»   » ಅಭಿಮಾನಿಗಳ ಮುಂದೆ ಕೈಮುಗಿದು ನಿಂತ ಚಂದನ್ - ಶೃತಿ ಜೋಡಿ

ಅಭಿಮಾನಿಗಳ ಮುಂದೆ ಕೈಮುಗಿದು ನಿಂತ ಚಂದನ್ - ಶೃತಿ ಜೋಡಿ

Posted By:
Subscribe to Filmibeat Kannada
ಅಂತೂ ಇಂತೂ ಚಂದು-ಶ್ರುತಿ ಒಂದಾದ್ರಪ್ಪ | Filmibeat Kannada

ಕಳೆದ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಮತ್ತು ಶೃತಿ ಪ್ರಕಾಶ್ ಈಗ ಮತ್ತೆ ಒಂದಾಗಿದ್ದಾರೆ. ಚಂದನ್ ಶೆಟ್ಟಿ ಅವರ ಹೊಸ ಹಾಡಿನಲ್ಲಿ ಶೃತಿ ಪ್ರಕಾಶ್ ಹಾಡುವುದರ ಜೊತೆಗೆ ನಟಿಸುತ್ತಿದ್ದಾರೆ.

ಬಿಗ್ ಬಾಸ್ ಮುಗಿಸಿಕೊಂಡು ಬಂದ ಮೇಲೆ ಚಂದನ್ ಅವರ ಯಾವುದೇ ಹಾಡು ಬಿಡುಗಡೆಯಾಗಿಲ್ಲ. ಆದರೆ ಈಗ ಚಂದನ್ ತಮ್ಮ ಹೊಸ ಹಾಡಿನ ತಯಾರಿಯಲ್ಲಿ ಇದ್ದಾರೆ. ಅದಕ್ಕೆ ಸೂಕ್ತ ಎನಿಸುವ ಟೈಟಲ್ ಅನ್ನು ನೀವೆ ನೀಡಿ ಎಂದು ಅಭಿಮಾನಿಗಳ ಮುಂದೆ ಬಂದಿದ್ದಾರೆ. ಚಂದನ್ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಶೃತಿ ಪ್ರಕಾಶ್ ಜೊತೆಗೆ ಇರುವ ಫೋಟೋ ಹಾಕಿ ಹೊಸ ಹಾಡಿಗೆ ಒಂದು ಹೆಸರು ನೀಡಿ ಎಂದು ಕೇಳಿದ್ದಾರೆ.

ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಚಂದನ್ - ಶೃತಿ ತುಂಬ ಸದ್ದು ಮಾಡಿದ್ದು, ಈಗ ಕಾರ್ಯಕ್ರಮದಿಂದ ಹೊರ ಬಂದ ಮೇಲೆಯೂ ಈ ಜೋಡಿ ಸೌಂಡ್ ಮಾಡುತ್ತಿದೆ. ಈಗಾಗಲೇ ತಮ್ಮ ಸೂಪರ್ ಹಿಟ್ ಹಾಡುಗಳ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ ಚಂದನ್ ಶೆಟ್ಟಿ ಈಗ ಮತ್ತೊಂದು ಹೊಸ ಹಾಡಿನ ಪ್ರಯತ್ನ ಮಾಡುತ್ತಿದ್ದಾರೆ.

shruthi prakash shake her legs in Chandan Shetty new song

ಶೃತಿ ಪ್ರಕಾಶ್ ಕಡೆಯಿಂದ ಜೆಕೆಗೆ ತಲುಪಿದ ಹುಟ್ಟುಹಬ್ಬ ಶುಭಾಶಯ

ಅಂದಹಾಗೆ, ಚಂದನ್ ಶೆಟ್ಟಿ ಮತ್ತು ಶೃತಿ ಪ್ರಕಾಶ್ ಜೋಡಿಯ ಹಾಡಿಗೆ ಯಾವುದಾದರೂ ಒಳ್ಳೆಯ ಹೆಸರು ನಿಮ್ಮ ಮೈಂಡ್ ಗೆ ಬಂದರೆ ಕಮೆಂಟ್ ಮಾಡಿ ತಿಳಿಸಿ.

English summary
Bigg Boss Kannada 5 contestant Shruthi Prakash shake her legs in Chandan Shetty new song.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X