twitter
    For Quick Alerts
    ALLOW NOTIFICATIONS  
    For Daily Alerts

    ಶಂಕರ್ ಗೆ ಆಸ್ಕರ್ ಸಿಕ್ಕರೆ ಬೆಂಗಳೂರಲ್ಲಿ ಹಬ್ಬ

    By ಜೇಮ್ಸ್ ಮಾರ್ಟಿನ್
    |

    ಬೆಂಗಳೂರಿನ ಸರ್ಕಾರೇತರ ಸಂಸ್ಥೆ ಜನಾಗ್ರಹ ನಿರ್ಮಿಸಿರುವ ಖ್ಯಾತ ಗಾಯಕ ಶಂಕರ್ ಮಹಾದೇವನ್ ಹಾಡಿರುವ ಸಂಗೀತದ ಆಲ್ಬಮ್ ನ ಗೀತೆಯೊಂದು ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ.

    ಶಂಕರ್ ಮಹದೇವನ್ ಹಾಡಿರುವ 'ಮುಜ್ ಸೆ ಹೋಗಿ ಶುರುವತ್ ಹಾಡು' 2014 ರ ಹಾನೆಸ್ಟಿ ಆಸ್ಕರ್ ಗೌರವ ಪಡೆಯುವ ಸ್ಪರ್ಧೆಗೆ ನಾಮ ನಿರ್ದೇಶನಗೊಂಡಿದೆ. ಸ್ಪರ್ಧೆಯಲ್ಲಿರುವ ಹಾಡುಗಳ ಪೈಕಿ ಹೆಚ್ಚು ಮತ ಪಡೆದ ಗೀತೆ ಆಸ್ಕರ್ ಪ್ರಶಸ್ತಿ ಪಡೆಯಲಿದೆ.

    ಬೆಂಗಳೂರಿನ ಜನಾಗ್ರಹ ಸಂಸ್ಥೆಯ ಐಪೇಡ್ ‌ಬ್ರೈಬ್ ಡಾಟ್ ‌ಕಾಮ್(ipaidabribe) ಮತ್ತು ಆಲ್ ‌ಲೈನ್ ಮ್ಯೂಜಿಕ್ ಜಂಟಿಯಾಗಿ ಗೀತೆಯನ್ನು ನಿರ್ಮಿಸಿವೆ. ಭ್ರಷ್ಟಾಚಾರದ ವಿರುದ್ಧ ಜಾಗತಿಕ ಹೋರಾಟದ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವ ಸಲುವಾಗಿ ಈ ಗೀತೆಯನ್ನು ಜನಾಗ್ರಹ ಸಂಸ್ಥೆ ನಿರ್ಮಿಸಿದ್ದು, ಶಂಕರ್ ‌ಮಹಾದೇವನ್ ಮತ್ತು ತಂಡವರು ತಮ್ಮ ದನಿ ನೀಡಿದ್ದಾರೆ.

    ಶಂಕರ್ ಅವರ ಜತೆಗೆ ಸುಪ್ರೀತಿ ಕಾಕರ್, ಪ್ರಕೃತಿ ಕಾಕರ್, ಚೇತನಾ ನಾಯಕ್ ಹಾಡಿಗೆ ದನಿಯಾಗಿರುವ ಈ ಗೀತೆಗೆ ಸೋಮಿ ಮತ್ತು ಸಿದ್ಧಾರ್ಥ ಸಹ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಶಂಕರ್ ‌ಮಹಾದೇವನ್ ತಾವೇ ಹಾಡಿ ಸಂಗೀತವನ್ನೂ ನೀಡಿದ್ದಾರೆ. ತಮ್ಮ ಹಾಡಿಗೆ ಹೆಚ್ಚಿನ ಮತ ಹಾಕುವಂತೆ ಅವರು ಮನವಿ ಮಾಡಿದ್ದಾರೆ.

    ಜನಾಗ್ರಹ ಸಂಸ್ಥೆ ಭ್ರಷ್ಟಾಚಾರದ ವಿರುದ್ಧ ವ್ಯಾಪಕ ಜನಜಾಗೃತಿ ಮೂಡಿಸುತ್ತಿದೆ. ಈ ಆಂದೋಲನದಲ್ಲಿ ಸಾರ್ವಜನಿಕರನ್ನು ತೊಡಗಿಸುವ ಸಲುವಾಗಿ ದೃಶ್ಯ ಮಾಧ್ಯಮ ಸೇರಿದಂತೆ ಎಲ್ಲಾ ರೀತಿಯ ಅವಕಾಶಗಳನ್ನು ಬಳಸಿಕೊಳ್ಳುತ್ತಿದೆ. 'ಮುಜ್ ಸೆ ಹೋಗಿ ಶುರುವತ್' ಹಾಡು ಹಣ ನೀಡುವ ಅನಿವಾರ್ಯತೆ ಕುರಿತು ಆಕ್ರೋಶ ವ್ಯಕ್ತಪಡಿಸುವುದಾಗಿದೆ. ಒಂದು ವೇಳೆ ಇದಕ್ಕೆ 86ನೇ ಆಕಾಡೆಮಿ ಪ್ರಶಸ್ತಿ(ಆಸ್ಕರ್) ದೊರೆತಿದ್ದೇ ಆದರೆ ಭ್ರಷ್ಟಾಚಾರದ ವಿರುದ್ಧ ಭಾರತದ ಧ್ವನಿ ಜಾಗತಿಕ ಮಟ್ಟದಲ್ಲಿ ಕೇಳಿ ಬರಲಿದೆ.

