ಸಂಗೀತ ನಿರ್ದೇಶನ ಕನಸಿಗೆ ಶಮಿತಾ ಚಾಲನೆ

<ul id="pagination-digg"><li class="previous"><a href="/music/shamitha-malnad-state-award-birugali-song-068728.html">« Previous</a>

Samitha Malnad
ಹೌದು, ಆದರೆ ಅದು ಇನ್ನೂ ಪ್ರಾರಂಭದ ಹಂತದಲ್ಲೇ ಇದೆ. ನನ್ನ ಪ್ರಕಾರ, ಪ್ರತಿಯೊಬ್ಬ ಸಂಗೀತಗಾರರಿಗೂ ಸಂಗೀತ ನಿರ್ದೇಶನ ಮಾಡುವ ಅಭಿಲಾಷೆ ಇರುತ್ತದೆ. ಅದನ್ನು ಪೋಷಿಸಿ ಬೆಳೆಸಿದರೆ ಸಂಗೀತಗಾರರು ಸಂಗೀತ ನಿರ್ದೇಶಕರಾಗುತ್ತಾರೆ. ನನಗೂ ಸಂಗೀತ ನಿರ್ದೇಶನದ ಕನಸಿತ್ತು, ಇದೆ...ಮಾಡಿದ್ದೇನೆ.

ಸಾಕಷ್ಟು ಗೀತೆಗಳಿಗೆ ಮನೆಯಲ್ಲೇ ಕಾಂಪೋಸ್ ಮಾಡಿದ್ದೇನೆ ಕೂಡ. ಅಷ್ಟೇ ಅಲ್ಲ, ನನ್ನ ಸಂಗೀತ ನಿರ್ದೇಶನದಲ್ಲಿ 'ಪದ್ಮಶ್ರೀ ನಿಸಾರ್ ಅಹಮ್ಮದ್' ಅವರ 'ಮಿಲನೋತ್ಸವ' ಎಂಬ ಮ್ಯೂಸಿಕ್ ಆಲ್ಬಮ್, ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ. ಬಾಗೂರು ಮಾರ್ಕಂಡೇಯ ಮತ್ತು ನಾನು ಹಾಡಿರುವ 'ಕಂದಾ ನೀ ಹಾಡೊಂದಾ' ಎಂಬ ಇನ್ನೊಂದು ಆಲ್ಬಾಮ್ ಗೆ ಕೂಡ ನಾನು ಸಂಗೀತ ನಿರ್ದೇಶನ ಮಾಡಿದ್ದೇನೆ.

'ಸ್ವರಸನ್ನಿಧಿ' ಟ್ರಸ್ಟ್ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ಬಹಳಷ್ಟು ಕಾರ್ಯಕ್ರಮಗಳು ಸಮಾಜಮುಖಿ ಆಗಿರುತ್ತವೆ. ಸಂಗೀತದ ಮೂಲಕ ಸಮಾಜ ಸೇವೆ ಮಾಡುವ ಆ ಅವಕಾಶ ನನಗೆ ಸಾಕಷ್ಟು ಬಾರಿ ಲಭಿಸಿದೆ. ನಾನು ಸಂಗೀತದ ಮೂಲಕ ಹೆಚ್ಚುಹೆಚ್ಚು ಸಮಾಜಸೇವೆ ಮಾಡಲು ಇಷ್ಟಪಡುತ್ತೇನೆ.

* ಮತ್ತೆ ನಿಮ್ಮ ಡೆಂಟಲ್ ವೈದ್ಯ ವೃತ್ತಿ ಕಥೆ?

(ಮತ್ತೆ ನಗು...) ರಾಜಾಜಿನಗರ, ನವರಂಗ್ ಬಳಿ ಲಕ್ಷ್ಮೀ ಡೆಂಟಲ್ ಕ್ಲಿನಿಕ್ ಇದೆ. ಅದನ್ನು ನಾನುಹಾಗೂ ನನ್ನ ಕಸಿನ್ ನೋಡಿಕೊಳ್ಳುತ್ತೇವೆ. ವಾರಕ್ಕೆ ಎರಡು ದಿನಗಳು ಹಾಗೂ ಸಮಯಸಿಕ್ಕಾಗ ಕ್ಲಿನಿಕ್ ಗೆ ಹೋಗುತ್ತೇನೆ. ಅದನ್ನೂ ಸಂಪೂರ್ಣವಾಗಿ ಬಿಟ್ಟಿಲ್ಲ. ಆದರೂ ಇತ್ತೀಚಿಗೆ ಹಿನ್ನಲೆ ಗಾಯನದಲ್ಲಿ ಬಹಳಷ್ಟು ಆಫರ್ ಬರುತ್ತಿರುವುದರಿಂದ ವೈದ್ಯೆಯಾಗಿ ಆಸ್ಪತ್ರೆ ಕಡೆ ಹೆಜ್ಜೆಹಾಕುವುದು ಅಪರೂಪವಾಗುತ್ತಿದೆ.

* ಮುಂದಿನ ಗುರಿ, ಕನಸು...

ಡಾಕ್ಟರ್ ಆಗಿ ಜನಸೇವೆ ಮಾಡುವ ಅವಕಾಶವನ್ನು ಸಂಪೂರ್ಣವಾಗಿ ಮಿಸ್ ಮಾಡಿಕೊಳ್ಳುವುದಿಲ್ಲ. ಜೊತೆಗೆ ಈಗಿನಂತೆ ಬಂದ ಅವಕಾಶಗಳಿಗೆ ಹಾಡುವ ಹಿನ್ನೆಲೆ ಗಾಯನ ವೃತ್ತಿಯನ್ನೂ ಮುಂದುವರಿಸಲಿದ್ದೇನೆ. ಸಂಗೀತ ನಿರ್ದೇಶನದಲ್ಲಿ ಈಗಿನ್ನೂ ಅಂಬೆಗಾಲು ಇಡುತ್ತಿದ್ದೇನೆ. ಅದನ್ನು ಬೆಳೆಸಿಕೊಂಡು ಯಶಸ್ವಿ ಸಂಗೀತ ನಿರ್ದೇಶಕಿಯಾಗಿ ಮುಂದೆ ಗುರುತಿಸಿಕೊಳ್ಳಬೇಕಿದೆ. ಜೊತೆಗೆ ಭಕ್ತಗೀತೆ, ಜನಪದಗೀತೆ, ಸುಗಮನಸಂಗೀತ ಕಾರ್ಯಕ್ರಮಗಲ್ಲಿಯೂ ಎಂದಿನಂತೆ ಹಾಡುವುದನ್ನು ಮುಂದುವರಿಸಿಕೊಂಡು ಹೋಗಲಿದ್ದೇನೆ. ಎಲ್ಲದರಲ್ಲೂ 'ದಿ ಬೆಸ್ಟ್' ನೀಡುವ ಕನಸು ನನ್ನದು...

***

<ul id="pagination-digg"><li class="previous"><a href="/music/shamitha-malnad-state-award-birugali-song-068728.html">« Previous</a>

More from Filmibeat

English summary
Dr Shamitha Malnad is Famous Kannada Film Songs Singer and Popular anchor. She sung more than 1000 songs, including Film songs, Devotional Songs, Folk Songs and Remix Songs. This is the Interview of Singer Dr Shamitha Malnad, Read for the more...&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X