ಅನುರಾಧಾ ಭಟ್ ಕನಸು; ಮನದಾಳದ ಮಾತುಗಳು

<ul id="pagination-digg"><li class="previous"><a href="/music/kannada-singer-anuradha-bhat-sawari-song-fame-068754.html">« Previous</a>

Anuradha Bhat
3 ತೆಲುಗು ಹಾಗೂ 2 ತಮಿಳು ಚಿತ್ರಗಳಲ್ಲಿ ಹಾಡಿದ್ದೇನೆ. ಜೊತೆಗೆ ಸಾಕಷ್ಟು ರೀಮಿಕ್ಸ್ ಗೀತೆಗಳಿಗೆ ಧ್ವನಿಯಾಗಿದ್ದೇನೆ. ಭಾವಗೀತೆ, ಭಕ್ತಿಗೀತೆ, ಹೀಗೆ ಸಿನಿಮೇತರ (ನಾನ್ ಫಿಲ್ಮಿ) ಬಹಳಷ್ಟು ಗೀತೆಗಳಿಗೆ ಹಾಡಿದ್ದೇನೆ. ಭಾರತದ 13 ಭಾಷೆಗಳಲ್ಲಿ ಹಾಡಿರುವ ನನಗೆ ಸುಮಾರು 5 ಸಾವಿರ ಹಾಡುಗಳಿಗೆ ಧ್ವನಿಯಾಗುವ ಅದೃಷ್ಟ ಈಗಾಗಲೇ ಕೂಡಿಬಂದಿದೆ. 'ಚಿತ್ರಲೇಖಾ', 'ಪಲ್ಲವಿ ಅನುಪಲ್ಲವಿ', 'ರಾಜ್ ಕುಮಾರಿ' ಹಾಗೂ 'ಮಡದಿ' ಮುಂತಾದ ಕನ್ನಡದ ಸುಮಾರು ಧಾರಾವಾಹಿಗಳ 'ಟೈಟಲ್ ಸಾಂಗ್' ಹಾಡಿರುವ ನನಗೆ ಆ ನಿಟ್ಟಿನಲ್ಲಿ ಅವಕಾಶಗಳು ಹೇರಳವಾಗಿ ಬರುತ್ತಿವೆ, ಹಾಡುತ್ತೇನೆ...

*ಸಿನಿಮಾ ನಟನೆ ಆಫರ್ ಬಂದಿತ್ತಾ?

ಬಂದಿತ್ತು, ಕೆಲವು ಪಾತ್ರಗಳು ನನ್ನನ್ನು ಹುಡುಕಿಕೊಂಡು ಬಂದಿದ್ದವು. ಆದರೆ ನನಗೆ 'ಸಕಲವೂ ಸಂಗೀತವೇ' ಎನ್ನುವಂತಾಗಿದ್ದರಿಂದ ನಟನೆ ಕಡೆ ಮುಖ ಮಾಡಲಿಲ್ಲ.

* ಮುಂದೆ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡವ ಕನಸಿದೆಯೇ?

ಸದ್ಯಕ್ಕಂತೂ ಆ ಯೋಚನೆಯಿಲ್ಲ. ಕಾರಣ, ಸಂಗೀತ ನಿರ್ದೇಶನ ಮಾಡುವುದು ತಮಾಷೆ ಸಂಗತಿಯಲ್ಲ. ಅದಕ್ಕೆ ಕೇವಲ ಸಂಗೀತ ಗೊತ್ತಿದ್ದರೆ ಸಾಲದು, ಸಿನಿಮಾಗಳ ಬಗ್ಗೆ 'ಪ್ರೀತಿ' ಹಾಗೂ ಅದರ 'ಗ್ರಾಮರ್' ಕೂಡ ಗೊತ್ತಿರಬೇಕು. ಚಿತ್ರದ ಯಾವ ದೃಶ್ಯಗಳಿಗೆ ಯಾವ ಸಂಗೀತ ಸೂಕ್ತ, ಯಾವ ಭಾವಕ್ಕೆ ಯಾವ ಸಂಗೀತ ನೀಡಬೇಕು ಎಂಬುದೂ ತಿಳಿದಿರಬೇಕು.

ಪ್ರೇಕ್ಷಕರು ಯಾವುದನ್ನು ಎಷ್ಟು ಇಷ್ಟಪಡುತ್ತಾರೆ, ನಿರ್ದೇಶಕ ಹಾಗೂ ನಿರ್ಮಾಪಕರ ಇಷ್ಟ-ಕಷ್ಟಗಳೇನು ಎಂಬುದನ್ನೆಲ್ಲಾ ತಿಳಿದುಕೊಂಡು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಬೇಕಾಗುತ್ತದೆ. ಸದ್ಯಕ್ಕೆ ನನಗೆ ಆ ನಿಟ್ಟಿನಲ್ಲಿ ಅಷ್ಟರಮಟ್ಟಿಗೆ ಅನುಭವವಿಲ್ಲ. ಹೀಗಾಗಿ, ಸಿನಿಮಾ ಸಂಗೀತ ನಿರ್ದೇಶನದ ಕನಸೂ ಸದ್ಯಕ್ಕಿಲ್ಲ.

* ಓಕೆ, ನಿಮ್ಮ ಮುಂದಿನ ಗುರಿ?

(ನಗು...) ಹಾಡಬೇಕು, ಇನ್ನೂ ಹಾಡಬೇಕು ಮತ್ತು ಇನ್ನೂ ಹೆಚ್ಚು ಹೆಚ್ಚು ಹಾಡುಗಳನ್ನು ಹಾಡಬೇಕು. ಕೇವಲ ಸಿನಿಮಾ ಹಾಡುಗಳು ಅಂತಲ್ಲ, ಎಲ್ಲಾ ಹಾಡುಗಳೂ ನನಗಿಷ್ಟ; ಎಲ್ಲಾ ಹಾಡುಗಳನ್ನೂ ಹಾಡಲೂ ನನಗಿಷ್ಟ. ಒಟ್ಟಿನಲ್ಲಿ ಹಾಡಬೇಕು, ಹಾಡುತ್ತಲೇ ಇರಬೇಕು.. ಮಾತೃಭಾಷೆಯ ಜೊತೆಜೊತೆಗೆ ಎಲ್ಲಾ ಭಾಷೆಗಳ ಎಲ್ಲಾ ರೀತಿಯ ಹಾಡುಗಳನ್ನು ಹಾಡಬೇಕು. ಸಂಗೀತದ ಆಳ-ಅಗಲಗಳ ಪರಿಚಯವಾಗಬೇಕು ಎಂಬುದು ನನ್ನಾಸೆ, ಗುರಿ, ಕನಸು ಎಲ್ಲವೂ...

***

<ul id="pagination-digg"><li class="previous"><a href="/music/kannada-singer-anuradha-bhat-sawari-song-fame-068754.html">« Previous</a>

More from Filmibeat

English summary
Anuradha Bhat is a Famous Indian Singer, basically from Karnataka. She sung nearly 5000 songs, including Filmy and Non-Filmy songs in 13 different Languages mainly in Kannada. This is the Interview of Singer Anuradha Bhat to read for the more...&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X