For Quick Alerts
  ALLOW NOTIFICATIONS  
  For Daily Alerts

  'ಭಜರಂಗಿ-2' ಕೈಲಾಶ್ ಕೇರ್ ಹಾಡಿಗೆ ಅಭಿಮಾನಿಗಳು ಫಿದಾ: ಟಾಪ್ ಟ್ರೆಂಡಿಂಗ್ ನಲ್ಲಿ ಶಿವಣ್ಣನ ಸಾಂಗ್

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷೆಯ 'ಭಜರಂಗಿ-2' ಸಿನಿಮಾದ ಹಾಡು ಬಿಡುಗಡೆಗೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಖ್ಯಾತ ಗಾಯಕ ಕೈಲಾಶ್ ಕೇರ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. 'ರೇರೆ ರೇರೆ ಭಜರಂಗಿ....' ಹಾಡನ್ನು ಖ್ಯಾತ ಗೀತ ಸಾಹಿತಿ ಕೆ.ಕಲ್ಯಾಣ್ ರಚಿಸಿದ್ದಾರೆ. ಅದ್ಭುತವಾಗಿ ಮೂಡಿಬಂದಿರುವ ಈ ಹಾಡನ್ನು ಕೇಳಿ ಶಿವಣ್ಣ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಹಾಡು ಈಗ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ.

  ಇಂದು (ಆಗಸ್ಟ್ 20) ಟ್ವಿಟ್ಟರ್ ನಲ್ಲಿ ಕನ್ನಡದ ಎರಡು ಸಿನಿಮಾಗಳು ಟ್ರೆಂಡಿಂಗ್ ನಲ್ಲಿರುವುದು ಸಂತಸದ ವಿಚರವಾಗಿದೆ. ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಸ್ಯಾಟಲೈಟ್ ಹಕ್ಕು ಮಾರಾಟವಾಗಿರುವ ವಿಚಾರ ಕೂಡ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ. ಸದ್ಯ ಬಿಡುಗಡೆಯಾಗಿರುವ ಭಜರಂಗಿ-2 ಅನ್ನು ಅಭಿಮಾನಿಗಳು ಇಷ್ಟಪಟ್ಟಿದ್ದು, ಲೈಕ್ ಮತ್ತು ಶೇರ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ಭಜರಂಗಿ-2 ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಎ.ಹರ್ಷ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾವಾಗಿದೆ.

  'ಭಜರಂಗಿ-2' ಹಿಂದಿ ಡಬ್ಬಿಂಗ್ ರೈಟ್ಸ್ ಭರ್ಜರಿ ಮೊತ್ತಕ್ಕೆ ಮಾರಾಟ 'ಭಜರಂಗಿ-2' ಹಿಂದಿ ಡಬ್ಬಿಂಗ್ ರೈಟ್ಸ್ ಭರ್ಜರಿ ಮೊತ್ತಕ್ಕೆ ಮಾರಾಟ

  ಈಗಾಗಲೇ ಶಿವಣ್ಣ ಜೊತೆ ಭಜರಂಗಿ ಮತ್ತು ವಜ್ರಕಾಯ ಸಿನಿಮಾಗಳನ್ನು ಮಾಡಿರುವ ಹರ್ಷ ಇದೀಗ ಮೂರನೆ ಬಾರಿ ಆಕ್ಷನ್ ಕಟ್ ಹೇಳಿದ್ದಾರೆ. ಭಜರಂಗಿ-2 ಈಗಾಗಲೇ ಟ್ರೈಲರ್ ಮತ್ತು ಪೋಸ್ಟರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿತ್ತು. ಇದೀಗ ಬಂದಿರುವ ರೇರೆ ರೇರೆ...ಹಾಡು ಚಿತ್ರದ ಮೇಲಿನ ಕಾತರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ವರ್ಷದ ಹಿಂದೆಯೇ ಬಂದಿರುವ ಚಿತ್ರದ ಟ್ರೇಲರ್ ಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದ್ದೂರಿ ಮೇಕಿಂಗ್ ಮೂಲಕ ಭಜರಂಗಿ-2 ಅಭಿಮಾನಿಗಳ ಗಮನ ಸೆಳೆದಿತ್ತು.

