರಚಿತಾ ರಾಮ್ ಅಭಿನಯದ 'ಸೀತಾರಾಮ ಕಲ್ಯಾಣ' ಸಿನಿಮಾಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ವೇಳೆ ಸಿನಿಮಾದ ಒಂದು ಹಾಡು ರಿಲೀಸ್ ಆಗಿದೆ.
'ಸೀತಾರಾಮ ಕಲ್ಯಾಣ' ಚಿತ್ರದ ಮೊದಲ ಹಾಡು ಇದಾಗಿದೆ. ಕೇಳುವುದಕ್ಕೆ ಹಾಡು ಇಂಪಾಗಿದೆ. ಕೇಳುತ್ತಾ ಕೇಳುತ್ತಾ ಇಷ್ಟ ಆಗುವಂತಿದೆ. ಹಾಡಿನಲ್ಲಿ ರಾಜ ರಾಣಿಯಾಗಿ ನಿಖಿಲ್, ರಚಿತಾ ಕಾಣಿಸಿಕೊಂಡಿದ್ದಾರೆ. ವಿ ಸಾಯಿ ಸುಕನ್ಯಾ ಈ ಹಾಡನ್ನು ಬರೆದಿದ್ದಾರೆ.

ಹಾಡಿನಲ್ಲಿ ತುಂಬ ಇಷ್ಟ ಆಗುವುದು ಅರ್ಮನ್ ಮಲ್ಲಿನ್ ಧ್ವನಿ. ಸ್ಯಾಂಡಲ್ ವುಡ್ ನಲ್ಲಿ ದಿನೇ ದಿನೇ ಅರ್ಮನ್ ಮಲ್ಲಿಕ್ ಡಿಮ್ಯಾಂಡ್ ಹೆಚ್ಚಾಗುತ್ತಿದ್ದು, ಈ ಹಾಡು ಕೂಡ ಅವರ ಖಾತೆಗೆ ಸೇರಿಕೊಂಡಿದೆ. ಟಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅನೂಪ್ ರುಬಿನ್ಸ್ ಮ್ಯೂಸಿಕ್ ನೀಡಿದ್ದಾರೆ.
ಯೂ ಟ್ಯೂಬ್ ನಲ್ಲಿ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹಾಡು ಒಂದು ಲಕ್ಷದ ಸನೀಹದಲ್ಲಿ ಇದೆ. ಇನ್ನು 'ಸೀತಾರಾಮ ಕಲ್ಯಾಣ' ಕುಮಾರಸ್ವಾಮಿ ಅವರ ಚಿನ್ನಾಂಬಿಕಾ ಬ್ಯಾನರ್ ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾವಾಗಿದೆ. ಎ ಹರ್ಷ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.


Click it and Unblock the Notifications











