ಶಿವಣ್ಣ, ರಮ್ಯಾ ಅಭಿನಯದ ’ಆರ್ಯನ್’ ಆಡಿಯೋ ವಿಮರ್ಶೆ

By ಪ್ರಶಾಂತ್ ಇಗ್ನೇಷಿಯಸ್

80 ಹಾಗೂ 90 ದಶಕದಲ್ಲಿ ಕನ್ನಡದ ಪ್ರಮುಖ ನಿರ್ದೇಶಕರಾಗಿದ್ದ ಡಿ.ರಾಜೇಂದ್ರ ಬಾಬುರವರ ಚಿತ್ರಗಳು ತಾಂತ್ರಿಕತೆಯಲ್ಲಿ ಎಂದೂ ಮುಂದು. ಅಂತೆಯೇ ಅವರ ಬಹುತೇಕ ಚಿತ್ರಗಳು ಸೂಪರ್ ಹಿಟ್ ಎನ್ನುವಂತ ಹಾಡುಗಳನ್ನು ಹೊಂದಿರುತ್ತಿದ್ದವು. ತಮ್ಮ ಚಿತ್ರಗಳ ಹಾಡುಗಳ ಬಗ್ಗೆ ವಿಶೇಷ ಕಾಳಜಿ ತೋರುತ್ತಿದ್ದ ಬಾಬುರವರ ಸಂಗೀತ ಅಭಿರುಚಿ ಉನ್ನತ ಮಟ್ಟದ್ದೇ.

ಅವರ ಕೊನೆಯ ಚಿತ್ರವಾದ 'ಆರ್ಯನ್' ಗೆ ಅವರು ಆರಿಸಿಕೊಂಡಿದ್ದು ವಿಭಿನ್ನವಾದ ಕಥೆಯನ್ನು ಹಾಗೂ ಯುವ ಪೀಳಿಗೆಯ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಅವರನ್ನು. ಶಿವಣ್ಣ ಹಾಗೂ ರಮ್ಯಾ ಪ್ರಥಮ ಬಾರಿಗೆ ಒಂದಾಗಿ ನಟಿಸುತ್ತಿರುವುದರಿಂದ ಚಿತ್ರದ ಬಗ್ಗೆ ಕುತೂಹಲ ಇದೆ. (ಶಿವಣ್ಣ, ರಮ್ಯಾ ಸಕತ್ ಸ್ಟೆಪ್ಸ್)

ಇದೇ ಸಮಯದಲ್ಲಿ ಆಡಿಯೋ ಕೂಡಾ ಬಿಡುಗಡೆ ಆಗಿದೆ. ಜೆಸ್ಸಿ ಗಿಫ್ಟ್ ಉತ್ತಮವಾಗಿಯೇ ಸಂಗೀತ ನೀಡಿರುವ ಗೀತೆಗಳು ಮೆಚ್ಚುಗೆ ಗಳಿಸಿದರೂ ಇನ್ನೂ ಏನೋ ಉಳಿದಿದೆ ಎಂಬಂಥ ಭಾವ ಹಾಡುಗಳನ್ನು ಕೇಳಿದವರಿಗೆ ಅನಿಸದೆ ಇರದು. ಆ ಭಾವವೇ ಹಾಡುಗಳ ಹೆಗ್ಗಳಿಕೆಯೂ ಇರಬಹುದು. ಹಾಡುಗಳು ಹೇಗಿವೆ ನೋಡೋಣ.

