»   » 'ಸರಿಗಮಪ' ದೀಕ್ಷಾಗೆ ಸಿಕ್ಕಿದೆ ಸಿನಿಮಾದಲ್ಲಿ ಹಾಡುವ ಅವಕಾಶ

'ಸರಿಗಮಪ' ದೀಕ್ಷಾಗೆ ಸಿಕ್ಕಿದೆ ಸಿನಿಮಾದಲ್ಲಿ ಹಾಡುವ ಅವಕಾಶ

Posted By:
Subscribe to Filmibeat Kannada
ಸರಿಗಮಪ ಸೀಸನ್ 13 ವಿನ್ನರ್ ದೀಕ್ಷಾ ರಾಮಕೃಷ್ಣಾಗೆ ಸಿಕ್ತು ಬಂಪರ್ ಆಫರ್ | Filmibeat Kannada

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸರಿಗಮಪ' ಕಾರ್ಯಕ್ರಮದ ಕಳೆದ ಸೀಸನ್ ಸಾಕಷ್ಟು ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿತು. ಅದೇ ಕಾರಣಕ್ಕೆ ಈಗಾಗಲೇ ಸರಿಗಮಪ ಸೀಸನ್ 13 ರಲ್ಲಿ ಭಾಗವಹಿಸಿದ್ದ ಅನೇಕರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಈಗ ಗಾಯಕಿ ದೀಕ್ಷಾ ರಾಮಕೃಷ್ಣ ಕೂಡ ಒಂದು ಸಿನಿಮಾ ಹಾಡನ್ನು ಹಾಡಿದ್ದಾರೆ.

'ಸರ್ಕಾರ್' ಎಂಬ ಹೊಸ ಸಿನಿಮಾದಲ್ಲಿ ದೀಕ್ಷಾ ರಾಮಕೃಷ್ಣ ಒಂದು ಹಾಡನ್ನು ಹಾಡಿದ್ದಾರೆ. ಈ ಚಿತ್ರದ 'ಹೇಳದೆ ಕಾರಣ..' ಎಂಬ ಹಾಡಿಗೆ ದೀಕ್ಷಾ ಧ್ವನಿಯಾಗಿದ್ದಾರೆ. ಇದೊಂದು ಮೆಲೋಡಿ ಹಾಡಾಗಿದ್ದು, ದೀಕ್ಷಾ ಧ್ವನಿಗೆ ಹಾಡು ತುಂಬ ಚೆನ್ನಾಗಿ ಸೂಟ್ ಆಗಿದೆ. ಒಂದು ವಾರದ ಹಿಂದೆ ಈ ಹಾಡು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಸಂಗೀತ ಪ್ರೇಮಿಗಳ ಮೆಚ್ಚುಗೆ ಗಳಿಸಿದೆ. ಸತೀಶ್ ಅರ್ಯನ್ ಸಂಗೀತ ಮತ್ತು ರವೀಂದ್ರ ಮುದ್ದಿ ಸಾಹಿತ್ಯ ಈ ಹಾಡಿನಲ್ಲಿದೆ.

2 ದಿನದಲ್ಲಿ 2 ಸಿನಿಮಾ ಹಾಡು ಹಾಡಿದ ಮೆಹಬೂಬ್ ಸಾಬ್!

Singer Deeksha Ramakrishna got the chance to sing in Sarkaar movie

ಅಂದಹಾಗೆ, 'ಸರಿಗಮಪ' ಸೀಸನ್ 13 ಕಾರ್ಯಕ್ರಮ ಉಳಿದ ಸ್ಪರ್ಧಿಗಳಾದ ಮೆಹಮೂಬ್ ಸಾಬ್ ಮತ್ತು ಸಂಚಿತ್ ಹೆಗ್ಡೆ ಈಗಾಗಲೇ ಸಿನಿಮಾ ಜರ್ನಿ ಶುರು ಮಾಡಿದ್ದಾರೆ. ಸಂಚಿತ್ ಹೆಗ್ಡೆ 'ಕಾಲೇಜ್ ಕುಮಾರ್', 'ಚಮಕ್', 'ಟಗರು' ಸೇರಿದಂತೆ ಸ್ಟಾರ್ ಸಿನಿಮಾಗಳ ಹಾಡಿಗೆ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯ ತಮ್ಮ ಸಂಗೀತ ನಿರ್ದೇಶನದಲ್ಲಿ ಮೆಹಬೂಬ್ ಸಾಬ್ ಮತ್ತು ಸಂಚಿತ್ ಹೆಗ್ಡೆ ಇಬ್ಬರಿಗೆ ಹಾಡುವ ಅವಕಾಶ ನೀಡಿದ್ದರು.

English summary
Zee Kannada channel's 'Sarigamapa Season 13' contestant Singer Deeksha Ramakrishna got the chance to sing in 'Sarkaar' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X