ತೆಲುಗಿನ ನಾಗವಲ್ಲಿ ಹಾಡಿಗೆ ಧ್ವನಿಯಾದ ಶಮಿತಾ
Next »
« Previous
Shamitha Malnad
ತೆಲುಗು ಚಿತ್ರ 'ನಾಗವಲ್ಲಿ (ಕನ್ನಡದ ಆಪ್ತಮಿತ್ರ ರೀಮೇಕ್)' ಹಾಡುಗಳನ್ನು ಹಾಡಿದ್ದೇನೆ. ಜೊತೆಗೆ, ಪ್ರಸಿದ್ಧ ಗಾಯಕಿ 'ಎಲ್ ಆರ್ ಈಶ್ವರಿ' ಹಾಡಿರುವ ಕನ್ನಡ ಮತ್ತು ತೆಲುಗು ಹಾಡುಗಳ ರೀಮಿಕ್ಸ್ ಸೇರಿದಂತೆ 7 'ಸೋಲೋ ಆಲ್ಬಂ'ಗಳು ಮಾರುಕಟ್ಟೆಯಲ್ಲಿವೆ. ಸಾಕಷ್ಟು ಟಿವಿ ಶೋಗಳಲ್ಲಿ ಹಾಡಿದ್ದೇನೆ.
* ನಿಮ್ಮ, ನಿಮಗಿಷ್ಟವಾದ ಹಾಡುಗಳು...
ನಾನು ಹಾಡಿದ ಹಾಡುಗಳೆಲ್ಲವೂ ನನಗೆ ಇಷ್ಟವೇ. ಅದರಲ್ಲಿ ನಾನು ಸಿನಿಮಾಗೆ ಹಾಡಿದ ಮೊದಲನೇ ಹಾಡು ಸೇರಿದಂತೆ ತಕ್ಷಣಕ್ಕೆ ನೆನಪಾಗುವ ಹಾಡು ಇವು...
*ಶುಕ್ರಿಯಾ ಶುಕ್ರಿಯಾ... (ನಿನಗಾಗಿ)
*ನನ್ನಲಿ ನಾನಿಲ್ಲ....(ಕರಿಯ)
*ಮಧುರಾ ಪಿಸು ಮಾತಿಗೆ... (ಬಿರುಗಾಳಿ)
*ಐತಲಕ್ಕಡಿ... (ಗಜ)
*ಭಾವಲೋಕದಾ ರಾಯಭಾರಿ... (ಜಾನಿ ಮೇರಾ ನಾಮ್)
*ಯಾರೀ ಯಾರೀ...(ಜುಗಾರಿ ಚಿತ್ರ- ಕಾಸಿನೋವಾ ಹಾಗೂ ಅರೇಬಿಯನ್ ಸಂಗೀತದ ಸಂಗಮದಲ್ಲಿ ಮೂಡಿಬಂದಿರುವ ವಿಶಿಷ್ಟ ಹಾಡು)
* ಇತ್ತೀಚಿಗೆ ಹಾಡಿದ ಹಾಡು ಯಾವುದು?
ಇತ್ತೀಚಿಗೆ ಸಾಕಷ್ಟು ಹಾಡುಗಳನ್ನು ಹಾಡಿದ್ದೇನೆ... 'ಸಾರಥಿ' ಚಿತ್ರದ 'ಮನಸೆ ಮನಸೇ, ನನ್ನಿಷ್ಟಕ್ಕೆ ಬಿಡು...' ಹಾಗೂ ಕಿಟ್ಟಪ್ಪ ಕಿಟ್ಟಪ್ಪ..., 'ರಾಂಬೋ. ಚಿತ್ರದ .ಜಯಾ ಜಯಾ ಜಾಕೆಟ್ಟು...', 'ರೋಮಿಯೋ' ಚಿತ್ರದ 'ಬೈಟು ಬೆಡ್ ಶೀಟಿನಲ್ಲಿ...' ಹಾಗೂ ಇದೀಗ ಪ್ರದರ್ಶನ ಕಾಣುತ್ತಿರುವ 'ಕಲ್ಪನಾ' ಚಿತ್ರದ 'ರಾ' ಹಾಡು 'ಸುಂಟರಗಾಳಿ...'ಹೀಗೆ ಪಟ್ಟಿ ಸಾಗಿದೆ. ಇನ್ನೂ ಬಿಡುಗಡೆಯಾಗದಿರುವ ಕೆಲವು ಚಿತ್ರಗಳ ಹಾಡುಗಳು ಇವೆ.
