For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಕನ್ನಡ ಕೋಗಿಲೆ' ಖ್ಯಾತಿಯ ಗಾಯಕಿ ಅಖಿಲಾ ಪಜಿಮಣ್ಣು

  |

  ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಗಾಯನ ಶೋಗಳಲ್ಲಿ ಒಂದಾಗಿದ್ದ ಕನ್ನಡ ಕೋಗಿಲೆ ಮೂಲಕ ಮನೆಮಾತಾಗಿದ್ದ ಗಾಯಕಿ ಅಖಿಲಾ ಪಜಿಮಣ್ಣು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸುಮಧುರ ಕಂಠದ ಮೂಲಕ ಗಾನಪ್ರಿಯರ ಹೃದಯ ಗೆದ್ದಿದ್ದ ಅಖಿಲಾ ತನ್ನದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

  ಇದೀಗ ಅಖಿಲಾ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಇತ್ತೀಚಿಗಷ್ಟೆ ಅಖಿಲಾ, ಧನಂಜಯ್ ಶರ್ಮಾ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್ ಮೆಂಟ್ ನ ಸುಂದರ ಕ್ಷಣಗಳ ವಿಡಿಯೋವನ್ನು ಅಖಿಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

  ಸುದೀಪ್ ಪುತ್ರಿಯ ಹಾಡು ವೈರಲ್: ಸಾನ್ವಿಯ ಸುಮಧುರ ಕಂಠಕ್ಕೆ ನಟ ಜೆಕೆ ಫಿದಾ

  ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ಅಖಿಲಾ ಮತ್ತು ಧನಂಜಯ್ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಂದಹಾಗೆ ಅಖಿಲಾ ಕೈಹಿಡಿಯುತ್ತಿರುವ ಧನಂಜಯ್ ಶರ್ಮಾ ಯಾರು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ, ಅಲ್ಲದೆ ಅಖಿಲಾ ಸಹ ಭಾವಿ ಪತಿಯ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ನಿಶ್ಚಿತಾರ್ಥದ ವಿಡಿಯೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬರುತ್ತಿದೆ.

  ಲವ್ ಮ್ಯಾರೇಜ್ ಅಥವಾ ಆರೆಂಜ್ ಮ್ಯಾರೇಜ್ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಕನ್ನಡ ಕೋಗಿಲೆ ಬಳಿಕ ಅಖಿಲಾ ಮುಂಜಾನೆ ರಾಗ ಕಾರ್ಯಕ್ರಮದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಲ್ಲಿದ್ದಾರೆ. ಇನ್ನು ಮದುವೆ ಯಾವಾಗ ಎನ್ನುವ ಬಗ್ಗೆ ಸ್ವತಹ ಅಖಿಲಾ ಅವರೇ ಬಹಿರಂಗ ಪಡಿಸಬೇಕಿದೆ.

  Read more about: song tv ಹಾಡು ಟಿವಿ
  English summary
  Singer Akhila Pajimannu gets engaged with Dhananjay Sharma. Akhila Pajimannu shares her engagement video on Social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X