For Quick Alerts
  ALLOW NOTIFICATIONS  
  For Daily Alerts

  ಹಣವಿಲ್ಲದೆ ಬೈಕ್ ಮಾರುವ ಸ್ಥಿತಿಗೆ ಬಂದ ಖ್ಯಾತ ನಿರೂಪಕ ಮತ್ತು ಗಾಯಕ ಆದಿತ್ಯ ನಾರಾಯಣ್

  |

  ಹಿಂದಿ ಕಿರುತೆರೆ ಲೋಕದ ಖ್ಯಾತ ನಿರೂಪಕ ಮತ್ತು ಗಾಯಕ ಆದಿತ್ಯ ನಾರಾಯಣ್ ಹಣಕಾಸಿನ ಸಮಸ್ಯೆಯಲ್ಲಿ ಸಿಲುಕ್ಕಿದ್ದಾರೆ. ಜನಪ್ರಿಯ ಸಂಗೀತ ರಿಯಾಲಿಟಿ ಶೋಗಳಾದ ಸಿರಿಗಮಪ, ಸಿಂಗಿಂಗ್ ಸ್ಟಾರ್, ಇಂಡಿಯನ್ ಐಡಲ್ ನಂತಹ ಪ್ರಸಿದ್ಧ ರಿಯಾಲಿಟಿ ಶೋಗಳ ನಿರೂಪಣೆ ಮಾಡುತ್ತಾ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಆದಿತ್ಯ ನಾರಾಯಣ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

  ಆದಿತ್ಯ ಅವರು ಈ ಸ್ಥಿತಿಗೆ ಬರಲು ಕಾರಣ ಕೊರೊನಾ ಲಾಕ್ ಡೌನ್. ಕೊರೊನಾ ಲಾಕ್ ಡೌನ್ ಕೋಟ್ಯಂತರ ಜನರ ಜೀವನವನ್ನೇ ಕಸಿದುಕೊಂಡಿದೆ. ಒಂದೊತ್ತಿನ ಊಟಕ್ಕೂ ಪರದಾಡು ಸ್ಥಿತಿ ನಿರ್ಮಾಣವಾಗಿದೆ. ಕಳೆದ 7 ತಿಂಗಳಿಂದ ಕೆಲಸವಿಲ್ಲದೆ, ಬದುಕಿಗಾಗಿ ಪರದಾಡುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಸಂಕಷ್ಟದ ಸ್ಥಿತಿಯನ್ನು ಈಗ ನಿರೂಪಕ ಆದಿತ್ಯ ನಾರಾಯಣ್ ಎದುರಿಸುತ್ತಿದ್ದಾರೆ.

  ರಾತ್ರೋರಾತ್ರಿ ಸ್ಟಾರ್ ಆಗಿ ಸಂಚಲನ ಸೃಷ್ಟಿ ಮಾಡಿದ್ದ ರಾನು ಮೊಂಡಲ್ ಸ್ಥಿತಿ ಈಗ ಏನಾಗಿದೆ?

  ಸುಮಾರು 7 ತಿಂಗಳಿಂದ ಕೆಲಸವಿಲ್ಲ, ಕೈಯಲ್ಲಿದ್ದ ಹಣವೆಲ್ಲ ಖಾಲಿಯಾಗಿದೆ. ಈಗ ಜೀವನಕ್ಕಾಗಿ ತನ್ನ ಬಳಿ ಇದ್ದ ಬೈಕ್ ಅನ್ನು ಮಾರಾಟ ಮಾಡಲು ಮುಂದಾಗಿದ್ದಾರಂತೆ. ಕಿರುತೆರೆಯಲ್ಲಿ ಉತ್ತಮ ವಾತಾವರಣವಿಲ್ಲ. ಅನೇಕ ಶೋಗಳು ಅರ್ಧಕ್ಕೆ ನಿಂತಿವೆ. ಹೊಸ ಶೋಗಳು ಪ್ರಾರಂಭವಾಗುತ್ತಿಲ್ಲ. ಎಲ್ಲೂ ಕೆಲಸ ಸಿಗದೆ ಒದ್ದಾಡುತ್ತಿದ್ದಾರೆ.

  ಉಳಿತಾಯದ ಹಣವೆಲ್ಲ ಖಾಲಿಯಾಗಿದೆ. ಇದೀಗ ಆದಿತ್ಯ ನಾರಾಯಣ್ ಅಕೌಂಟ್ ನಲ್ಲಿ ಕೇವಲ 18 ಸಾವಿನ ರೂಪಾಯಿ ಇದೆಯಂತೆ. ಈ ಬಗ್ಗೆ ವೆಬ್ ಪೋರ್ಟಲ್ ಜೊತೆ ಮಾತನಾಡಿರುವ ಆದಿತ್ಯ, 'ಸರ್ಕಾರ ಇನ್ನು ಲಾಕ್ ಡೌನ್ ಅವದಿಯನ್ನು ವಿಸ್ತರಿಸಿದರೆ ಜನರು ಹಸಿವಿನಿಂದ ಸಾಯುತ್ತಾರೆ. ನ್ನ ಉಳಿತಾಯದ ಹಣವೆಲ್ಲ ಖಾಲಿಯಾಗುತ್ತ ಬಂದಿದೆ. ಬ್ಯಾಂಕ್ ಅಕೌಂಟ್ ನಲ್ಲಿ ಕೇವಲ 18 ಸಾವಿನ ರೂ. ಇದೆ. ಈ ತಿಂಗಳು ಕೆಲಸ ಸಿಗದಿದ್ದರೆ ಜೀವನ ನಡೆಸಲು ಬೈಕ್ ಅನ್ನು ಮಾರಿಕೊಳ್ಳಬೇಕಾಗುತ್ತದೆ. ಈ ರೀತಿ ಸ್ಥಿತಿ ನನಗೆ ಬರುತ್ತೆ ಎಂದು ಊಹಿಸಿರಲಿಲ್ಲ' ಎಂದು ಹೇಳಿದ್ದಾರೆ.

  ಆದಿತ್ಯ ಇತ್ತೀಚಿಗಷ್ಟೆ ಮದುವೆ ಬಗ್ಗೆ ಬಹಿರಂಗಪಡಿಸಿದ್ದಾರೆ. ಬಹುಕಾಲದ ಗೆಳತಿ ಶ್ವೇತಾ ಅಗರ್ವಾಲ್ ಜೊತೆ ಅವರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಹಸೆಮಣೆ ಏರುವ ಸಾಧ್ಯತೆ ಇದೆ. ಗಾಯಕ ಆದಿತ್ಯ ನಾರಾಯಣ್ ಜನಪ್ರಿಯ ರಿಯಾಲಿಟಿ ಶೋ ಇಂಡಿಯನ್ ಐಡಲ್ ಗೆ ನಿರೂಪಕನಾಗಿ ಮತ್ತೆ ಮರಳಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

  English summary
  Singer And Anchor Aditya narayan decide to sell his bike for money. aditya narayan facing financial problem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X