ವಿಡಿಯೋ : 'ಜೋಗಿ' ಪ್ರೇಮ್ ಗಾಯನದ ತಾಯಿಯ ಹೊಸ ಹಾಡು ಕೇಳಿ
ತಾಯಂದಿರ ದಿನದ ವಿಶೇಷವಾಗಿ ಕನ್ನಡದಲ್ಲಿ ಹೊಸ ಹಾಡಿನ ಟೀಸರ್ ಬಿಡುಗಡೆಯಾಗಿದೆ. ಈ ವಿಶೇಷವಾದ ಹಾಡನ್ನು ನಿರ್ದೇಶಕ ಜೋಗಿ ಪ್ರೇಮ್ ಹಾಡಿದ್ದಾರೆ.
ನಿರ್ದೇಶಕ ಪ್ರೇಮ್ ಸಿನಿಮಾದಲ್ಲಿ ಇರುವ ತಾಯಿಯ ಹಾಡುಗಳು ಸೂಪರ್ ಹಿಟ್ ಆಗಿವೆ. ಈಗ ಮತ್ತೊಂದು ಸಿನಿಮಾದ ತಾಯಿಯ ಹಾಡಿಗೆ ಅವರು ಧ್ವನಿ ನೀಡಿದ್ದಾರೆ. 'ಸಿಂಗ' ಚಿತ್ರತಂಡ ತಾಯಂದಿರ ದಿನದ ವಿಶೇಷವಾಗಿ ಹಾಡಿನ ಟೀಸರ್ ಅನ್ನು ಬಿಡುಗಡೆ ಮಾಡಿದೆ.

ಡಾ ವಿ ನಾಗೇಂದ್ರ ಪ್ರಸಾದ್ ಈ ಹಾಡನ್ನು ಬರೆದಿದ್ದಾರೆ. ಧರ್ಮ ವಿಶ್ ಸಂಗೀತ ನೀಡಿದ್ದಾರೆ. ಈಗಾಗಲೇ 'ಸಿಂಗ' ಸಿನಿಮಾದ ಹಾಡುಗಳು ಈ ಹಾಡು ಕೂಡ ಪ್ರೇಕ್ಷಕರಿಗೆ ಇಷ್ಟ ಆಗುವ ರೀತಿ ಇದೆ.
ಚಿರಂಜೀವಿ ಸರ್ಜಾ, ಅದಿತಿ ಪ್ರಭುದೇವ ಚಿತ್ರದಲ್ಲಿ ನಟಿಸಿದ್ದಾರೆ. ತಾಯಿಯ ಪಾತ್ರದಲ್ಲಿ ತಾರ ಕಾಣಿಸಿಕೊಂಡಿದ್ದಾರೆ. ವಿಜಯ್ ಕಿರಣ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಕಿರಣ್ ಹಂಪಾಪೂರ ಸಿನಿಮಾಟೋಗ್ರಾಫಿ ಚಿತ್ರಕ್ಕಿದೆ. ಉದಯ್ ಮೆಹ್ತಾ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.
English summary
Actor Chiranjeevi Sarja and Adithi Prabhudeva's 'Singa' kannada movie mother's day special song out. The song sing by Prem.


Click it and Unblock the Notifications