ಸಂಗೀತ ಪ್ರಿಯರ ಅಚ್ಚುಮೆಚ್ಚು ಆಗ್ತಿದೆ 'ಜೋಕೆ' ಹಾಡು
ಕಳೆದ ಒಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ 'ಜೋಕೆ' ಎಂಬ ಹಾಡು ಸದ್ದು ಮಾಡ್ತಿದೆ. ಅರೇ ಯಾವುದು ಈ ಜೋಕೆ ಹಾಡು, ಯಾರು ಹಾಡಿರೋದು, ಯಾರು ಬರೆದಿರೋದು, ಯಾವ ಸಿನಿಮಾದು ಎಂದು ಹುಡುಕಿಕೊಂಡು ಹೋದವರಿಗೆ ಸರ್ಪ್ರೈಸ್ ಸಿಕ್ಕಿದೆ.
ಗಾಯಕಿ ಶಶಿಕಲಾ ಅವರ ಕಂಠದಲ್ಲಿ ಮೂಡಿಬಂದಿರುವ 'ಜೋಕೆ' ಆಲ್ಬಂ ಹಾಡು ಕೇಳಿ ಸಂಗೀತ ಪ್ರಿಯರ ಗಮನ ಸೆಳೆದಿದೆ. ಪ್ರೇಮಕವಿ ಕೆ.ಎಸ್ ನರಸಿಂಹಸ್ವಾಮಿ ಅವರು ರಚಿಸಿರುವ ಜೋಕೆ ಪದ್ಯವನ್ನ ಮ್ಯೂಸಿಕ್ ಆಲ್ಬಂ ಮಾಡಿ ಜನರ ಮುಂದೆ ತರಲಾಗಿದೆ.
ಶಶಿಕಲಾ ಸುನೀಲ್ ಅವರ ಈ ಹಾಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯೂಟ್ಯೂಬ್ ನಲ್ಲಿ ಜೋಕೆ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು ಸುಮಾರು 35 ಸಾವಿರಕ್ಕು ಹೆಚ್ಚು ವೀಕ್ಷಕರನ್ನ ಪಡೆದುಕೊಂಡಿದೆ.

ಅಂದ್ಹಾಗೆ, ಈ ಹಾಡಿಗೆ ಪ್ರವೀಣ್ ಬಿವಿ ಮತ್ತು ಪ್ರದೀಪ್ ಬಿವಿ ಸಂಗೀತ ಸಂಯೋಜನೆ ನೀಡಿದ್ದು, ಇಂದಿನ ಸಂಗೀತ ಪ್ರಿಯರಿಗೆ ಇಷ್ಟ ಆಗುವ ರೀತಿಯಲ್ಲಿ ಹಾಡನ್ನ ಪ್ರಸೆಂಟ್ ಮಾಡಿದ್ದಾರೆ. ಈ ಹಾಡಿಗೆ ಪ್ರಜ್ವಲ್ ಶಾಸ್ತ್ರಿ ಅವರ ನಿರ್ದೇಶನ ಮಾಡಿದ್ದಾರೆ.
More from Filmibeat
English summary
Presenting the official music video of 'jokae' music by praveen BV & pradeep BV. Sung by shashikala sunil.


Click it and Unblock the Notifications