  ಇನ್ನು ಬಹುನಿರೀಕ್ಷೆಯ ಭಜರಂಗಿ-2 ಸೆಪ್ಟಂಬರ್ 10 ಗಣಪತಿ ಹಬ್ಬಕ್ಕೆ ತೆರೆಗೆ ಬರುತ್ತಿದೆ. ಈ ಬಾರಿಯ ಗಣೇಶ ಹಬ್ಬ ಶಿವಣ್ಣ ಅಭಿಮಾನಿಗಳಿಗೆ ಡಬಲ್ ಧಮಾಕವಾಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದೆ ಅನೇಕ ದಿನಗಳೇ ಆಗಿವೆ. ಯಾವಾಗ ಸಿನಿಮಾಗಳು ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತವೆ ಎಂದು ಕಾಯುತ್ತಿರುವಾಗಲೇ ಶಿವಣ್ಣನ ಸಿನಿಮಾ ಬರ್ತಿವುದು ಅಭಿಮಾನಿಗಳಿಗೆ ಸಂತಸ ನೀಡಿದೆ.

  ಭಜರಂಗಿ-2 ಜಯಣ್ಣ ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಅಂದಹಾಗೆ ಭಜರಂಗಿ-2, 2013ರಲ್ಲಿ ಬಂದ ಭಜರಂಗಿ ಸಿನಿಮಾದ ಪಾರ್ಟ್-2 ಆಗಿದೆ. ಪಾರ್ಟ್ ಒಂದರಲ್ಲಿ ಶಿವರಾಜ್ ಕುಮಾರ್ ಜೊತೆ ನಟಿ ಐಂದ್ರಿತಾ ರೇ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಶಿವಣ್ಣ ಜೊತೆ ಭಾವನಾ ಮೆನನ್ ಕಾಣಿಸಿಕೊಳ್ಳುತ್ತಿದ್ದಾರೆ.

  ಭಜರಂಗಿ-2 ಸಿನಿಮಾ ಬಳಿಕ ನಿರ್ದೇಶಕ ಎ.ಹರ್ಷ ಮತ್ತೆ ಶಿವಣ್ಣ ಜೊತೆ ಸಿನಿಮಾ ಮಾಡುತ್ತಿದ್ದಾರೆ. ನಾಲ್ಕನೇ ಬಾರಿ ಶಿವಣ್ಣ ಮತ್ತು ಹರ್ಷ ಕಾಂಬಿನೇಷನ್ ಅಭಿಮಾನಿಳ ಮುಂದೆ ಬರಲು ಸಜ್ಜಾಗಿದೆ. ಈ ಬಾರಿ ಆಂಜನೇಯ ಹೆಸರಿನ ಬದಲಿಗೆ ಚಿತ್ರಕ್ಕೆ ಬೇರೆ ಟೈಟಲ್ ಇಟ್ಟಿದ್ದಾರೆ. 'ವೇದ' ಹೆಸರಿನ ಶೀರ್ಷಿಕೆ ಇಟ್ಟಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

  ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವೇದ ಜೊತೆ ಭೈರಾಗಿ ಸೇರಿದಂತೆ ಅನೇಕ ಸಿನಿಮಾಗಳು ಶಿವಣ್ಣ ಬಳಿ ಇದೆ. ಇಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಮಮ್ಮಿ ಖ್ಯಾತಿಯ ನಿರ್ದೇಶಕ ಲೋಹಿತ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ 'ಸತ್ಯಮಂಗಳ' ಎಂದು ಟೈಟಲ್ ಇಡಲಾಗಿದೆ. ಇದು ಶಿವಣ್ಣ ನಟನೆಯ 127ನೇ ಸಿನಿಮಾವಾಗಿದ್ದು, ಇಂದು (ಆಗಸ್ಟ್ 20) ಟೈಟಲ್ ಪೋಸ್ಟರ್ ಬಿಡುಗಡೆಮಾಡಲಾಗಿದೆ.

  ಶಿವರಾಜ್ ಕುಮಾರ್ ಕೊನೆಯದಾಗಿ ದ್ರೋಣ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೇಳಿಕೊಳ್ಳುವಷ್ಟು ಖ್ಯಾತಿಗಳಿಸಿಲ್ಲ. ಶಿವಣ್ಣನನ್ನು ತೆರೆಮೇಲೆ ನೋಡದೆ ಎರಡು ವರ್ಷಗಳಾಗಿದೆ. ಹಾಗಾಗಿ ಮುಂದಿನ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

  English summary
  Kannada Actor Shivarajkumar Starrer Bhajarangi 2 Third Song Released on the occasion of Varalakshmi Festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X