ವಿಡಿಯೋ : 'ಸಿಂಗ'ನ ಪುಟ್ಟ ಆಸೆ ಈಡೇರಿಸಿದ ಶಿವಣ್ಣ
''ಶಾನೆ ಟಾಪಾಗೌಳೆ ನಮ್ ಹುಡ್ಗಿ...ಶಾನೆ ಟಾಪಾಗೌಳೆ..'' ಹಾಡು ಸಖತ್ ಫೇಮಸ್ ಆಗಿದೆ. 'ಸಿಂಗ' ಸಿನಿಮಾ ಈ ಹಾಡಿನ ಮೂಲಕ ಸದ್ದು ಮಾಡಿತ್ತು. ಆ ಹಾಡಿನ ನಂತರ ಬಂದ ''ವಾಟ್ ಎ ಬ್ಯೂಟಿಫುಲ್ ಹುಡುಗಿ..'' ಹಾಡು ಕೂಡ ಕೇಳುಗರಿಗೆ ಇಷ್ಟ ಆಗಿತ್ತು.
ಇದೀಗ ಸಿನಿಮಾದ ಮತ್ತೊಂದು ಹೊಸ ಹಾಡು ಬಿಡುಗಡೆಯಾಗಿದೆ. 'ಪುಟ್ಟ ಪುಟ್ಟ ಆಸೆ..' ಎನ್ನುವ ಹಾಡನ್ನು ನಟ ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ. ಶಿವಣ್ಣನ ಸಾಥ್ ಸಿನಿಮಾದ ಬಲ ಹೆಚ್ಚು ಮಾಡಿದೆ.

'ಪುಟ್ಟ ಪುಟ್ಟ ಆಸೆ..' ಹಾಡನ್ನು ಕವಿರಾಜ್ ಬರೆದಿದ್ದಾರೆ. ತುಂಬ ಸುಂದರವಾಗಿ ಅನುಪಮ ಭಟ್ ಹಾಡಿದ್ದಾರೆ. ಧರ್ಮವಿಶ್ ಸಂಗೀತ ಸಿನಿಮಾಗೆ ಇದೆ. ಹಳ್ಳಿಯಲ್ಲಿ ಚಿತ್ರೀಕರಣವಾದ ಈ ಹಾಡು ನೋಡಲು ಸೊಗಸಾಗಿದೆ.
'ಸಿಂಗ'ನಾಗಿ ಚಿರಂಜೀವಿ ಸರ್ಜಾ ಕಾಣಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವ ಸಿನಿಮಾದ ನಾಯಕಿಯಾಗಿದ್ದಾರೆ. ಹಾಡಿನಲ್ಲಿ ಮುದ್ದು ಮುದ್ದಾಗಿ ಅವರು ಕಾಣಿಸಿಕೊಂಡಿದ್ದಾರೆ. ಉದಯ್ ಮೆಹ್ತಾ ಸಿನಿಮಾದ ನಿರ್ಮಾಣ ಮಾಡಿದ್ದಾರೆ.
English summary
Actor Shivaraj Kumar released Chiranjeevi Sarja and Adithi Prabhudeva's 'Singa' kannada movie 'putta putta aase..' song.


Click it and Unblock the Notifications