    ಆಸ್ಕರ್ ಸ್ಪರ್ಧೆಯಲ್ಲಿರುವ ಇತರೆ ಮ್ಯೂಸಿಕ್ ಆಲ್ಬಂ

    ಆಸ್ಕರ್ ಸ್ಪರ್ಧೆಯಲ್ಲಿರುವ ಇತರೆ ಮ್ಯೂಸಿಕ್ ಆಲ್ಬಂ

    ಲಿಬಿರಿಯಾದ ರೋಮಿಯೋ ಲೀ ಅವರ 'ಪಾಟ್ ಬಾಯಿಲಿಂಗ್ ರಿಮಿಕ್ಸ್', ಕೀನ್ಯಾದ ಸರಬಿ ಬ್ಯಾಂಡ್ ನ 'ಎಲ್ ಸೂರ್", ಈಜಿಪ್ಟ್ ನ ಯುಸ್ಸಾ ಎಲ್ ಹವರಿ, ಕೆಮರೂನ್ ನ 'ಡೌನ್ ಬೈ ದಿ ರಿವರ್ ಸೈಡ್" ಗೀತೆಗಳ ಜತೆ ಶಂಕರ್ ಅವರ 'ಮುಜ್ ಸೆ ಹೋಗಿ ಶುರುವತ್' ಗೀತೆ ಸ್ಪರ್ಧೆಯಲ್ಲಿದೆ.

    ರಮೇಶ್ ರಾಮನಾಥನ್ ಅವರ ಜನಾಗ್ರಹದ ಬಗ್ಗೆ

    ರಮೇಶ್ ರಾಮನಾಥನ್ ಅವರ ಜನಾಗ್ರಹದ ಬಗ್ಗೆ

    2001ರಲ್ಲಿ ರಮೇಶ್ ರಾಮನಾಥನ್ ಹಾಗೂ ಸ್ವಾತಿ ರಾಮನಾಥನ್ ಅವರಿಂದ ಆರಂಭವಾದ ಜನಾಗ್ರಹ ವೇದಿಕೆ ಸಾರ್ವಜನಿಕರಿಗೆ ಆಡಳಿತದಲ್ಲಿನ ಲೋಪ ದೋಷಗಳನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ. ಆಡಳಿತದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಹೆಚ್ಚು ಒತ್ತು ನೀಡುವ ಜನಾಗ್ರಹ, ಈಗ ವೆಬ್ ಸೈಟ್ [http://ipaidabribe.com/]ಮೂಲಕ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಆರಂಭಿಸಿದ್ದರು.

    ಇದೇ ಐಡಿಯಾ ಬಳಸಿಕೊಂಡು ಜನಾಗ್ರಹ ಆರಂಭಿಸಿದ್ದ 'I Paid a Bribe' ಮಾದರಿಯಲ್ಲೇ "I Made a Bribe" ಎಂಬ ವೆಬ್ ಆಂದೋಲನವನ್ನು ಚೀನಿಯರು ಶುರು ಮಾಡಿದ್ದರು. ಪ್ರಜಾಪ್ರಭುತ್ವ ಆಧಾರಿತ ಈ ಹೋರಾಟ ಕಮ್ಯೂನಿಸ್ಟ್ ದೇಶಕ್ಕೆ ರಫ್ತು ಆಗುತ್ತಿರುವುದು ಸಂತೋಷದ ವಿಷಯ ಎಂದು ಜನಾಗ್ರಹದ ವೆಬ್ ಸಂಚಾಲಕ ಟಿಆರ್ ರಘುನಂದನ್ ಪ್ರತಿಕ್ರಿಯಿಸಿದ್ದರು.

    ಶಂಕರ್ 'ಮುಜ್ ಸೆ ಹೋಗಿ ಶುರುವತ್' ಹಾಡು

    ಶಂಕರ್ 'ಮುಜ್ ಸೆ ಹೋಗಿ ಶುರುವತ್' ಹಾಡು ಕೇಳಿ ನೋಡಿ

    ಆಸ್ಕರ್ ನಾಮಾಂಕಣದ ಬಗ್ಗೆ ಶಂಕರ್ ಸಂತಸ

    ಆಸ್ಕರ್ ನಾಮಾಂಕಣದ ಬಗ್ಗೆ ಶಂಕರ್ ಸಂತಸ ಹಂಚಿಕೊಂಡು ವೋಟ್ ಮಾಡಿ ಎಂದಿದ್ದಾರೆ

    English summary
    Singer-composer Shankar Mahadevan is on Cloud Nine as "Mujhse hogi shurvaat" by Bangalore based Janaagraha's I Paid a Bribe and the Shankar Mahadevan Academy has been nominated in the best activist anthem category of Honesty Oscars 2014.
    Thursday, February 27, 2014, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X