ವಿಡಿಯೋ : 'ಸೀತಾರಾಮ'ರ ಕಲ್ಯಾಣೋತ್ಸವದ ಹಾಡು ಕೇಳಿ
ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕನ್ನಡದ ಹೊಸ ಹೊಸ ಸಿನಿಮಾಗಳ ಪೋಸ್ಟರ್, ಹಾಡುಗಳು, ಟ್ರೇಲರ್ ಗಳು ಬಿಡುಗಡೆಯಾಗುತ್ತಿವೆ. ಇದೀಗ 'ಸೀತಾರಾಮ ಕಲ್ಯಾಣ' ಸಿನಿಮಾದ ಹಾಡು ಹಬ್ಬದ ವಿಶೇಷವಾಗಿ ಹೊರ ಬಂದಿದೆ.
ಸಿನಿಮಾದಲ್ಲಿ ಬರುವ ಮದುವೆ ಹಾಡು ಇದಾಗಿದೆ. 'ಮಾಂಗಲ್ಯಂ ತಂತುನಾನೇನಾ..' ಹಾಡು ಕೇಳಿದ ಕೂಡಲೇ ಇಷ್ಟವಾಗುವಂತಿದೆ. ನಿಖಿಲ್ ರಚಿತಾ ಹಾಡಿನಲ್ಲಿ ಸಖತ್ ಹೆಜ್ಜೆ ಹಾಕಿದ್ದಾರೆ. ಅದ್ದೂರಿಯಾಗಿ ಈ ಹಾಡು ಮೂಡಿ ಬಂದಿದೆ. ಸೀತಾ ರಾಮರ ಇಡೀ ಕುಟುಂಬ ಹಾಡಿನಲ್ಲಿ ಸೇರಿಕೊಂಡಿದೆ.

ವಿಜಯ್ ಪ್ರಕಾಶ್ ಈ ಹಾಡನ್ನು ಹಾಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಅನೂಪ್ ರುಬೆನ್ಸ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
'ನಿನ್ನ ರಾಜ ನೀನು... ನನ್ನ ರಾಣಿ ನೀನು..' ಹಾಡಿನ ರೀತಿ ಮೂರನೇ ಹಾಡು ಕೂಡ ಹಿಟ್ ಆಗುವ ಸೂಚನೆ ನೀಡಿದೆ.
English summary
Kannada actor Nikhil Kumar's 'Seetharama Kalyana' movie 2nd song released.
sankranti kumaraswamy nikhil kumar song rachitha ram sandalwood ನಿಖಿಲ್ ಕುಮಾರ್ ಕುಮಾರಸ್ವಾಮಿ ಹಾಡು ರಚಿತಾ ರಾಮ್ ಸ್ಯಾಂಡಲ್ ವುಡ್


Click it and Unblock the Notifications