ಹಿನ್ನೆಲೆ ಗಾಯಕಿ 'ಅನುರಾಧಾ ಭಟ್' ಸಂದರ್ಶನ

ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗೀತೆಗಳನ್ನೂ ಹಾಡುತ್ತಿರುವ ಈ ಅನುರಾಧಾ ಭಟ್, ಭಾರತದ 13 ಭಾಷೆಗಳಲ್ಲಿ ನಾನ್ ಫಿಲ್ಮಿ (ಸಿನಿಮೇತರ) ಹಾಡುಗಳನ್ನು ಕೂಡ ಹಾಡುತ್ತಿದ್ದಾರೆ. ಬಾಲಿವುಡ್ ಗಾಯಕಿಯರ 'ಲೆವೆಲ್' ಧ್ವನಿ ಹೊಂದಿರುವ ಗಾಯಕಿ ಎಂದು ಕನ್ನಡ ಚಿತ್ರರಸಿಕರಿಂದ ಪ್ರಶಂಸೆ ಪಡೆಯುತ್ತಿರುವ ಇವರು ತಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ಮಧುರವಾಗಿ ಹಾಡುತ್ತಿದ್ದರೆ ಆ ಧ್ವನಿಯಲ್ಲಿ ಮೂಡಿಬರುತ್ತಿರುವ ಕನ್ನಡದ ಹಾಡುಗಳೇ ಧನ್ಯ ಅನ್ನಿಸಿಬಿಡುತ್ತವೆ.
ಆ ಮಟ್ಟಿಗೆ ಇಂಪಾದ ಕಂಠ ಹೊಂದಿರುವ ಈ ಸುಪ್ರಸಿದ್ಧ ಗಾಯಕಿ, ಉಪೇಂದ್ರ-ರಮ್ಯಾ ಅಭಿನಯದ ಇತ್ತೀಚಿನ 'ಕಠಾರಿ ವೀರ ಸುರಸುಂದರಾಂಗಿ' ಚಿತ್ರದ 'ಅಂಬಿಕಾ... ಚಳಿ ತಾಳೆನು ಅಂಬಿಕಾ...' ಗೀತೆಯ ಮೂಲಕ ಸಂಗೀತಪ್ರೇಮಿಗಳಿಗೆ ಇನ್ನಷ್ಟು ಹತ್ತಿರವಾದವರು. ಇಂಥ ಅಪರೂಪದ ಗಾಯಕಿ ಅನುರಾಧಾ ಭಟ್, 'ಒನ್ ಇಂಡಿಯಾ ಕನ್ನಡ,ದ ಶ್ರೀರಾಮ್ ಭಟ್ ಜೊತೆ ನಡೆಸಿದ ಮಾತುಕತೆ ಇಲ್ಲಿದೆ, ಓದಿ...
* ಹುಟ್ಟೂರು, ವಿದ್ಯಾಭ್ಯಾಸ ಹಾಗೂ ಸಂಗೀತಾಭ್ಯಾಸದ ಬಗ್ಗೆ ಹೇಳಿ...
ಮಂಗಳೂರು ನನ್ನ ಹುಟ್ಟೂರು. ನಮ್ಮಪ್ಪ ಶ್ರೀಕೃಷ್ಣ ಭಟ್ ಹಾಗೂ ಅಮ್ಮ ಗಾಯತ್ರಿ. ತಂಗಿ ಅನುಪಮಾ ಭಟ್ (ನಿರೂಪಕಿ ಹಾಗೂ ನಟಿ)
ನಾನು ಬೆಳೆದಿದ್ದು, ಹಾಗೂ ಬಿ ಎಸ್ ಸಿ, ಎಮ್ ಬಿ ಎ ಓದಿದ್ದು ಎಲ್ಲವೂ ಮಂಗಳೂರಿನಲ್ಲಿ. 5-6 ನೇ ವರ್ಷದಲ್ಲಿದ್ದಾಗಲೇ ನೇ 'ಭರತನಾಟ್ಯಂ' ಕ್ಲಾಸಿಕಲ್ ಕಲಿತೆ. ಕಮಲಾ ಭಟ್ ಅವರಲ್ಲಿ ಭರತನಾಟ್ಯಂ ಕಲಿತ ನಾನು ಅದರಲ್ಲಿ 'ವಿದ್ವತ್' ಪದವಿ ಗಳಿಸಿದೆ. ಜೊತೆಗೆ ಕರ್ನಾಟಿಕ್ ಸಂಗೀತದಲ್ಲಿ ರಂಗನಾಯಕಿ ವರದರಾಜನ್ ಅವರಲ್ಲಿ ವೀಣೆ (ಬೇಸಿಕ್ಸ್) ಕಲಿತಿದ್ದೇನೆ. ಈಗಲೂ ವೀಣೆ ಕಲಿಕೆ ಮುಂದುವರಿಸಿದ್ದೇನೆ. ದಿವಂಗತ ಶ್ರೀನಾಥ್ ಮರಾಠೆ ಅವರಲ್ಲಿ ಗಾಯನ (ವೋಕಲ್) ಕಲಿತೆ.
* ಗಾಯಕಿಯಾಗಿ, ಹಿನ್ನೆಲೆ ಗಾಯಕಿಯಾಗಿ ನೀವು ಬೆಳೆದುಬಂದ ಬಗೆ?
ಉತ್ತರಕ್ಕೆ ಮುಂದಿನ ಪುಟ ನೋಡಿ...


Click it and Unblock the Notifications