Rating:
3.5/5

ಕನ್ನಡ ಮಣ್ಣಿನ ಹೆಣ್ಣು ಎಂದ್ರೆ

ಕನ್ನಡ ಮಣ್ಣಿನ ಹೆಣ್ಣು ಎಂದ್ರೆ

ಗಾಯಕರು: ಪುನೀತ್ ರಾಜ್ ಕುಮಾರ್, ಸುನಿಧಿ ಚೌಹಾಣ್
ಸಾಹಿತ್ಯ: ಕವಿರಾಜ್

ವೇಗ ಧಾಟಿಯ ಹಾಡುಗಳಿಗೆ ಪುನೀತ್ ಕಂಠ ಹೊಂದಿಕೊಂಡು ವಿಭಿನ್ನವಾಗಿ ಕೇಳುವುದನ್ನು ನಾವು ಹಿಂದೆ ಕೇಳಿದ್ದೇವೆ. ಇಲ್ಲಿ ಈ ಗೀತೆ ಪಾಪ್ ಗೀತೆಯಂತೆ ಕಂಡರೂ ಸಂಗೀತದಲ್ಲಿ ಅಂಥ ವಿಶೇಷತೆ ಇಲ್ಲದಿರುವದರಿಂದ ಅಷ್ಟೇನೂ ಪರಿಣಾಮಕ್ಕಾರಿಯಾಗಿಲ್ಲ. ಸಾಹಿತ್ಯವೂ ಸಾಮಾನ್ಯದ ಆಸುಪಾಸಿನಲ್ಲೇ ಇದೆ. ಪುನೀತ್ ಗಾಯನಕ್ಕಿರುವ ಜನಪ್ರಿಯತೆ ಹಾಗೂ ಕಿಕ್ ಅನ್ನು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳುವುದರತ್ತ ಸಂಗೀತ ನಿರ್ದೇಶಕರು ಮನಸ್ಸು ಮಾಡಬಹುದಿತ್ತೇನೋ. ಸಂಗೀತದ ಭರದಲ್ಲಿ ಪುನೀತ್ ಅವರ ಕಂಠ ಹಾಗೂ ಸಾಹಿತ್ಯ ಕಳೆದು ಹೋಗುತ್ತದೆ.

ನೀ ಬರದ ದಾರಿಯಲ್ಲಿ

ನೀ ಬರದ ದಾರಿಯಲ್ಲಿ

ಗಾಯಕರು: ಹರಿಹರನ್
ಸಾಹಿತ್ಯ: ಕವಿರಾಜ್

ಇತ್ತೀಚಿನ ಕನ್ನಡದ ಮಧುರ ಗೀತೆಗಳ ಸಾಲಿಗೆ ಮತ್ತೊಂದು ಸೇರ್ಪಡೆ. ಸಂಗಾತಿ ಇಲ್ಲದ ವಿರಹ ಗೀತೆಯಲ್ಲಿ ವಿಷಾದವೇ ತುಂಬಿಕೊಂಡ ಸಾಹಿತ್ಯವನ್ನು ಕವಿರಾಜ್ ನೀಡಿದ್ದಾರೆ. ಹಾಡಿನ ಧಾಟಿ ಹಾಗೂ ಸಾಹಿತ್ಯಕ್ಕೆ ತಕ್ಕ ಗಾಯನ ಹರಿಹರನ್ ಅವರದ್ದು. ಉತ್ತಮವಾದ ಆರಂಭದಿಂದ ಭರವಸೆ ಮೂಡಿಸುತ್ತಾ ಯಾವುದೇ ತೀವ್ರತೆಯಿಲ್ಲದೆ ಸಾಗುವ ಪ್ಯಾಥೋ ಗೀತೆ.

ಒಂದು ಹಾಡು ತೇಲಿ ಬಂತು

ಒಂದು ಹಾಡು ತೇಲಿ ಬಂತು

ಗಾಯಕರು: ಕೆ.ಕೆ, ಶ್ರೇಯಾ ಘೋಷಾಲ್
ಸಾಹಿತ್ಯ: ಕವಿರಾಜ್

ಆರಂಭದಲ್ಲೇ ಸುಂದರ ಸಾಹಿತ್ಯದಿಂದ ಮನ ಸೆಳೆಯುವ ಗೀತೆ ಕೊನೆಯವರೆಗೂ ಅದೇ ಗುಂಗನ್ನು ಉಳಿಸಿಕೊಳ್ಳುತ್ತದೆ. ಉತ್ತಮವಾದ ಸಾಹಿತ್ಯ ಹಾಗೂ ಗಾಯನದಿಂದ ಮತ್ತಷ್ಟು ಮೆರಗು ಪಡೆದುಕೊಳ್ಳುತ್ತದೆ.ವಾದ್ಯ ಸಂಗಿತದಲ್ಲಿ ಹೆಚ್ಚಾಗಿ ಗಿಟಾರನ್ನೇ ನೆಚ್ಚಿಕೊಂಡಿರುವುದರಿಂದ ಮಾಧುರ್ಯ ಹೆಚ್ಚಿದೆ. ಆರಂಭದ ಸಾಲುಗಳಲ್ಲಿ ಬರುವಂತೆ ಗಾಳಿಯಲ್ಲಿ ತೇಲಿ ಬಂದ ಹಾಡೊಂದನ್ನು ಕೇಳಿದ ಅನುಭವ ನೀಡುವಲ್ಲಿ ಗಾಯಕರು ಯಶಸ್ವಿಯಾಗಿದ್ದಾರೆ.

