For Quick Alerts
  ALLOW NOTIFICATIONS  
  For Daily Alerts

  ಶೂ ಪಾಲಿಶ್ ಮಾಡುತ್ತಿದ್ದ ಸನ್ನಿ ಹಿಂದೂಸ್ತಾನಿಗೆ ಒಲಿದ 'ಇಂಡಿಯನ್ ಐಡಲ್' ಟ್ರೋಫಿ

  |

  ಪಂಜಾಬ್ ನ ಭಟಿಂಡಾದ ಪ್ರತಿಭಾವಂತ ಯುವಕ ಸನ್ನಿ ಹಿಂದೂಸ್ತಾನಿ 'ಇಂಡಿಯನ್ ಐಡಲ್' ಸ್ಪರ್ಧೆಯಲ್ಲಿ ಗೆದ್ದು ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಸೋನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಸಂಗೀತ ರಿಯಾಲಿ ಶೋ ಇಂಡಿಯನ್ ಐಡಲ್. ಈಗಾಗಲೆ 10 ಆವೃತ್ತಗಳನ್ನು ಮುಗಿಸಿ ಈಗ 11ನೇ ಆವೃತ್ತಿಗೆ ಅದ್ದೂರಿ ತೆರೆಬಿದ್ದಿದೆ.

  ಭಾರತದ ಮೂಲೆ ಮೂಲೆಯಲ್ಲಿರುವ ಬಡ ಸಂಗೀತ ಪ್ರತಿಭೆಗಳನ್ನು ಆಯ್ಕೆ ಮಾಡಿ ವೇದಿಕೆ ಕಲ್ಪಿಸಿಕೊಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಬಾರಿ 11ನೇ ಆವೃತ್ತಿಯಲ್ಲಿ ಸನ್ನಿ ಹಿಂದೂಸ್ತಾನಿ ಐಡಲ್ ಟ್ರೋಫಿ ಗೆದ್ದು ಬೀಗಿದ್ದಾರೆ. ಶೂ ಪಾಲಿಶ್ ಮಾಡುತ್ತಿದ್ದ ಈ ಬಡ ಯುವ ಪ್ರತಿಭೆಯ ಗಾಯನಕ್ಕೆ ಇಡೀ ದೇಶವೆ ಮನಸೋತಿದೆ. ಮುಂದೆ ಓದಿ..

  'ಲಿಫ್ಟ್ ಕರಾದೆ' ಹಾಡಿನಿಂದ ಟಿಕ್ ಟಾಕ್ ಪ್ರವೇಶ ಮಾಡಿದ ಗಾಯಕ ಅದ್ನಾನ್ ಸಾಮಿ'ಲಿಫ್ಟ್ ಕರಾದೆ' ಹಾಡಿನಿಂದ ಟಿಕ್ ಟಾಕ್ ಪ್ರವೇಶ ಮಾಡಿದ ಗಾಯಕ ಅದ್ನಾನ್ ಸಾಮಿ

  ಶೂ ಪಾಲಿಶ್ ಮಾಡಿ ಜೀವನ ನಡೆಸುತ್ತಿದ್ದ ಸನ್ನಿ

  ಶೂ ಪಾಲಿಶ್ ಮಾಡಿ ಜೀವನ ನಡೆಸುತ್ತಿದ್ದ ಸನ್ನಿ

  ಸನ್ನಿ ಹಿಂದೂಸ್ತಾನಿ ವೃತ್ತಿಪರ ಸಂಗೀತಗಾರರಾಗಿಲ್ಲ. ಆದರೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವ ಛಲ ಸನಿಯಲ್ಲಿತ್ತು. ಆದರೆ ಬಡತನ ಸನಿಯನ್ನು ಕಾಡುತ್ತಿತ್ತು. ಬೂಟ್ ಪಾಲಿಶ್ ಮಾಡಿ ಜೀವನ ನಡೆಸುತ್ತಿದ್ದರು. ತಂದೆ ಕೂಡ ಬೂಟ್ ಪಾಲಿಶ್ ಮಾಡುತ್ತಿದ್ದರಂತೆ. ಆದರೆ ಕಾಶ್ಮೀರ ಪ್ರವಾಹದ ಸಂದರ್ಭದಲ್ಲಿ ಸನಿ ತಂದೆ ನಾನಕ್ ಅವರನ್ನು ಕಳೆದುಕೊಳ್ಳುತ್ತಾರೆ.

