ಬೆಂಗಳೂರಿನಲ್ಲಿ ಇಂದು ಗಾನ ಕೋಗಿಲೆ ಶ್ರೇಯಾ ಘೋಷಾಲ್‌ ಸಂಗೀತ ಸಂಜೆ; ಮಿಸ್ ಮಾಡಿಕೊಳ್ಳಬೇಡಿ

ಕ್ವೀನ್‌ ಆಫ್‌ ಮೆಲೋಡಿ ಎಂದೇ ಖ್ಯಾತರಾಗಿರುವ ಗಾಯಕಿ ಶ್ರೇಯಾ ಘೋಷಾಲ್‌ ಹಾಡುಗಳನ್ನು ಗುನುಗದವರಿಲ್ಲ. ಹಿಂದಿ ಮಾತ್ರವಲ್ಲದೇ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡು ಹಾಡಿ ಶ್ರೇಯಾ ಸಂಗೀತ ಪ್ರೇಮಿಗಳನ್ನು ರಂಜಿಸಿದ್ದಾರೆ. ತಮ್ಮ ಗಾಯನದಿಂದ ಅಸಂಖ್ಯಾತ ಅಭಿಮಾನಿಗಳನ್ನು ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಮೇ 17, ಶನಿವಾರ) ಸಂಜೆ ಬಾಲಿವುಡ್‌ನ ಕೋಗಿಲೆ ಕಂಠದ ಗಾಯಕಿ ಶ್ರೇಯಾ ಘೋಷಾಲ್‌ ಸಂಗೀತಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂಗೀತ ಸಂಜೆಯನ್ನು ಡಾ. ಚೇತನಾ ಆರ್.ಎಸ್‌ ಅವರ ಕಲಾಲುಹ ಮತ್ತು ರೆಡ್‌ಎಫ್‌ಎಂ ಅವರ ಸಹಭಾಗಿತ್ವದೊಂದಿದೆ ನಗರದ ನ್ಯೂ ಹಾರಿಜನ್‌ ಕಾಲೇಜ್ ಆಫ್‌ ಇಂಜಿನಿಯರಿಂಗ್‌, ಬೆಳ್ಳಂದೂರು, ಔಟರ್‌ ರಿಂಗ್‌ ರೋಡ್‌ನಲ್ಲಿ ಆಯೋಜಿಸಲಾಗಿದೆ.

Shreya Ghoshal to perform live concert in bengaluru today

ಅದ್ಧೂರಿ ವೇದಿಕೆಯಲ್ಲಿ ಗಾನ ಕೋಗಿಲೆ ಶ್ರೇಯಾ ಘೋಷಾಲ್ ತಮ್ಮ ಗಾಯನದ ಮೂಲಕ ಬೆಂಗಳೂರಿನ ಸಂಗೀತ ಪ್ರೇಮಿಗಳ ಮನ ತಣಿಸಲು ಮುಂದಾಗಿದ್ದಾರೆ. ಹಲವು ಸೂಪರ್ ಹಿಟ್ ಬಾಲಿವುಡ್ ಗೀತೆಗಳ ಜೊತೆಗೆ ಕನ್ನಡದಲ್ಲಿ ತಾವು ಹಾಡಿರುವ ಜನಪ್ರಿಯ ಗೀತೆಗಳನ್ನು ಶ್ರೇಯಾ ಹಾಡಲಿದ್ದಾರೆ. ದಿಶಾ ಹ್ಯಾಬಿಟ್ಯಾಟ್‌ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದ್ದು, ಲೈವ್‌ಕನ್ಸರ್ಟ್‌ಗೆ ಬೃಹತ್‌ವೇದಿಕೆ ಸಿದ್ದಗೊಂಡಿದೆ.

ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದ ಗಾನಸುಂದರಿ ನಗರಕ್ಕೆ ಆಗಮಿಸಲಿದ್ದು, ಅಭಿಮಾನಿಗಳಿಗೆ ಇದೊಂದು ಸುವರ್ಣಾವಕಾಶ. ಆಸಕ್ತರು ಆನ್‌ಲೈನ್‌ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ. ಶ್ರೇಯಾ ಘೋಷಾಲ್‌ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಿಂದೇಳಬಹುದಾಗಿದೆ. ಈಗಾಗಲೇ ಸಾಕಷ್ಟು ಜನ ಟಿಕೆಟ್ ಕಾಯ್ದಿರಿಸಿದ್ದಾರೆ. ನೀವು ಕೂಡ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ.

ಬೆಂಗಳೂರಿನಲ್ಲಿ ಶ್ರೇಯಾ ಘೋಷಾಲ್ ಲೈವ್ ಮ್ಯೂಸಿಕಲ್ ಕಾನ್ಸರ್ಟ್ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಆದರೆ ಬಹಳ ದಿನಗಳ ಬಳಿಕ ಆಕೆ ಬೆಂಗಳೂರಿನ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. 7 ಫಿಲ್ಮ್‌ಫೇರ್, 10 ಫಿಲ್ಮ್ ಫೇರ್ ಸೌತ್, 5 ರಾಷ್ಟ್ರ ಪ್ರಶಸ್ತಿ ಪಡೆದಿರುವ ಅದ್ಭುತ ಗಾಯಕಿ ಶ್ರೇಯಾ ಘೋಷಾಲ್. ಆಕೆಯ ಹಾಡುಗಳನ್ನು ಕೇಳದ ಸಂಗೀತ ಪ್ರೇಮಿಗಳೇ ಇಲ್ಲ ಎಂದರೆ ಅತಿಶಯೋಕ್ತಿ ಆಗುವುದಿಲ್ಲ. 20ಕ್ಕೂ ಅಧಿಕ ಭಾಷೆಗಳಲ್ಲಿ ಹಾಡು ಹಾಡಿ ಆಕೆ ಮೋಡಿ ಮಾಡಿದ್ದಾರೆ.

More from Filmibeat

English summary
Shreya Ghoshal live in concert on May 11th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X