ವಿಡಿಯೋ : 'ಮಜ್ಜಿಗೆ ಹುಳಿ' ಮೆಚ್ಚಿದ ಶಿವರಾಜ್ ಕುಮಾರ್

'ಮಜ್ಜಿಗೆ ಹುಳಿ' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗಷ್ಟೆ ನಡೆದಿತ್ತು. ಇದೀಗ ಸಿನಿಮಾದ ಹಾಡನ್ನು ನಟ ಶಿವರಾಜ್ ಕುಮಾರ್ ಮೆಚ್ಚಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಕಾರಣಾಂತರಗಳಿಂದ ಶಿವಣ್ಣ ಬರಲು ಸಾಧ್ಯ ಆಗಿರಲಿಲ್ಲ. ಆದರೆ, ಇದೀಗ ತಮ್ಮ ಮಾತುಗಳ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

''ಮಜ್ಜಿಗೆ ಹುಳಿ' ಅಂತ ಒಂದು ಸಿನಿಮಾ ಬರುತ್ತಿದೆ. ಮಜ್ಜಿಗೆ ಹುಳಿಯಲ್ಲಿ ಹುಳಿ ಮತ್ತು ಸಿಹಿ ಎರಡು ಇರುತ್ತದೆ. ಅದೇ ರೀತಿ ಸಿನಿಮಾ ಕೂಡ ಎರಡು ಅಂಶಗಳ ಮಿಶ್ರಣ ಆಗಿರಲಿ ಎಂದು ನಾನು ಬಯಸುತ್ತೇನೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.

shivaraj kumar released majjige huli kannada movie song

'ಮಚ್ಚ ಮಚ್ಚಿ..' ಎಂಬ ಹಾಡಿನ ಲಿರಿಕಲ್ ವಿಡಿಯೊ ಹಾಡನ್ನು ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ. ಈ ಹಾಡನ್ನು 'ಟಗರು' ಖ್ಯಾತಿಯ ಗಾಯಕ ಅಂಟೋನಿ ದಾಸ್ ಹಾಗೂ ಜೋಗಿ ಸುನೀತಾ ಹಾಡಿದ್ದಾರೆ. ಎಮ್ ಸಂಜೀವ್ ರಾವ್ ಸಂಗೀತ ನೀಡಿದ್ದಾರೆ. ಲಹರಿ ಯೂ ಟ್ಯೂಬ್ ಚಾನಲ್ ನಲ್ಲಿ ಹಾಡು ಬಿಡುಗಡೆಯಾಗಿದೆ.

ಇದೊಂದು ಟಪ್ಪಂಗುಚಿ ಹಾಡಾಗಿದೆ. ಹಾಡಿನಲ್ಲಿ ನಟಿ ರೂಪಿಕಾ ಹಾಗೂ ದೀಕ್ಷಿತ್ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಮತ್ತೊಂದು ಹಾಡನ್ನು ಗುರುಕಿರಣ್ ಹಾಡಿದ್ದಾರೆ. ರವೀಂದ್ರ ಕೊಟಕಿ ನಿರ್ದೇಶನ ಮಾಡಿದ್ದಾರೆ. ಎಸ್ ಎಲ್ ವಿ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗಿದೆ. ಈ ಸಿನಿಮಾ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.

More from Filmibeat

English summary
Actor shivaraj kumar released Majjige Huli kannada movie song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X