  ತಂದೆ ಕೂಡ ಉತ್ತಮ ಹಾಡುಗಾರ

  ತಂದೆ ಕೂಡ ಉತ್ತಮ ಹಾಡುಗಾರ

  ತಂದೆ ಕೂಡ ಉತ್ತಮ ಹಾಡುಗಾರರು. ಜೀವನಕ್ಕಾಗಿ ಮದುವೆ ಮನೆಗಳಲ್ಲಿ ಹಾಡಿ ಹಣ ಸಂಪಾದನೆ ಮಾಡುತ್ತಿದ್ದರಂತೆ. ತಾಯಿ ಬೀದಿ ಬೀದಿಯನ್ನು ಸುತ್ತಿ ಆಕಾಶ ಬುಟ್ಟಿಗಳನ್ನು ಮಾರುತ್ತಿದ್ದರಂತೆ. ಕಡುಬಡತನದ ಕುಟುಂಬದಲ್ಲಿ ಬೆಳೆದ ಸನ್ನಿ ಈಗ ಇಂಡಿಯನ್ ಐಡಲ್ ಗೆದ್ದು ಕುಟುಂಬಕ್ಕೆ ಆಸರೆಯಾಗಿದ್ದಾರೆ. ಅಲ್ಲದೆ ಅದೆಷ್ಟೋ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ.

  'ಇದು ಬ್ಯಾರೆನೆ ಐತಿ': ಚುಟು ಚುಟು ನಂತರ ಮತ್ತೊಂದು ಜವಾರಿ ಹಾಡು'ಇದು ಬ್ಯಾರೆನೆ ಐತಿ': ಚುಟು ಚುಟು ನಂತರ ಮತ್ತೊಂದು ಜವಾರಿ ಹಾಡು

  25 ಲಕ್ಷ ರೂ, 1 ಕಾರ್

  25 ಲಕ್ಷ ರೂ, 1 ಕಾರ್

  ಸನ್ನಿ ಇಂಡಿಯನ್ ಐಡಲ್ ಟ್ರೋಫಿ ಜೊತೆಗೆ 25 ಲಕ್ಷ ರೂ ನಗದು ಮತ್ತು ಕಾರ್ ಹಾಗೂ ಟಿ ಸಿರೀಸ್ ಸಂಸ್ಥೆಯಲ್ಲಿ ಹಾಡುವ ಕಾಂಟ್ರಾಕ್ಟ್ ಕೂಡ ಅವರಿಗೆ ದೊರೆತಿದೆ. ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರ ಸನ್ನಿ ಹಾಡಿನ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

  ಸನ್ನಿ ಹಾಡಿಗೆ ಫಿದಾ ಆದ ಸ್ಟಾರ್ಸ್

  ಸನ್ನಿ ಹಾಡಿಗೆ ಫಿದಾ ಆದ ಸ್ಟಾರ್ಸ್

  ಸನ್ನಿ ಹಿಂದೂಸ್ತಾನಿ ಹಾಡಿಗೆ ಫಿದಾ ಆಗದವರೆ ಇಲ್ಲ. ನಟ ಕುನಾಲ್ ಖೇಮು, ಅಜಯ್ ದೇವಗನ್, ನಟಿ ಕಾಜೋಲ್ ಹಾಗೂ ಕಾರ್ಯಕ್ರಮದ ಜಡ್ಜ್ ಹಿಮೇಶ್ ರೇಷಮಿಯಾ ಸೇರಿದಂತೆ ಅನೇಕರು ಸನ್ನಿ ಧ್ವನಿಗೆ ಮನಸೋತಿದ್ದಾರೆ. ನಟ ಆಯುಷ್ಮಾನ್ ಖುರಾನ ಇವರ ಹಾಡು ಕೇಳಿ ಭಾವುಕರಾಗಿದ್ದರು.

  ನುಸ್ರತ್ ಫತೇ ಅಲಿಖಾನ್ ಹಾಡು ಕೇಳಿತ್ತ ಕಲಿತ ಸನಿ

  ನುಸ್ರತ್ ಫತೇ ಅಲಿಖಾನ್ ಹಾಡು ಕೇಳಿತ್ತ ಕಲಿತ ಸನಿ

  ಅದ್ಭುತವಾಗಿ ಹಾಡುತ್ತಿದ್ದ ಸನ್ನಿ ನುಸ್ರತ್ ಫತೇ ಅಲಿಖಾನ್ ಅವರ ಹಾಡುಗಳನ್ನು ಕೇಳುತ್ತ ಬೆಳೆದವರು. ಸನ್ನಿ ಹಾಡಿರುವ ನುಸ್ರತ್ ಅವರ ಅಫ್ರೀನ್ ಅಫ್ರೀನ್ ಹಾಡು ತೀರ್ಪುಗಾರರನ್ನು ಮೋಡಿ ಮಾಡಿತ್ತು. ಸನ್ನಿ ಹೆಚ್ಚಾಗಿ ನುಸ್ರತ್ ಹಾಡುಗಳನ್ನು ಹಾಡುತ್ತಿದ್ದರು. ಸನ್ನಿ ಹಿಂದೂಸ್ತಾನಿ ಹಾಡಿರುವ ಸಾಕಷ್ಟು ಹಾಡುಗಳು ಕೇಳುಗರನ್ನು ಮಂತ್ರಮುಗ್ದಗೊಳಿವೆ.

  English summary
  Shoe Shiner Sunny Hindustani winner Indian Idol 11. He won 25 lakhs cash and car.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X