ಹಿನ್ನೆಲೆ ಗಾಯಕಿ ಡಾ 'ಶಮಿತಾ ಮಲ್ನಾಡ್' ಸಂದರ್ಶನ

ಓದಿದ್ದು ಡೆಂಟಲ್. ಹಿನ್ನೆಲೆ ಗಾಯನದಲ್ಲಿ ಇದ್ದರೂ ವೃತ್ತಿಯಲ್ಲಿ ಈಗಲೂ ಡೆಂಟಲ್ ಡಾಕ್ಟರ್. ಆದರೆ ಪ್ರವೃತ್ತಿ ಗಾಯನ. ಬರಬರುತ್ತಾ ವೃತ್ತಿಗಿಂತ ಪ್ರವೃತ್ತಿಯ ಕಡೆಗೆ ಒಲವು ಹೆಚ್ಚುವಂತೆ ನಡೆಯಿತು ಶಮಿತಾ ಜೀವನ. ಅವರ ಡಾಕ್ಟರ್ ಸೇವೆಗಿಂತ ಸಂಗೀತದ ಪ್ರತಿಭೆಗೇ ಹೆಚ್ಚು ಮನ್ನಣೆ ದೊರೆಯಿತು. ಡಾ ಶಮಿತಾ ಮಲ್ನಾಡ್ ಸಂಗೀತಕ್ಕೆ ಹೆಸರುವಾಸಿಯಾದರು, ಹಿನ್ನೆಲೆಗಾಯಕಿಯಾಗಿ ಮನೆಮಾತಾದರು. ಇಂಥ ಶಮಿತಾ ಮಲ್ನಾಡ್ 'ಒನ್ ಇಂಡಿಯಾ ಕನ್ನಡ'ದ ಶ್ರೀರಾಮ್ ಭಟ್ ಜೊತೆ ನಡೆಸಿದ ಮಾತುಕತೆ ಇಲ್ಲಿದೆ, ಓದಿ...
*ಹುಟ್ಟೂರು, ವಿದ್ಯಾಭ್ಯಾಸದ ಬಗ್ಗೆ ಹೇಳಿ...
ಶಿವಮೊಗ್ಗದ ತೀರ್ಥಹಳ್ಳಿ ನನ್ನ ಹುಟ್ಟೂರು. ಬೆಳೆದಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲೆ ಓದಿದ್ದು ಎಲ್ಲಾ ಕನಕಪುರದಲ್ಲಿ. ಅಪ್ಪ ಪ್ರೊ. ಯು ವಿ ರಾಮಚಂದ್ರ ಹಾಗೂ ಅಮ್ಮ ಎಚ್ ಜಿ ಸುನಂದಾ. ನಮ್ಮ ತಂದೆ ಕನಕಪುರದಲ್ಲಿ 'ಪ್ರಾಣಿಶಾಸ್ತ್ರ' ಪ್ರೊಫೆಸರ್ ಆಗಿದ್ದರು. ಹೀಗಾಗಿ ನನ್ನ ಪಿಯುಸಿ ವರೆಗಿನ ವಿದ್ಯಾಭ್ಯಾಸ ಕನಕಪುರದಲ್ಲಿ ನಡೆಯತು. ನಂತರ ಬೆಂಗಳೂರಿನಲ್ಲಿ ಹಾಸ್ಟೆಲ್ ನಲ್ಲಿದ್ದು ಡೆಂಟಲ್ ಮುಗಿಸಿದೆ.
ನನ್ನ ಪತಿ ಅರುಣ್ ಕುಮಾರ್ ಶೃಂಗೇರಿಯವರು, (ಸಾಫ್ಟ್ ವೇರ್ ಎಂಜಿನಿಯರ್). ಮಗ ಅದ್ವೈತ್ ಹೆಗಡೆ, ಮಗಳು ಷಡ್ಜ.
*ಸಂಗೀತ ಪ್ರಯಾಣ ಪ್ರಾರಂಭವಾದದ್ದು ಹೇಗೆ?
ನಾನು ಕನಕಪುರದಲ್ಲಿ ಓದುತ್ತಿದ್ದಾಗಲೇ ನಮ್ಮ ಮನೆಯ ಸಮೀಪದಲ್ಲೇ ಇದ್ದ ಆಕಾಶವಾಣಿ ಕಲಾವಿದರಾದ ಚಿಕ್ಕ ಮರಿಗೌಡ ಅವರಲ್ಲಿ ಸಂಗೀತಾಭ್ಯಾಸ (ವೋಕಲ್) ಮಾಡಿದ್ದೆ. ಶಾಲೆ-ಕಾಲೇಜುಗಳಲ್ಲಿದ್ದಾಗ ಹಾಡು, ಡಾನ್ಸ್ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹಳಷ್ಟು ಬಹುಮಾನ ಗಳಿಸಿದ್ದೆ. ಮುಂದಿನ ಪುಟ ನೋಡಿ...


Click it and Unblock the Notifications











