twitter
    For Quick Alerts
    ALLOW NOTIFICATIONS  
    For Daily Alerts

    ತಾಯೆ ಬಾರ ಮೊಗವ ತೋರ ಹಾಡು ಕೇಳುತ್ತಿದ್ದರೆ...

    By Prasad
    |

    ತಾಯಿಭಾಷೆಯಲ್ಲಿ ಓದುವುದು, ಬರೆಯುವುದರ ಸಂತೋಷ, ಆ ಸುಖ ಅನುಭವಿಸುವುದು ಆ ಭಾಷೆಯನ್ನು ಪ್ರೀತಿಸುವವರಲ್ಲಿ ಮಾತ್ರ ಸಾಧ್ಯ. ಈಗಂತೂ ಯೂನಿಕೋಡ್ ಮಾಡಿದ ಕ್ರಾಂತಿಯಿಂದಾಗಿ ಎಲ್ಲ ಭಾಷೆಗಳು, ಅದರಲ್ಲೂ ಕಸ್ತೂರಿ ಕನ್ನಡ ಭಾಷೆ ಮೊಬೈಲಲ್ಲಿ ಕೂಡ ನಲಿದಾಡುವಂತಾಗಿದೆ. ನಮ್ಮ ಭಾಷೆಯನ್ನು ಉಳಿಸುವುದು ಮಾತ್ರವಲ್ಲ, ಅದನ್ನು ಬೆಳೆಸುವತ್ತ ಎಲ್ಲ ಕನ್ನಡಿಗರು ಕೈಜೋಡಿಸಬೇಕಾಗಿದೆ. [ಕನ್ನಡ ಎಸ್ಎಮ್ಎಸ್ ಭಾಗ್ಯ]

    ಯುನೆಸ್ಕೋ ನಿರ್ಣಯದಂತೆ ಫೆಬ್ರವರಿ 21ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಮಾತೃಭಾಷೆ ದಿನ ಆಚರಿಸಲಾಗುತ್ತಿದೆ. ಕೆಲವೊಂದು ಭಾಷೆಯ ದಾಂಗುಡಿಯಿಂದಾಗಿ ಹಲವಾರು ಪ್ರಾದೇಶಿಕ ಭಾಷೆಗಳು ಇಂದು ಮೂಲೆಗುಂಪಾಗುತ್ತಿವೆ, ಕೆಲವು ಅಳಿದಿವೆ, ಹಲವಾರು ಅಳವಿನಂಚಿಗೆ ಸಾಗಿವೆ. ಈ ಪಟ್ಟಿಯಲ್ಲಿ ಕನ್ನಡ ಭಾಷೆ ಇರದಂತೆ ಕಾಯುವುದು ಎಲ್ಲ ಕನ್ನಡಿಗರ ಕರ್ತವ್ಯ.

    ಈ ಸಂದರ್ಭದಲ್ಲಿ, ಚಿತ್ರಕ್ಕಾಗಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರು ರಚಿಸಿದ, 'ಕುಲವಧು' ಚಿತ್ರಕ್ಕಾಗಿ ಬಳಸಿಕೊಳ್ಳಲಾದ, ಜಿಕೆ ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ ಕನ್ನಡದ ಕೋಗಿಲೆ ಎಸ್ ಜಾನಕಿ ಹಾಡಿರುವ 'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ' ಹಾಡುನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಕನ್ನಡ ಭಾಷೆಯ ಜೀವಂತವಿರುವ ತನಕ ಈ ಹಾಡು ಕನ್ನಡಿಗರ ಮನದಲ್ಲಿ ಮಾರ್ದನಿಸುತ್ತಲೇ ಇರುತ್ತದೆ.

    Sing this Kannada song on World Mother Language Day

    ಕೇಳುತ್ತಿದ್ದರೆ ಅಥವಾ ಓದುತ್ತಿದ್ದರೆ ಮೈಯಲ್ಲಿ ವಿದ್ಯುತ್ ಸಂಚಾರ ಆದಂತೆ ಅನುಭವವಾಗುವಂಥ ಹಾಡಿದು. ವಿಶ್ವ ಮಾತೃಭಾಷಾ ದಿನದಂದು ಕನ್ನಡಿಗರೇ ಈ ಹಾಡು ಕೇಳಿ, ಸಾಧ್ಯವಾದರೆ ದೊಡ್ಡದನಿಯಲ್ಲಿ ದನಿಗೂಡಿಸಿ ಹಾಡಿರಿ, ಸಾಧ್ಯವಾದರೆ ಈ ಪುಟವನ್ನು ನಿಮ್ಮ ಸ್ನೇಹಿತರಿಗೂ ಕಳಿಸಿ. ಹಾಗೆಯೆ, ಕನ್ನಡ ಪ್ರೀತಿ ಸಾರುವ ಕನ್ನಡ ಹಾಡುಗಳನ್ನು ಕಾಮೆಂಟ್ ವಿಭಾಗದಲ್ಲಿ ಪಟ್ಟಿ ಮಾಡಿರಿ. ದಯವಿಟ್ಟು ಕನ್ನಡದಲ್ಲೇ ಟೈಪಿಸಿ.

    ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
    ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
    ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ, ನಮ್ಮ ಜನ್ಮದಾತೆಯೆ
    ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
    ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ, ನಮ್ಮ ಜನ್ಮದಾತೆಯೆ
    ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

    ನಮ್ಮ ತಪ್ಪನೆನಿತ ತಾಳ್ವೆ, ಅಕ್ಕರೆಯಿಂದೆಮ್ಮನಾಳ್ವೆ
    ನೀನೆ ಕಣಾ ನಮ್ಮ ಬಾಳ್ವೆ, ನಿನ್ನ ಮರೆಯಲೆಂದೆವು
    ತನು ಕನ್ನಡ, ಮನ ಕನ್ನಡ ನುಡಿ ಕನ್ನಡವೆಮ್ಮವು
    ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
    ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ, ನಮ್ಮ ಜನ್ಮದಾತೆಯೆ
    ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

    ತನ್ನ ಮರೆಯ ಕಂಪನರಿಯ ಗಗನ ಹೊರಗೆ ಹುಡುಕುವ
    ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡಕುವ
    ಕನ್ನಡ ಕಸ್ತೂರಿಯನ್ನ ಹೊಸತುಸಿರೆಂತೀರದೆನ್ನ
    ಸುರಭಿಯಲ್ಲಿ ನೀನದನ್ನ ನವಶಕ್ತಿಯನ್ನೆಬ್ಬಿಸು, ನವಶಕ್ತಿಯನ್ನೆಬ್ಬಿಸು, ನವಶಕ್ತಿಯನ್ನೆಬ್ಬಿಸು
    ಹೊಸ ಸುಗಂಧ, ರಸಗೆಯಿಂದ ಜಗದಿ ಹೆಸರ ಹಬ್ಬಿಸು
    ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
    ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ, ನಮ್ಮ ಜನ್ಮದಾತೆಯೆ
    ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

    English summary
    February 21 is celebrated as International Mother Language Day. On this occasion Oneindia is presenting beautiful Kannada song written by Rashtrakavi M. Govind Pai. The song was used for Kulavadhu Kannada movie.
    Friday, February 21, 2014, 12:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X