ಬಿಟ್ಟು ಬಿಡು ನಿಂಗೆ ಇರೋ ಫಿಯರ್

ಬಿಟ್ಟು ಬಿಡು ನಿಂಗೆ ಇರೋ ಫಿಯರ್

ಗಾಯಕರು : ಸಿದ್ದಾರ್ಥ್ ಮಹದೇವನ್
ಸಾಹಿತ್ಯ: ಚಂದನ್ ಶೆಟ್ಟಿ

ಇಂಗ್ಲೀಷಿನ We will we will Rock you ವನ್ನು ನೆನಪಿಸುವ ಗೀತೆ. ಪಾಪ್ ಸಂಗೀತದ ಧಾಟಿಯ ಗೀತೆಗೆ ಸಾಹಿತ್ಯವನ್ನು ಹೊಂದಿಸಲು ಪ್ರಯಾಸಪಟ್ಟಂತೆ ಕೇಳಿಸುತ್ತದೆ. ಜೆಸ್ಸಿ ಗಿಫ್ಟ್ ರವರ ಸಂಗೀತದ ಮೂಲ ಗುಣವನ್ನು ಈ ಹಾಡಿನಲ್ಲಿ ಕೇಳಬಹುದು. ಗೆಲ್ಲುತ್ತೇವೆ ಎಂಬ ವಿಶ್ವಾಸದ ಈ ಹಾಡಿನಲ್ಲಿ ಇಂಗ್ಲೀಷ ಪದಗಳು ಹಾದು ಹೋಗುತ್ತವೆ. ತೆರೆಯ ಮೇಲೆ ಇನ್ನಷ್ಟು ಇಷ್ಟವಾಗಬಹುದು. ಸಿದ್ದಾರ್ಥ್ ಅವರ ಕಂಠದಲ್ಲಿ ಗೀತೆಗೆ ಬೇಕಾದ ಜೋಶ್ ಇದೆ.

ಉಸಿರೇ ಆಡದೇ

ಉಸಿರೇ ಆಡದೇ

ಗಾಯಕರು: ಶ್ರೇಯಾ ಘೋಷಾಲ್
ಸಾಹಿತ್ಯ: ಚಂದನ್ ಶೆಟ್ಟಿ

ಮತ್ತೊಂದು ಮಧುರ ಗೀತೆ. ಆಲ್ಬಂ ನ ಅತ್ತ್ಯುತ್ತಮ ಗೀತೆ ಎನ್ನಬಹುದು. ಚಂದನ್ ಅವರ ಸರಳ ಸಾಹಿತ್ಯಕ್ಕೆ ಜೆಸ್ಸಿ ಗಿಫ್ಟ್ ಅಷ್ಟೇ ಸುಂದರವಾದ ಸಂಗೀತದ ಗಿಫ್ಟ್ ಕೊಟ್ಟಿದ್ದಾರೆ. ಶ್ರೇಯಾ ಅವರ ಉತ್ತಮ ಗಾಯನದಿಂದಾಗಿ ಹಾಡು ಇಷ್ಟವಾಗುವುದು ಮಾತ್ರವಲ್ಲದೆ ಕಾಡುವ ಗುಣವನ್ನು ಪಡೆದುಕೊಂಡಿದೆ. ಇಂತಹ ಹಾಡುಗಳನ್ನು ಇಷ್ಟಪಡುವ ಚಿತ್ರ ಪ್ರೇಮಿಗಳ ತುಟಿಯ ಮೇಲೆ ಬಹಳ ದಿನಗಳ ಕಾಲ ನಲಿದಾಡಬಹುದಾದ ಗೀತೆ.

More from Filmibeat

English summary
Shivaraj Kumar, Ramya starer Aryan movie audio review. Jessie Gift has composed the song for this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X