* ಸಂಗೀತವಲ್ಲದೇ ಬೇರೆ ಯಾವ ಹವ್ಯಾಸವಿದೆ?
ನನಗೆ ಡಾನ್ಸ್ ಇಷ್ಟ, ಶಾಸ್ತ್ರೀಯವಾಗಿ ಕಲಿತಿದ್ದೇನೆ. ಬಹಳಷ್ಟು ಡಾನ್ಸ್ ಪ್ರೋಗ್ರಾಂಗಳಲ್ಲಿ ಭಾಗವಹಿಸಿದ್ದೇನೆ ಕೂಡ. ಜೊತೆಗೆ ಕ್ರೀಡೆ ಹಾಗೂ ಕಾರ್ಯಕ್ರಮಗಳ ನಿರೂಪಣೆ ಮಾಡುವುದು ನನಗಿಷ್ಟ. ಸಾಕಷ್ಟು ಸ್ಟೇಜ್ ಶೋಗಳನ್ನು ಹಾಗೂ ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇನೆ.
* ಸಿನಿಮಾ ನಟನೆಯಲ್ಲಿ ಆಸಕ್ತಿ, ಆಫರ್?
(ನಗು...) ನನಗೆ ನಟನೆಯಲ್ಲಿ ಆಸಕ್ತಿಯಿಲ್ಲ. ಆದರೆ ಮದುವೆಗಿಂತ ಮೊದಲು ಆಫರ್ ಬಂದಿತ್ತು. ಓದಿನ ಕಡೆ ಗಮನ ನೀಡುವ ಸಲುವಾಗಿ ಅದನ್ನು ಒಪ್ಪಿಕೊಳ್ಳಲಿಲ್ಲ. ಜೊತಗೆ ನನ್ನ ಒಲವು ಸಂಗೀತದ ಕಡೆ ಇತ್ತೇ ಹೊರತೂ ನಟನೆಯ ಕಡೆಗೆ ಇರಲಿಲ್ಲ. ಹೀಗಾಗಿ ಬಂದ ಆಫರ್ ಗಳನ್ನು ನಯವಾಗಿ ತಿರಸ್ಕರಿಸಿದ್ದೇನೆ.
ಆದರೆ ಕೆಲವೊಂದು 'ಗೀತಚಿತ್ರ'ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಹಿಂದೊಮ್ಮೆ ಇದ್ದ 'ಕಾವೇರಿ ಚಾನೆಲ್' ನಲ್ಲಿ ಪ್ರಸಾರವಾದ 4 ಗೀತಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಅದಕ್ಕೆ 'ಹಿರುಯೂರು ರಾಘವೇಂದ್ರ' ನಿರ್ದೇಶಕರು. ಅದರಲ್ಲಿ ಹಾಡನ್ನು ಹಾಡಿರುವ ಜೊತೆಗೆ ನಿರೂಪಣೆ ಮೂಲಕ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದೇನೆ.
* ಸಂಗೀತ ನಿರ್ದೇಶನ ಮಾಡಿದ್ದೀರಾ?
ಹೌದು, ಆದರೆ ಅದು ಇನ್ನೂ ಪ್ರಾರಂಭದ ಹಂತದಲ್ಲೇ ಇದೆ. ನನ್ನ ಪ್ರಕಾರ, ಪ್ರತಿಯೊಬ್ಬ ಸಂಗೀತಗಾರರಿಗೂ ಸಂಗೀತ ನಿರ್ದೇಶನ ಮಾಡುವ ಅಭಿಲಾಷೆ ಇರುತ್ತದೆ. ಅದನ್ನು ಪೋಷಿಸಿ ಬೆಳೆಸಿದರೆ ಸಂಗೀತಗಾರರು ಸಂಗೀತ ನಿರ್ದೇಶಕರಾಗುತ್ತಾರೆ. ನನಗೂ ಸಂಗೀತ ನಿರ್ದೇಶನದ ಕನಸಿತ್ತು, ಇದೆ...ಮಾಡಿದ್ದೇನೆ. ಮುಂದಿನ ಪುಟ ನೋಡಿ...
Next »
« Previous
More from Filmibeat
English summary
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X