'ಪಂಚತಂತ್ರ' ಶೃಂಗಾರದ ಹಾಡಿನ ವಿಡಿಯೋ ನೋಡಿ
'ಪಂಚತಂತ್ರ' ಸಿನಿಮಾ ಹುಡುಗರಿಗೆ ಹುಚ್ಚು ಹಿಡಿಸಿದ್ದೇ 'ಶೃಂಗಾರದ ಹೊಂಗೆಮರ..' ಹಾಡಿನ ಮೂಲಕ. ಈ ಹಾಡು ಕೇಳಿಯೇ ಎಲ್ಲರೂ ಕನಸಿನ ಲೋಕಕ್ಕೆ ತೇಲಿದ್ದರು. ಈಗ ಈ ಹಾಡಿನ ವಿಡಿಯೋ ಬಿಡುಗಡೆಯಾಗಿದೆ.
ಸಿನಿಮಾ ಬಿಡುಗಡೆಯಾದ ಇಷ್ಟು ದಿನಗಳ ಬಳಿಕ ವಿಡಿಯೋ ಹಾಡನ್ನ ಯೋಗರಾಜ್ ಭಟ್ ಬಿಡುಗಡೆ ಮಾಡಿದ್ದಾರೆ. ಇಂದು ಸಂಜೆ 7 ಗಂಟೆಗೆ ಸರಿಯಾಗಿ ಹಾಡು ಡೀ ಬೀಟ್ಸ್ ಯೂ ಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಿದೆ.

ಚಿತ್ರಮಂದಿರದಲ್ಲಿ ಸಿನಿಮಾದ ಹಾಡು ನೋಡಿದ್ದವರು ಮತ್ತೆ ಮತ್ತೆ ಈ ಹಾಡನ್ನು ಆನಂದಿದ ಬಹುದಾಗಿದೆ. ಇನ್ನೂ ಈ ಹಾಡಿನ ವಿಡಿಯೋ ನೋಡದೆ ಇರುವವರು ಈಗ ಕಣ್ಣು ತುಂಬಿಕೊಳ್ಳಬಹುದು.
ಈ ಹಾಡಿಗೆ ಯೋಗರಾಜ್ ಭಟ್, ಸಾಹಿತ್ಯ ಹರಿಕೃಷ್ಣ ಸಂಗೀತ ಇದೆ. ವಿಜಯ್ ಪ್ರಕಾಶ್ ಹಾಡಿಗೆ ಧ್ವನಿ ನೀಡಿದ್ದಾರೆ. ಈ ವರ್ಷದ ಹಿಟ್ ಹಾಡುಗಳ ಸಾಲಿನಲ್ಲಿ ಈ ಹಾಡು ಸಹ ಇದೆ.
ಹಾಡಿನಲ್ಲಿ ನಟ ವಿಹಾನ್ ಹಾಗೂ ನಟಿ ಸೋನಾಲ್ ಇಬ್ಬರ ಕೆಮಿಸ್ಟ್ರಿ ಗಮನ ಸೆಳೆಯುತ್ತದೆ. ಚಳಿಗಾಲಕ್ಕೆ ಹಾಡನ್ನು ಬಿಡುಗಡೆ ಮಾಡಿದ್ದ ತಂಡ ಈಗ ಬೇಸಿಗೆ ಕಾಲಕ್ಕೆ ವಿಡಿಯೋ ಬಿಡುಗಡೆ ಮಾಡಿದೆ.
More from Filmibeat
English summary
Yogaraj Bhat's direction, Actress Akshara Gowda, Sonal Monteiro and actor Vihan Gowda starring 'Panchatantra' kannada movie shrungarada hongemara video song out.


Click it and Unblock the Notifications











